ಚೆನ್ನೈ: ಸಿನಿಮಾರಂಗದಲ್ಲಿನ ಕಲಾವಿದರ ವೈಯಕ್ತಿಕ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಗಾಸಿಪ್ ಗಳಾಗಿ ಹರಿದಾಡಿ ಚರ್ಚೆಗಳಾಗುತ್ತವೆ. ಕಾಲಿವುಡ್ ಕಿರುತೆರೆಯಲ್ಲಿ ಜನಪ್ರಿಯ ನಟಿಯೊಬ್ಬರ ಖಾಸಗಿ ವಿಡಿಯೋವೊಂದು ವೈರಲ್ ಆಗಿದೆ ಎನ್ನಲಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದೆ.
ತಮಿಳಿನ ʼಭಾಗ್ಯಲಕ್ಷ್ಮೀʼ ಧಾರಾವಾಹಿಯಿಂದ ಜನಪ್ರಿಯರಾಗಿ, ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡು, ʼತಮಿಳಾ- ತಮಿಳಾʼ ಟಾಕ್ ಶೋನಲ್ಲಿ ಮಿಂಚಿರುವ ನಟಿ ರೇಷ್ಮಾ ಸೋಶಿಯಲ್ ಮೀಡಿಯಾದಲ್ಲೂ ಸದಾ ಸಕ್ರಿಯರಾಗಿದ್ದಾರೆ.
ಇತ್ತೀಚೆಗೆ ರೇಷ್ಮಾ ಅಮೆರಿಕಾದಲ್ಲಿರುವಾಗ ಅವರ ತಂಗಿ, ಕರೆ ಮಾಡಿ ಖಾಸಗಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಎಂದಿದ್ದಾರೆ. ಆ ಖಾಸಗಿ ವಿಡಿಯೋ ನನ್ನದೆಂದು ತಂಗಿ ಹೇಳಿದ್ದಾಳೆ. ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ರೇಷ್ಮಾ ಅವರು ಇದರ ಸತ್ಯಾಸತ್ಯತೆಯನ್ನು ತಿಳಿದುಕೊಂಡು ಸ್ಪಷ್ಟನೆ ನೀಡಿದ್ದಾರೆ.
ಈ ವಿಡಿಯೋ ಲೀಕ್ ಆಗಿರುವ ಸಂದರ್ಭದಲ್ಲಿ ನನಗೆ ಯಾರೂ ಕೂಡ ಭಾಯ್ ಫ್ರೆಂಡ್ ಇರಲಿಲ್ಲ. ಆದರೂ ನನ್ನ ಖಾಸಗಿ ವಿಡಿಯೋ ಲೀಕ್ ಆಗಲು ಹೇಗೆ ಸಾಧ್ಯವೆಂದು ತಂಗಿಗೆ ಆ ವಿಡಿಯೋ ಲಿಂಕ್ ಕಳುಹಿಸಲು ಹೇಳಿದೆ. ಆ ಬಳಿಕ ನಿಜ ಸಂಗತಿ ಗೊತ್ತಾಯಿತು. ಯಾರೋ ನನ್ನ ಮುಖ ಮಾರ್ಫ್ ಮಾಡಿ ವಿಡಿಯೋದಲ್ಲಿ ವೈರಲ್ ಮಾಡಿದ್ದಾರೆ. ಮೊದಲಿಗೆ ನನ್ನ ತಂದೆ – ತಾಯಿಗೆ ಈ ವಿಚಾರದಿಂದ ಗಾಬರಿ ಆಯಿತು. ಬಳಿಕ ಸತ್ಯವನ್ನು ಹೇಳಿದ ಬಳಿಕ ಅವರು ಸಮಾಧಾನಗೊಂಡರು ಎಂದು ನಟಿ ರೇಷ್ಮಾ ಹೇಳುತ್ತಾರೆ.
ನನ್ನ ತಂದೆ ನಿರ್ಮಾಪಕರು, ನನ್ನ ಸಹೋದರ ನಟ ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದಿರುವ ನಮ್ಮ ಕುಟುಂಬ ಈ ರೀತಿಯ ಸುಳ್ಳು ವಿಚಾರಗಳನ್ನು ಹಬ್ಬಿಸಿವುದನ್ನು ನೋಡುವುದು ಇದು ಮೊದಲಲ್ಲ. ಆದರೆ ಸಾಮಾನ್ಯ ಮಹಿಳೆಗೆ ಹೀಗೆ ಆಗಿದ್ದರೆ ಏನು ಆಗುತ್ತಿತ್ತು ಎಂದಿದ್ದಾರೆ ನಟಿ.