ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ಹೊಸ ವರ್ಷದಂದು ಸೋಶಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ತಾವು ತಾಯಿ ಆಗಲಿರುವ ಸಂತಸದ ವಿಚಾರವನ್ನು ಫೋಟೋ ಹಂಚಿಕೊಂಡು ಹೇಳಿದ್ದಾರೆ.
ಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ “ಅಮ್ಮ”. ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ “ಅಮ್ಮ” ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ “ಅಮ್ಮ” 2024 ಕ್ಕೆ ನಾನು ” ಅಮ್ಮ” ಎಂದು ಫೋಟೋ ಕೆಳಗೆ ಕ್ಯಾಷ್ಷನ್ ಬರೆದುಕೊಂಡಿದ್ದಾರೆ.
ಪತಿ ಯಶಸ್ ಅವರೊಂದಿಗೆ ಅವರು ಸುಂದರವಾದ ಫೋಟೋ ಶೂಟ್ ಮಾಡಿಸಿದ್ದಾರೆ. ಅವರ ಫೋಟೋ ಶೂಟ್ ನಲ್ಲಿ ಅವರ ಮೆಚ್ಚಿನ ನಾಯಿ ಮರಿ ಚಾಕೋಲೆಟ್ ಕೂಡ, ಕ್ಯೂಟ್ ಆಗಿ ಕಾಣಿಸಿಕೊಂಡಿದೆ. ವರ್ಷದ ಆರಂಭವನ್ನು ಗುಡ್ ನ್ಯೂಸ್ ಮೂಲಕ ಬರ ಮಾಡಿಕೊಂಡಿದ್ದಾರೆ.
ನಟಿ ಮೇಘಾಶ್ರಿ, ಆಂಕರ್ ಅನುಶ್ರೀ ಸೇರಿದಂತೆ ಹಲವರು ʼರಂಗನಾಯಕಿʼಗೆ ಶುಭಾಶಯವನ್ನು ಕೋರುತ್ತಿದ್ದಾರೆ.
ನಟಿ ಅದಿತಿ ಪ್ರಭುದೇವ – ಉದ್ಯಮಿ ಯಶಸ್ ಅವರ ವಿವಾಹ 2022ರ ನವೆಂಬರ್ ತಿಂಗಳಲ್ಲಿ ನೆರವೇರಿತ್ತು.
ಅದಿತಿ ಪ್ರಭುದೇವ ನಟನೆಯ ‘ಅಲೆಕ್ಸಾ’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಇದೇ ಜ.26 ರಂದು ಸಿನಿಮಾ ತೆರೆ ಕಾಣಲಿದೆ.