ಬೆಂಗಳೂರು: ಲೂನಾರ್ ವಾಕ್ ಮೇಟ್ ಮೊದಲ ಬಾರಿಗೆ ತನ್ನ ಉತ್ಪನ್ನಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ಮುಂದಾಗಿದೆ. ಇದರನ್ವಯ ಖ್ಯಾತ ನಟ ರಿಯಲ್ ಸ್ಟಾರ್ ಉಪೇಂದ್ರ ಲೂನಾರ್ ವಾಕ್ವೆುàಟ್ನ ನೂತನ ಆನ್ಲೈನ್ ಪೋರ್ಟಲ್ (ವೆಬ್ ಸೈಟ್)ಗೆ ಚಾಲನೆ ನೀಡಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಲೂನಾರ್ ವಾಕ್ ಮೇಟ್ ಕಂಪನಿಯವರು ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ದಲ್ಲಿ ವಾಕ್ ಮೇಟ್ ಉತ್ಪಾದಿಸಿದ ಆತ್ಯಾಕರ್ಷದ ಹೊಸ ಡಿಸೈನ್ ಫುಟ್ವೇರ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಮಾತನಾಡಿದರು. ಸುಮಾರು 15 ವರ್ಷಗಳಿಂದ ಲೂನಾರ್ ವಾಕ್ ಮೇಟ್ ಕಂಪನಿ ಜತೆಗೆ ಅವಿನಾಭಾವ ಸಂಬಂಧವಿದೆ. ಉತ್ತಮ ಗುಣಮಟ್ಟದ ಫುಟ್ವೇರ್ಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ:- ಕೇಂದ್ರ ಸರ್ಕಾರವು ಉಗ್ರರ ಹೆಸರಿನಲ್ಲಿ ನಾಗರಿಕರನ್ನು ಕೊಲ್ಲುತ್ತಿದೆ: ಮೆಹಬೂಬಾ ಮುಫ್ತಿ
ಇದೇ ವೇಳೆ ಉಪೇಂದ್ರ ಅವರು ನಟಿಸಿದ ನೂತನ ಲೂನಾರ್ ವಾಕ್ವೆುàಟ್ ಫುಟ್ವೇರ್ ಜಾಹಿರಾತು ಬಿಡುಗಡೆಗೊಳಿಸಿದರು. ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ಆನ್ಲೈನ್ ಮಯವಾಗಿದೆ. ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಅನ್ಲೈನ್ ಬುಕ್ಕಿಂಗ್ ಮಾಡಿ, ಫುಟ್ವೇರ್ ಖರೀದಿಸಲು www.walkmate.co.in ಎಂಬ ಇ ಕಾಮರ್ಸ್ ಜಾಲತಾಣ ಅನಾವರಣ ಗೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದರು. ಲೂನಾರ್ ವಾಕ್ವೆುàಟ್ ಸಂಸ್ಥೆಯ ನಿರ್ದೇಶಕ ರೋಶನ್ ಬಾಸ್ಟಿಯನ್ ಸೇರಿದಂತೆ ಸದಸ್ಯರು ಹಾಜರಿದ್ದರು.
“ನಾನು ಲೂನಾರ್ ವಾಕ್ ಮೇಟ್ ಬ್ರ್ಯಾಂಡ್ ಅಂಬಾಸಿಡರ್ ಆದ ಆರಂಭದಲ್ಲಿ ಕೇವಲ 4-5 ವಿಧದ ಫುಟ್ವೇರ್ಗಳು ಇದ್ದವು. ಆದರೆ ಈಗ ದಿನದಿಂದ ದಿನಕ್ಕೆ ಹೊಸ ಹೊಸ ರೀತಿಯ ಫುಟ್ವೇರ್ಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಬಗೆ ಬಗೆಯ ಬಟ್ಟೆಗಳಿಗೆ ಸರಿಹೊಂದುವ ಡಿಸೈನ್ ಗಳನ್ನು ಉತ್ಪಾದಿಸಿದ್ದಾರೆ. ಇದು ಒಂದು ದೇಶಿಯ ಉತ್ಸನ್ನವಾಗಿದ್ದು, ಉತ್ತಮ ಗುಣಮಟ್ಟವನ್ನು ನೀಡುವುದರಿಂದ ನಾನು ಈ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿದ್ದೇನೆ. ಈ ಸಂಸ್ಥೆ ಭಾರತದಲ್ಲಿ ಅಲ್ಲದೆ ಜಗತ್ತಿನಾಂದ್ಯಂತ ಹೆಸರು ಮಾಡಲಿ.”
– ಉಪೇಂದ್ರ, ನಟ