Advertisement

ನೆಹರೂ – ಗಾಂಧಿ ಕುರಿತಾದ ಆಕ್ಷೇಪಾರ್ಹ ಹೇಳಿಕೆ ; ನಟಿ ಪಾಯಲ್ ಗೆ ಜೈಲು

09:45 AM Dec 17, 2019 | Hari Prasad |

ಬುಂಢಿ (ರಾಜಸ್ಥಾನ್): ಭಾರತದ ಮಾಜೀ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಮತ್ತು ಮಹಾತ್ಮ ಗಾಂಧಿ ಕುರಿತಾದಂತೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ ಆರೋಪದಲ್ಲಿ ಬಾಲಿವುಡ್ ನಟಿ ಪಾಯಲ್ ರೋಹ್ಟಗಿ ಅವರಿಗೆ ರಾಜಸ್ಥಾನದ ಸ್ಥಳೀಯ ನ್ಯಾಯಾಲವು ಡಿಸೆಂಬರ್ 24ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Advertisement

ಇದಕ್ಕೂ ಮೊದಲು ಬುಂಢಿ ಜಿಲ್ಲಾ ನ್ಯಾಯಾಲಯವು ಪಾಯಲ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆ ಬಳಿಕ ಈ ನಟಿಯನ್ನು ಗುಜರಾತ್ ನ ಅಹಮದಾಬಾದ್ ನಲ್ಲಿರುವ ಆಕೆಯ ಮನೆಯಿಂದ ರಾಜಸ್ಥಾನದ ವಿಶೇಷ ಪೊಲೀಸರ ತಂಡ ಬಂಧಿಸಿದ್ದಾರೆ.

ಪಾಯಲ್ ಅವರ ವಕೀಲರು ಜಾಮೀನು ಅರ್ಜಿಯ ಮೇಲೆ ವಾದ ಮಂಡಿಸುತ್ತಾ ತನ್ನ ಕಕ್ಷಿದಾರರು ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ತನ್ನ ಅಭಿಪ್ರಾಯವನ್ನು ಮಂಡಿಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂಬ ವಾದವನ್ನು ಮಂಡಿಸಿದ್ದರು.

ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ನೆಹರೂ ಮತ್ತು ಗಾಂಧೀ ಕುಟುಂಬದ ಕುರಿತಾಗಿ ಆಕ್ಷೇಪಾರ್ಹ ಸಂಗತಿಗಳನ್ನು ಒಳಗೊಂಡಿದ್ದ ವಿಡಿಯೋ ಒಂದನ್ನು ನಟಿ ಪಾಯಲ್ ಅವರು ಫೇಸ್ ಬುಕ್ಕಲ್ಲಿ ಅಪ್ಲೋಡ್ ಮಾಡಿದ್ದರು ಮತ್ತು ಈ ಕುರಿತಾಗಿ ರಾಜಸ್ಥಾನ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಛರ್ಮೇಶ್ ಶರ್ಮಾ ಅವರು ನಟಿ ವಿರುದ್ಧ ದೂರು ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next