ಹೊಸದಿಲ್ಲಿ : ಮಾಜಿ ಸೌಂದರ್ಯ ರಾಣಿ, ಹಿರಿಯ ನಟಿ ನಫೀಸಾ ಅಲಿ ಅವರು ಮೂರನೇ ಹಂತದ ಕ್ಯಾನ್ಸರ್ ಗೆ ತಾನೀಗ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಬಹಿರಂಗಪಡಿಸುವ ಮೂಲಕ ಈಚೆಗೆ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.
ಇನ್‌ಸ್ಟಾಗ್ರಾಂ ನಲ್ಲಿ ತನ್ನ ಸರಣಿ ಚಿತ್ರಗಳನ್ನು ಹಾಕಿರುವ ನಫೀಸಾ ಅವರು ತಮಗೆ ಪೆರಿಟೋನಿಯಲ್ ಮತ್ತು ಒವೇರಿಯನ್ ಕ್ಯಾನ್ಸರ್ ಇರುವುದನ್ನು ಬಹಿರಂಗಪಡಿಸಿದ್ದಾರೆ ಮತ್ತು ಇದರ ಚಿಕಿತ್ಸೆಗೆ ದೀರ್ಘ ಕಾಲ ತಗಲುವುದೆಂದು ಹೇಳಿದ್ದಾರೆ.
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆಗಿನ ಫೋಟೋ ಇನ್‌ಸ್ಟಾಗ್ರಾಂ ಗೆ ಹಾಕಿರುವ ನಫೀಸಾ ಅವರು ಸೋನಿಯಾ ಅವರ ಶುಭ ಹಾರೈಕೆಗಳನ್ನು ಸ್ಮರಿಸಿಕೊಂಡಿದ್ದಾರೆ.
ನಫೀಸಾ ಅವರೊಂದಿಗೆ ಬದುಕಿನ ಈ ನಿರ್ಣಾಯಕ ಘಟ್ಟದಲ್ಲಿ ಅವರ ಇಡಿಯ ಕುಟುಂಬವೇ ಅವರ ಜತೆಗಿದೆ. ನಫೀಸಾ ಅವರು 1979ರಲ್ಲಿ ಶಶಿ ಕಪೂರ್ ಜತೆಗೆ ಜುನೂನ್ ಚಿತ್ರದಲ್ಲಿ ನಟಿಸಿ ಚಿತ್ರರಂಗ ಪ್ರವೇಶಿಸಿದ್ದರು.