Advertisement

ಐಟಿ ವಿಚಾರಣೆಗೆ ಹಾಜರಾದ ನಟ ಯಶ್‌

12:30 AM Jan 12, 2019 | |

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಯಶ್‌ ಹಾಗೂ ಅವರ ತಾಯಿ ಪುಷ್ಪಾ ಅವರನ್ನು ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

Advertisement

ಕೆಲದಿನಗಳ ಹಿಂದೆ ನಟ ಯಶ್‌ ನಿವಾಸ ಸೇರಿ ಇನ್ನಿತರೆ ಕಡೆ ದಾಳಿ ನಡೆಸಿ ಸ್ಥಿರಾಸ್ತಿ ಹಾಗೂ ಚರಾಸ್ತಿಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದ ಐಟಿ ಅಧಿಕಾರಿಗಳು, ಅವುಗಳ ಪರಿಶೀಲನೆಯಲ್ಲಿ ತೊಡಗಿದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಿದ್ದರು.

ಈ ಹಿನ್ನೆಲೆಯಲ್ಲಿ ತಮ್ಮ  ತಾಯಿ ಜತೆ ವಿಚಾರಣೆಗೆ ಆಗಮಿಸಿದ ಯಶ್‌ ಅವರನ್ನು  ಎರಡೂವರೆ ಗಂಟೆಗಳಿಗೂ ಅಧಿಕ ಕಾಲ ವಿಚಾರಣೆಗೊಳಪಡಿಸಿದ ಅಧಿಕಾರಿಗಳು, ಜಪ್ತಿ ಪಡಿಸಿಕೊಂಡಿರುವ ದಾಖಲೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ವಿಚಾರಣೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಯಶ್‌, ಸಮಾಜದ ಕಣ್‌ತಪ್ಪಿಸಿ ಏನು ಮಾಡಲು ಸಾಧ್ಯವಿಲ್ಲ. ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಇದು ಸದ್ಯಕ್ಕೆ ಮುಗಿಯುವ ವಿಚಾರಣೆಯಲ್ಲ.ಇನ್ನೂ ಎರಡು ವರ್ಷಗಳ ಕಾಲ ನಡೆಯಬಹುದು. ಐಟಿ ಅಧಿಕಾರಿಗಳು ಪುನ: ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next