ತನ್ನ ಕಿರುನಗೆ ಹಾಗೂ ಮೋಹಕ ಸೌಂದರ್ಯದಿಂದ ಈಗಾಗಲೇ ಮನೆಮಾತಾ ಗಿರುವ ತುಳುನಾಡಿನ ಚೆಂದುಳ್ಳಿ ಚೆಲುವೆ ನಿರೀಕ್ಷಾ ಶೆಟ್ಟಿ ಕೋಸ್ಟಲ್‌ವುಡ್‌ಗೆ ಈಗಾಗಲೇ ಎಂಟ್ರಿಕೊಟ್ಟು ಸಕತ್ತಾಗಿ ಸುದ್ದಿ ಯಾಗುತ್ತಿದ್ದಾರೆ. ಸುಳ್ಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವ ನಿರೀಕ್ಷಾ ಶೆಟ್ಟಿ “ಅಪ್ಪೆ ಟೀಚರ್’ ಸಿನೆಮಾದ ಮೂಲಕ ತನ್ನ ಜರ್ನಿಯನ್ನು ಆರಂಭಿಸಿದ್ದಾರೆ. ಇದರಿಂದ ಭಾರೀ ನಿರೀಕ್ಷೆ ಮೂಡಿಸಿದ ಮಾ. 23ರಂದು ತೆರೆ ಕಂಡ ಕಿಶೋರ್ ಮೂಡಬಿದ್ರೆ ಅವರ “ಅಪ್ಪೆ ಟೀಚರ್’ ಸಿನೆಮಾದ ಮೂಲಕ ಕೋಸ್ಟಲ್‌ವುಡ್‌ಗೆ ಓರ್ವ ಹೊಸ ಮತ್ತು ಪ್ರತಿಭಾನ್ವಿತ ನಾಯಕಿಯ ಪರಿಚಯವಾದ್ದಂತಾಗಿದೆ.
ಈಗಾಗಲೇ ಬೇರೆ ಬೇರೆ ಕ್ಷೇತ್ರಗಳಲ್ಲಿ ಗಮನ ಸೆಳೆದಿರುವ ಈ ನಾಯಕಿ ಸಿನೆಮಾ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯಾಗಿರುವ ಈಕೆ ಅದ್ಭುತ ನೃತ್ಯ ಕಲಾವಿದೆಯೂ ಹೌದು. ಇದನ್ನು ಅಪ್ಪೆ ಟೀಚರ್ ಚಿತ್ರದ ಮೂಲಕ ಸಾಭೀತುಪಡಿಸಿದ್ದಾರೆ. ವಿವಿಧ ಪ್ರಕಾರಗಳ ನೃತ್ಯಗಳಲ್ಲಿ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರು ಕ್ರೀಡೆಯಲ್ಲೂ ಮುಂದಿದ್ದಾರೆ. 10 ನೇ ತರಗತಿಯಲ್ಲಿರುವಾಗಲೇ ಶಾಲೆಯ ಹಾಕಿ ತಂಡವನ್ನು ಮಹಾರಾಷ್ಟ್ರದ ಮರಾಠಿ ಮಣ್ಣಿಗೆ ಕೊಂಡೊಯ್ದು ಅದರ ನಾಯಕಿಯಾಗಿ ಗಮನ ಸೆಳೆದಿದ್ದರು.
ಹಲವಾರು ಸೌಂದರ್ಯ ಸ್ಪರ್ಧೆಗಳಲ್ಲೂ ಮಿಂಚಿರುವ ಪ್ರಮುಖ ವೇದಿಕೆಗಳಲ್ಲಿ ಕ್ಯಾಟ್‌ವಾಕ್ ಮಾಡಿ ತನ್ನ ಪ್ರತಿಭೆಯನ್ನು ಸಾಭೀತು ಮಾಡಿದವರು. ಸೌಂದರ್ಯ ಸ್ಪರ್ಧೆಯ ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿ ಮತ್ತು ಬಹುಮಾನ ಪಡೆದಿರುವ ಇವರು ಪ್ರಸ್ತುತ “ಅಪ್ಪೆ ಟೀಚರ್’ ಸಿನೆಮಾದ ಮೂಲಕ ನಟಿಯಾಗಿ ತನ್ನ ಅಭಿಮಾನಿಗಳ ಮನಗೆದ್ದಿರುವುದು ಸುಳ್ಳಲ್ಲ. ಸಿನೇಮಾದಲ್ಲಿ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಇವರು, ಒಂದು ಸೂ¾ತ್ ರೋಲ್ ಮತ್ತೂಂದು ಟಫ್ ರೋಲ್‌ನಲ್ಲಿ ಮಿಂಚಿದ್ದಾರೆ. ಎರಡೂ ವಿಭಿನ್ನ ರೀತಿಯ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿರುವ ಇವರು ತುಳು ಸಿನೆಮಾ ರಂಗಕ್ಕೆ ಸಿಕ್ಕಿರುವ ಹೊಸ ನಾಯಕಿ ಮತ್ತು ಭರವಸೆಯ ಕಲಾವಿದೆಯಾಗಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ಮುಂಬಯಿಯ ಲೊರೆಟ್ಟೊ ಕಾನ್ವೆಂಟ್‌ನಲ್ಲಿ ಪೂರೈಸಿರುವ ನಿರೀಕ್ಷಾ ಶೆಟ್ಟಿ ಇವರು ಪುತ್ತೂರಿನ ಸುದಾನ ರೆಸಿಡೆನ್ಶಿಯಲ್ ಮತ್ತು ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಎನ್ನೆಸ್ಸೆಸ್‌ನಲ್ಲೂ ಉತ್ತಮ ಸಾಧನೆ ಮಾಡಿರುವ ಇವರು ಕಳೆದ ಗಣರಾಜ್ಯೋತ್ಸವದಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಪರೇಡ್‌ನಲ್ಲಿ ಭಾಗವಹಿಸಿದ ಪ್ರತಿಭೆ. ಮೂಲತಃ ಪುತ್ತೂರಿನವರಾಗಿರುವ ಇವರು ಅರ್ಕುಳ ದೇವಸ್ಯ ಚಿತ್ತರಂಜನ್ ಶೆಟ್ಟಿ ಮತ್ತು ಕಿನ್ನಿಗೋಳಿ ಅಡ್ರಗುತ್ತು ಸುಜಾತಾ ದಂಪತಿಯ ಪುತ್ರಿ.