Advertisement

ಸಂಕಷ್ಟ ದಲ್ಲಿರುವವರಿಗೆ ನೆರವು ಸಾಮಾಜಿಕ ಕರ್ತವ್ಯ: ಉಮಾಶ್ರೀ

07:59 PM Jun 11, 2021 | Team Udayavani |

ಬನಹಟ್ಟಿ: ಕೋವಿಡ್‌ ಮೊದಲನೇ ಅಲೆಯಿಂದ ಇನ್ನೂ ಸುಧಾರಿಸಿಕೊಳ್ಳದ ಹೊತ್ತಿನಲ್ಲಿಯೇ 2ನೇ ಅಲೆ ಬಂದು ಸಮಾಜದಲ್ಲಿನ ಸಾಕಷ್ಟು ಜನರಿಗೆ ತೊಂದರೆ ಉಂಟು ಮಾಡಿದೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಸಾಮಾಜಿಕ ಕರ್ತವ್ಯ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

Advertisement

ರಬಕವಿಯ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅನುದಾನರಹಿತ ಶಾಲಾ ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಅಂತವರ ನೆರವಿಗೆ ಪ್ರತಿಯೊಬ್ಬರು ಧಾವಿಸಬೇಕು. ಅದರಲ್ಲೂ ಶಾಲೆಯ ಆಡಳಿತ ಮಂಡಳಿ ಸ್ವಲ್ಪಮಟ್ಟಿಗಾದರೂ ಅವರ ನೆರವಿಗೆ ಧಾವಿಸಬೇಕು. ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆಗಳು ಕೂಡಾ ಸಂಕಷ್ಟದಲ್ಲಿವೆ. ಆದರೂ ಆಯಾ ಕಾರ್ಮಿಕರಿಗೆ ನೆರವಾಗಬೇಕಿರುವುದು ಸಾಮಾಜಿಕ ಕರ್ತವ್ಯವಾಗಿದೆ ಎಂದರು.

ರಬಕವಿ-ಬನಹಟ್ಟಿ ಮಹಾಲಿಂಗಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ತೇರದಾಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ಬನಹಟ್ಟಿ ನಗರ ಘಟಕದ ರಾಜೇಂದ್ರ ಭದ್ರನವರ, ಮಹಾಲಿಂಗಪುರ ನಗರ ಘಟಕದ ಅಧ್ಯಕ್ಷ ಈಶ್ವರ ಚಮಕೇರಿ, ಶಂಕರ ಜಾಲಿಗಿಡದ, ನೀಲಕಂಠ ಮುತ್ತೂರ, ಬಸವರಾಜ ಕೊಕಟನೂರ, ರಾಹುಲ ಕಲಾಲ, ದಾನಪ್ಪ ಹುಲಜತ್ತಿ, ಶ್ರೀಶೈಲ ಮೇಣಿ, ಚಿದಾನಂದ ಗಾಳಿ, ಮಾಳು ಹಿಪ್ಪರಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next