Advertisement

ಮುಂದುವರೆದ ‘ಅಮೃತಮತಿ’ ಪ್ರಶಸ್ತಿ ಬೇಟೆ: ಕನ್ನಡತಿ ಹರಿಪ್ರಿಯಾಗೆ ಹಾಲಿವುಡ್ ಪ್ರಶಸ್ತಿ

01:56 PM Jul 08, 2021 | Team Udayavani |

ಬೆಂಗಳೂರು : ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರದ ಅಭಿನಯಕ್ಕಾಗಿ ಕನ್ನಡದ ನಟಿ ಹರಿಪ್ರಿಯಾ ಅವರಿಗೆ ಹಾಲಿವುಡ್ ನ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ.

Advertisement

ಇಂಚರ ಪುಟ್ಟಣ್ಣ ಪ್ರೊಡಕ್ಷನ್ಸ್‌ ಮೂಲಕ ನಿರ್ಮಾಣಗೊಂಡಿರುವ ‘ಅಮೃತಮತಿ’ ಚಿತ್ರ ಹತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗಳಲ್ಲಿ ಪ್ರದರ್ಶನ ಕಂಡಿದೆ. ಇದೀಗ ‘ಹಾಲಿವುಡ್ ಇಂಟರ್‌ನ್ಯಾಷನಲ್ ಗೋಲ್ಡನ್ ಏಜ್ ಚಿತ್ರೋತ್ಸವ’ದಲ್ಲಿ ಪ್ರದರ್ಶನ ಕಂಡಿದ್ದು, ನಟಿ ಹರಿಪ್ರಿಯಾಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಲಭಿಸಿದೆ.

ಹರಿಪ್ರಿಯಾ ಈ ಹಿಂದೆ ನೋಯ್ಡಾದ ನಾಲ್ಕನೇ ಭಾರತೀಯ ವಿಶ್ವ ಸಿನಿಮೋತ್ಸವದಲ್ಲಿಯೂ ಅಮೃತಮತಿ ಚಿತ್ರದಲ್ಲಿನ ನಟನೆಗಾಗಿ ‘ಶ್ರೇಷ್ಠ ನಟಿ’ ಪ್ರಶಸ್ತಿಗೆ ಭಾಜನರಾಗಿದ್ದರು. ಒಟ್ಟು ಮೂರು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅವರು ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದಾರೆ.

‘ಅಮೃತಮತಿ’ಗೆ ಪ್ರಶಸ್ತಿಗಳ ಗೊಂಚಲು

ಅಟ್ಲಾಂಟ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಶ್ರೇಷ್ಠ ವಿದೇಶಿ ಭಾಷೆಯ ಚಿತ್ರ’ ಪ್ರಶಸ್ತಿ ಅಮೃತಮತಿ ಸಿನಿಮಾಕ್ಕೆ ಲಭಿಸಿತ್ತು. ಲಾಸ್ ಏಂಜಲೀಸ್ ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಶ್ರೇಷ್ಠ ಚಿತ್ರ’ ಮತ್ತು ‘ಶ್ರೇಷ್ಠ ಚಿತ್ರಕತೆ’ ಪ್ರಶಸ್ತಿ ಲಭಿಸಿತ್ತು. ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ವಿಶೇಷ ಚಿತ್ರ ಮನ್ನಣೆಗೆ ಚಿತ್ರ ಪಾತ್ರವಾಗಿತ್ತು.

Advertisement

ಕನ್ನಡದ ಕವಿ ಜನ್ನ ರಚಿಸಿರುವ ‘ಯಶೋಧರಚರಿತೆ’ ಕಾವ್ಯವನ್ನು ಆಧರಿಸಿ ಅಮೃತಮತಿ ಸಿನಿಮಾ ತಯಾರಾಗಿದೆ. ಬರಗೂರು ರಾಮಚಂದ್ರಪ್ಪ ಅವರು ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ. ಸಂಕಲನಕಾರರಾಗಿ ಸುರೇಶ ಅರಸು, ಛಾಯಾಗ್ರಾಹಕರಾಗಿ ನಾಗರಾಜ ಆದವಾನಿ, ಸಂಗೀತ ನಿರ್ದೇಶಕರಾಗಿ ಶಮಿತಾ ಮಲ್ನಾಡ್ ಕಾರ್ಯ ನಿರ್ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next