Advertisement

Manvita Kamath: ಬ್ಯಾಡ್‌ ಗರ್ಲ್ ಮಾನ್ವಿತಾ ; ಬೋಲ್ಡ್‌ ಪಾತ್ರದಲ್ಲಿ ನಟಿಸಲು ರೆಡಿ

06:15 PM Aug 07, 2023 | Team Udayavani |

“ಟಗರು’ ಚಿತ್ರದ ಮೂಲಕ ಸಖತ್‌ ಬೋಲ್ಡ್‌ ನಟಿ ಎನಿಸಿಕೊಂಡ ಮಾನ್ವಿತಾ ಕಾಮತ್‌ ಈಗ “ಬ್ಯಾಡ್‌’ ಚಿತ್ರತಂಡ ಸೇರಿದ್ದಾರೆ. ಈ ಮೂಲಕ ಮತ್ತೆ ಸಿನಿಮಾದಲ್ಲಿ ಆ್ಯಕ್ಟಿವ್‌ ಆಗುತ್ತಿದ್ದಾರೆ. ತಾಯಿಯನ್ನು ಕಳೆದುಕೊಂಡ ನೋವಿನಲ್ಲಿರುವ ಮಾನ್ವಿತಾ ಆ ನೋವಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದು, ನಿಧಾನವಾಗಿ ಒಳ್ಳೆಯ ಕಥೆಗಳಿರುವ ಸಿನಿಮಾಗಳತ್ತ ಗಮನ ಹರಿಸಿರುವುದು ಸುಳ್ಳಲ್ಲ. “ಟಗರು’ ನಂತರ ಸಾಕಷ್ಟು ಅವಕಾಶಗಳು ಮಾನ್ವಿತಾ ಅವರನ್ನು ಹುಡುಕಿಬಂದರೂ ತಮ್ಮ ಓದಿಗಾಗಿ ಸಿನಿಮಾಗಳಿಂದ ಸ್ವಲ್ಪ ದೂರವೇ ಉಳಿದಿದ್ದರು ಮಾನ್ವಿತಾ. ಸದ್ಯ ಮಾನ್ವಿತಾ “ಬ್ಯಾಡ್‌’ ಹಾಗೂ ಇನ್ನೊಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Advertisement

“ಬ್ಯಾಡ್‌’ ಚಿತ್ರದ ಕುರಿತು ಮಾತನಾಡುವ ಮಾನ್ವಿತಾ, “ನನಗೆ ಬ್ಯಾಡ್‌ ಚಿತ್ರದ ಪಾತ್ರ ಬಹಳ ಇಷ್ಟವಾಯಿತು. ಪವಿತ್ರ ಎಂಬುದು ನನ್ನ ಪಾತ್ರದ ಹೆಸರು. ಯಾವುದಕ್ಕೂ ಅಂಜದ, ಬೋಲ್ಡ್‌ ಹುಡುಗಿಯ ಪಾತ್ರ ನನ್ನದು. ಈ ಹಿಂದೆ ನಿರ್ದೇಶಕ ಸೂರಿ ಅವರು ಕಾಸ್ಟೂéಮ್ಸ್‌ ಇದೇ ರೀತಿ ಇರಬೇಕು ಎಂದು ಆಸಕ್ತಿ ತೋರಿಸುತ್ತಿದ್ದರು. ಅದೇ ರೀತಿ ಪಿ.ಸಿ.ಶೇಖರ್‌ ಅವರು ಕೂಡ ಕಾಸ್ಟೂéಮ್ಸ್‌ ಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎನ್ನುವುದು ಮಾನ್ವಿತಾ ಮಾತು. ನಿರ್ದೇಶಕ ಪಿ.ಸಿ.ಶೇಖರ್‌ ಕೂಡಾ ಮಾನ್ವಿತಾ ಅವರ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

“ತುಂಬಾ ಬೋಲ್ಡ್‌ ಕ್ಯಾರೆಕ್ಟರ್‌ ಅವರದು. ವಿಲೇಜ್‌ ಬ್ಯಾಕ್‌ಡ್ರಾಪ್‌ನಲ್ಲಿ ಅವರ ಸ್ಟೋರಿ ಸಾಗುತ್ತಾ ಹೋಗುತ್ತದೆ. ಕಾಮ, ಕ್ರೋಧ ಸೇರಿದಂತೆ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳು ನಮ್ಮ ಚಿತ್ರದಲ್ಲಿದೆ. ಈ ಆರು ಪಾತ್ರಗಳಲ್ಲದೆ ಇನ್ನೊಂದು ಪಾತ್ರ ಕೂಡ ಇದೆ. ಆ ಪಾತ್ರದಲ್ಲಿ ಮಾನ್ವಿತ ಅಭಿನಯಿಸುತ್ತಿದ್ದಾರೆ’ ಎನ್ನುವುದು ಶೇಖರ್‌ ಮಾತು.

ಖುಷಿ ಖುಷಿಯಲಿ..

ಸೂರಿ ನಿರ್ದೇಶನದ “ಕೆಂಡಸಂಪಿಗೆ’ ಮೂಲಕ ಚಿತ್ರರಂಗಕ್ಕೆ ಬಂದ ಮಾನ್ವಿತಾಗೆ ಎರಡನೇ ಸಿನಿಮಾಕ್ಕೆ ಶಿವರಾಜ್‌ಕುಮಾರ್‌ ಅವರಂತಹ ಸ್ಟಾರ್‌ ನಟನ   ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಇದು ಮಾನ್ವಿತಾಗೂ ಖುಷಿ ಇದೆ.  “ನಾನೊಬ್ಬ ಲಕ್ಕಿ ಹುಡುಗಿ. ಫೇಸ್‌ಬುಕ್‌ ಫೋಟೋ ಮೂಲಕವೇ ನಟಿಯಾಗಿ ಆಯ್ಕೆಯಾದವಳು. ಸೋ, ಇಲ್ಲಿ ಮೊದಲ ಸಿನಿಮಾ ಹಿಟ್‌ ಆಯ್ತು. ಎರಡನೇ ಸಿನಿಮಾವೇ ಸ್ಟಾರ್‌ ಜತೆ ನಟಿಸುತ್ತಿದ್ದೇನೆ. ಒಳ್ಳೇ ಸಿನಿಮಾಗಳ ಅವಕಾಶವೂ ಬರುತ್ತಿದೆ.

Advertisement

ಇಷ್ಟೆಲ್ಲಾ ಇದ್ದ ಮೇಲೆ, ಖುಷಿ ಅಲ್ಲದೆ ಮತ್ತೇನು? ಅವಕಾಶಕ್ಕಾಗಿ ಎಷ್ಟೋ ಹುಡುಗಿಯರು, ಫೋಟೋ ಶೂಟ್‌ ಮಾಡಿಸಿಕೊಂಡು ಅಲೆದಾಡಿದರೂ ಅವಕಾಶ ಸಿಗಲ್ಲ. ಅಂಥದರಲ್ಲಿ ನನಗೆ ಒಳ್ಳೇ ಅವಕಾಶ ಸಿಕ್ಕಿದೆ ಅಂದಮೇಲೆ ಖುಷಿ ಹೊರತು ಬೇರೇನೂ ಇಲ್ಲ’ ಎನ್ನುತ್ತಾರೆ. ಎಲ್ಲಾ ನಟಿಯರಂತೆ ಮಾನ್ವಿತಾ ಕೂಡಾ ಸವಾಲಿನ ಪಾತ್ರಕ್ಕೆ ಎದುರು ನೋಡುತ್ತಿದ್ದೇನೆ. “ನನಗೆ ಚಾಲೆಂಜಿಂಗ್‌ ರೋಲ್‌ ಇಷ್ಟ. ಕಾಲೇಜು ದಿನಗಳಲ್ಲಿ ಸ್ಟೇಜ್‌ ಶೋ ಕೊಟ್ಟವಳು. ಇಂಥದ್ದೇ ಪಾತ್ರ ಅಂತೇನೂ ಇಲ್ಲ. ನಟಿಯಾಗಿ ಎಂಥಾ ಪಾತ್ರ ಮಾಡುವುದಕ್ಕಾದರೂ ಸೈ’ ಎನ್ನಲು ಮರೆಯುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next