Advertisement

Brinda Acharya: ನಿರೂಪ್‌ಗೆ ಬೃಂದಾ ಆಚಾರ್ಯ ನಾಯಕಿ

02:01 PM Dec 27, 2023 | Team Udayavani |

ಪ್ರೇಮ್‌ ಅಭಿನಯದ “ಪ್ರೇಮಂ ಪೂಜ್ಯಂ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಅಂಗಳಕ್ಕೆ ಕಾಲಿಟ್ಟ ಹುಡುಗಿ ಬೃಂದಾ ಆಚಾರ್ಯ. ಮೊದಲ ಸಿನಿಮಾದಲ್ಲೇ ತನ್ನ ಅಂದ ಮತ್ತು ಅಭಿನಯದ ಮೂಲಕ ಸಿನಿಮಂದಿಯ ಗಮನ ಸೆಳೆದಿರುವ ಬೃಂದಾ ಆಚಾರ್ಯ ಈಗ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಮೂಲಕ ಕನ್ನಡ ಚಿತ್ರರಂಗದ ಭರವಸೆಯ ನಾಯಕ ನಟಿಯರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

Advertisement

ಇತ್ತೀಚೆಗಷ್ಟೇ ಡಾರ್ಲಿಂಗ್‌ ಕೃಷ್ಣ ಅಭಿನಯದ “ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಬೃಂದಾ, ಹೊಸ ವರ್ಷಕ್ಕೆ ಮತ್ತೆ ಮೂರು-ನಾಲ್ಕು ವಿಭಿನ್ನ ಸಿನಿಮಾಗಳಲ್ಲಿ ನಾಯಕಿಯಾಗಿ ಹೊಸ ಲುಕ್‌ನಲ್ಲಿ ಎಂಟ್ರಿ ಕೊಡುವ ತಯಾರಿಯಲ್ಲಿದ್ದಾರೆ. ನಿರೂಪ್‌ ಭಂಡಾರಿ ನಾಯಕರಾಗಿರುವ ಹೊಸ ಚಿತ್ರಕ್ಕೆ ಬೃಂದಾ ನಾಯಕಿಯಾಗಿ ಆಯ್ಕೆಯಾಗಿ ದ್ದಾರೆ. ಯುವ ಪ್ರತಿಭೆ ಸಚಿನ್‌ ವಾಲಿ ನಿರ್ದೇಶನದ ಚಿತ್ರವಿದು.

ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್‌ಟೈನರ್‌ ಕಥಾಹಂದರ ಹೇಳಲು ಸಚಿನ್‌ ಹೊರಟ್ಟಿದ್ದಾರೆ. ಈ ಸಿನಿಮಾಗೆ ಅಂಕೆತ್‌ ಸಿನಿಮಾಸ್‌ ಅಡಿಯಲ್ಲಿ ಅಂಕಿತ್‌ ಸೋನಿಗಾರ ಚಿತ್ರ ನಿರ್ಮಿಸಿಸುತ್ತಿದ್ದು, ಪ್ರಶಾಂತ್‌ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ.

ಸಚಿನ್‌ ಬಸ್ರೂರ್‌ ಸಂಗೀತ, ಸಂದೀಪ್‌ ವಲ್ಲೂರಿ ಛಾಯಾಗ್ರಹಣ, ಉಜ್ವಲ್‌ ಚಂದ್ರ ಸಂಕಲನ, ಉಲ್ಲಾಸ್‌ ಹೈದೂರು ಕಲಾ ನಿರ್ದೇಶನ ಈ ಚಿತ್ರಕ್ಕಿದೆ ಬೃಂದಾ ನಟಿಸಿರುವ “ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾ ಬಿಡುಗಡೆಯಾಗಿ ಹಿಟ್‌ ಲಿಸ್ಟ್‌ ಸೇರಿದೆ. ಇದರ ನಡುವೆ “ರೀತು’ ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲೂ ನಾಯಕಿಯಾಗಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

ಈಗಾಗಲೇ ಈ ಸಿನಿಮಾದ ಮುಹೂರ್ತ ನೆರವೇರಿದ್ದು, ಸಿನಿಮಾದ ಚಿತ್ರೀಕರಣ ಕೂಡ ಭರದಿಂದ ನಡೆಯುತ್ತಿದೆ. ಕೆಲ ವರ್ಷಗಳ ಹಿಂದೆ ಮಂಡ್ಯದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಬೃಂದಾ ಆಚಾರ್ಯ ಮಂಡ್ಯ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದ ಲ್ಲದೇ ದೀಕ್ಷಿತ್‌ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾ “ಬ್ಯಾಂಕ್‌ ಆಫ್ ಭಾಗ್ಯಲಕ್ಷ್ಮೀ’, ಎಕ್ಸ್‌ ಅಂಡ್‌ ವೈ, ಒಂದ್ಸಲ ಮೀಟ್‌ ಮಾಡೋಣ ಚಿತ್ರಗಳಲ್ಲೂ ಬೃಂದಾ ಆಚಾರ್ಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.