Advertisement

ನಟನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ : ನಟಿ ಮೀಶಾಗೆ 3 ವರ್ಷ ಜೈಲು ಶಿಕ್ಷೆ

02:55 PM Mar 15, 2021 | Team Udayavani |

ನವದೆಹಲಿ : ನಟ ಮತ್ತು ಗಾಯಕ ಅಲಿ ಜಾಫರ್ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಪಾಕ್ ಮೂಲದ ಗಾಯಕಿ ಹಾಗೂ ಬಾಲಿವುಡ್ ಚಿತ್ರನಟಿ ಮಿಶಾ ಶಫಿ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

Advertisement

2018 ರಲ್ಲಿ ವಿಶ್ವಾದ್ಯಂತ ಶುರುವಾಗಿದ್ದ ‘ಮೀಟೂ’ ಅಭಿಯಾನದ ವೇಳೆ ಮಿಶಾ ಶಫಿ, ಅಲಿ ಜಾಫರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಹಾಡು ರೆಕಾರ್ಡಿಂಗ್ ವೇಳೆ ಸ್ಟುಡಿಯೋದಲ್ಲಿ ಜಾಫರ್ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಆರೋಪ ಮಾಡಿದ್ದರು. ಈ ಆರೋಪ ಅಲ್ಲಗಳೆದಿದ್ದ ಅಲಿ, ಶಫಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಗಾಯಕಿ ಮಿಶಾ ವಿರುದ್ಧ ಜಾಫರ್ ನಡೆಸಿದ್ದ ಕಾನೂನಾತ್ಮಕ ಹೋರಾಟದಲ್ಲಿ ಇದೀಗ ಜಯ ಸಿಕ್ಕಿದೆ. ಈ ಪ್ರಕರಣದ ವಿಚಾರಣೆ ನಡೆಸಿರುವ ಪಾಕ್ ನ್ಯಾಯಾಲಯ, ಶಫಿ ಆರೋಪ ಆಧಾರ ರಹಿತ ಎಂದು ಹೇಳಿದೆ. ಸುಳ್ಳು ಆರೋಪ ಮಾಡಿ, ವ್ಯಕ್ತಿಯೊಬ್ಬರ ಗೌರವಕ್ಕೆ ಚ್ಯುತಿ ತರಲು ಪ್ರಯತ್ನಿಸಿದ ಕೃತ್ಯಕ್ಕೆ ಮೂರು ವರ್ಷಗಳ ವರೆಗೆ ಕಾರಾಗೃಹದ ಶಿಕ್ಷೆ ಪ್ರಕಟಿಸಿದೆ. ನ್ಯಾಯಾಲಯದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿರುವ ಶಫಿ, ಈ ಸಮಾಜದದಲ್ಲಿ ಇಂತಹ ಪ್ರಕರಣಗಳಲ್ಲಿ ಯಾವ ಮಹಿಳೆಗೆ ನ್ಯಾಯ ಸಿಕ್ಕಿದೆ ಹೇಳಿ ಎಂದು ಪ್ರಶ್ನಿಸಿದ್ದಾರೆ.

ಇನ್ನು ಕಾನೂನು ಹೋರಾಟದಲ್ಲಿ ತಮಗೆ ಸಿಕ್ಕಿರುವ ಜಯದ ಬಗ್ಗೆ ಮಾತಾಡಿರುವ ಅಲಿ, ನನ್ನ ಮೇಲಿನ ಆರೋಪವನ್ನು ಕಾನೂನು ಮೂಲಕ ಸುಳ್ಳಾಗಿಸುವುದು ನನ್ನ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಆಕೆಯ ಮೇಲೆ ಯಾವುದೇ ಆರೋಪ, ಹೇಳಿಕೆಗಳನ್ನು ನೀಡಲಿಲ್ಲ. ಬದಲಾಗಿ ನ್ಯಾಯಾಲಯದ ಮೊರೆ ಹೋದೆ. ಕೊನೆಗೂ ಸತ್ಯಕ್ಕೆ ಜಯ ಸಂದಿದೆ ಎಂದಿದ್ದಾರೆ.  ಇನ್ನು ಬಾಲಿವುಡ್‍ನ ‘ಭಾಗ್ ಮಿಲ್ಕಾ ಭಾಗ್’ ಸಿನಿಮಾಗಳಲ್ಲಿ ಮಿಶಾ ಶಫಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next