Advertisement

ರಾಜಕೀಯ ಮರು ಪ್ರವೇಶ : ಬಿಜೆಪಿ ಸೇರಿದ ಚಿತ್ರ ನಟಿ ಮೌಷಮಿ ಚಟರ್ಜಿ

02:02 PM Jan 02, 2019 | udayavani editorial |

ಹೊಸದಿಲ್ಲಿ : ಮಾಜಿ ಚಿತ್ರ ನಟಿ  ಮೌಷಮಿ ಚಟರ್ಜಿ ಅವರು ಇಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡರು. 

Advertisement

ಮೌಷಮಿ ಅವರಿಗೆ ರಾಜಕೀಯ ರಂಗದಲ್ಲಿ ಎರಡನೇ ಇನ್ನಿಂಗ್ಸ್‌. 2004ರಲ್ಲಿ ಅವರು ಕಾಂಗ್ರೆಸ್‌ ಟಿಕೆಟ್‌ ಮೂಲಕ ಕೋಲ್ಕತ ಈಶಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 

ಇಂದು ಮೌಷಮಿ ಅವರು ಬಿಜೆಪಿಯ ಪ್ರದಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು. 

ಮೌಷಮಿ ಚಟರ್ಜಿ ಅವರು 1948ರ ಎಪ್ರಿಲ್‌ 26ರಂದು ಕೋಲ್ಕತದಲ್ಲಿ ಜನಿಸಿದ್ದರು. 1967ರಲ್ಲಿ ಆಕೆಯ ಬಾಲಿಕಾ ವಧು ಬಂಗಾಲಿ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರ ಬದುಕು ಆರಂಭಿಸಿದ್ದರು. 1972ರಲ್ಲಿ ಶಕ್ತಿ ಸಾಮಂತ್‌ ಅವರ ಸೂಪರ್‌ ಹಿಟ್‌ ಚಿತ್ರ ಅನುರಾಗ್‌ ನಲ್ಲಿ ನಟಿಸಿ ಹಿಂದಿ ಚಿತ್ರರಂಗ ಪ್ರವೇಶಿಸಿದ್ದರು. ಚೊಚ್ಚಲ ಬಾಲಿವುಡ್‌ ಚಿತ್ರ ನಟನೆಗೆ ಫಿಲ್ಮ್ ಫೇರ್‌ ಪ್ರಶಸ್ತಿ ಪಡೆದ ಕೆಲವೇ ಕೆಲವು ನಟಿಯಲ್ಲಿ ಮೌಷಮಿ ಒಬ್ಬರು. 

ಮೌಷಮಿ ಅವರು ಅನೇಕ ಸೂಪರ್‌ ಹಿಟ್‌ ಚಿತ್ರಗಳಲ್ಲಿ ನಟಿಸಿದ್ದು ಅವುಗಳಲ್ಲಿ ರೋಟಿ ಕಪಡಾ ಔರ್‌ ಮಕಾನ್‌, ಬೇನಾಮ್‌ , ಮಂಜಿಲ್‌ ಚಿತ್ರಗಳು ಸೇರಿವೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next