Advertisement

Actress Rachika Suresh:ನಟಿ ರಚಿಕಾ ಈಗ ಮಿಸ್‌ ಇಂಡಿಯಾ ಟೀನ್‌

05:19 PM Oct 18, 2023 | Team Udayavani |

ಚಲನಚಿತ್ರ ನಟಿ ರಚಿಕಾ ಸುರೇಶ್‌ ಈಗ ಮಿಸ್‌ ಇಂಡಿಯಾ ಟೀನ್‌-2023 ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ಸಿನಿಮಾ ಹಾಗೂ ಮಾಡೆಲಿಂಗ್‌ ಎರಡೂ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ರಚಿಕಾ ಮೂಲತಃ ಶ್ರವಣಬೆಳಗೊಳದ ರೈತನ ಪುತ್ರಿ.

Advertisement

ಸಿನಿಮಾದ ಜೊತೆ ಮಾಡೆಲಿಂಗ್‌ ನಲ್ಲೂ ಗುರುತಿಸಿಕೊಂಡಿರುವ ನಟಿ ರಚಿಕಾ ಇತ್ತೀಚೆಗೆ ದಿಲ್ಲಿಯ ನೋಯ್ಡಾ ಫಿಲಂಸಿಟಿಯಲ್ಲಿ ನಡೆದ ಈ ಮಿಸ್‌ ಇಂಡಿಯಾ ಟೀನ್‌ ಸೌಂದರ್ಯ ಸ್ಪರ್ಧೆಯ ಕಿರೀಟ ಗೆದ್ದುಬಂದಿದ್ದಾರೆ. ಈ ಮಿಸ್‌ ಇಂಡಿಯಾ ಟೀನ್‌ ಸೌಂದರ್ಯ ಸ್ಪರ್ಧೆಯಲ್ಲಿ ಎಲ್ಲಾ ರಾಜ್ಯಗಳಿಂದ ಸುಮಾರು 18-20 ಜನ ಸ್ಪರ್ಧಾಳುಗಳು ಭಾಗವಹಿಸಿದ್ದರು. ‌

ಇದರಲ್ಲಿ ವೆಸ್ಟರ್ನ್ ಹಾಗೂ ಟ್ರೆಡಿಷನಲ್‌ ವೇರ್‌ ಹೀಗೆ ಮೂರ್ನಾಲ್ಕು ರೌಂಡ್ಸ್ ಗಳಿರುತ್ತವೆ. ಅಲ್ಲದೆ ಪ್ರಶ್ನೋತ್ತರದ ರೌಂಡ್‌ ಕೂಡ ಇರುತ್ತದೆ. ಮಾಡೆಲಿಂಗ್‌ ಜೊತೆಗೆ ಅಭಿನಯವನ್ನೂ ಮುಂದುವರೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next