Advertisement

ನಟಿ ಪಾರ್ವತಿ ವಿರುದ್ಧ ಅಸಭ್ಯ ವರ್ತನೆ: ವ್ಯಕ್ತಿ ಸೆರೆ

07:10 AM Dec 28, 2017 | Harsha Rao |

ಕೊಚ್ಚಿ: ಕನ್ನಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ “ಮಿಲನ’, “ಪೃಥ್ವಿ’ ಚಿತ್ರದಲ್ಲಿ ನಟಿಸಿದ್ದ ಮಲಯಾಳಂ ನಟಿ ಪಾರ್ವತಿ ಮೆನನ್‌ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡಿ ಟ್ರೋಲ್‌ ಮಾಡಿದ ಆರೋಪದ ಮೇರೆಗೆ ಎರ್ನಾಕುಳಂ ದಕ್ಷಿಣ ವಿಭಾಗದ ಪೊಲೀಸರು ವಡಕ್ಕಂಚೇರಿಯ ಪಿಂಟು(23) ಎಂಬ  ಯುವಕನನ್ನು ಬಂಧಿಸಿದ್ದಾರೆ. 

Advertisement

ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಟೀಕಿ ಸಿದ್ದಾಗಿ, ಮಂಗಳವಾರ ಪಾರ್ವತಿ ಮೆನನ್‌ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ, ಈ ಯುವಕನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್‌ 507 (ನೈಜ ಗುರುತು ಮರೆಮಾಚಿ ಕ್ರಿಮಿನಲ್‌ ಸಂಚು) ಹಾಗೂ 509 (ಮಹಿಳೆಯ ವಿರುದ್ಧ ಅಸಭ್ಯ ವರ್ತನೆ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜತೆಗೆ, ಆತನನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮುಂದೆ ಹಾಜರುಪಡಿಸಲಾಗಿದ್ದು, ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next