ಮಣಿಪಾಲ: ಕೋವಿಡ್ 19ನಿಂದ ಕಂಗೆಟ್ಟಿದ್ದ ಲಕ್ಷಾಂತರ ಕಾರ್ಮಿಕರ ನೆರವಿಗೆ ನಿಂತ ನಟ ಸೋನು ಸೂದ್ ಎಲ್ಲರ ಮನೆ ಮಾತಾಗಿದ್ದಾರೆ.
ವಿದೇಶದಲ್ಲಿ ಲಾಕ್‌ಡೌನ್‌ನಿಂದ ತೊಂದರೆ ಅನುಭವಿಸುತ್ತಿರುವವರನ್ನೂ ಊರಿಗೆ ಕರೆ ತರುವಲ್ಲಿ ಸೋನು ವಹಿಸಿದ ಪಾತ್ರ ಹಿರಿದಾಗಿದೆ. ಈ ಮೂಲಕ ರಿಯಲ್ ಲೈಫ್ ಹೀರೋ ಆಗಿ ಬದಲಾಗಿದ್ದಾರೆ.
ತಮ್ಜ ಜನಪರ ಕಾರ್ಯಗಳನ್ನು ಸೋನು ಸೂದ್ ಮುಂದುವರಿಸಿದ್ದು, ಸಾವಿರಾರು ಮಂದಿಯ ಕಷ್ಟಕ್ಕೆ ನೆರವಾಗುತ್ತಿದ್ದಾರೆ.
ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಸೋನು ಸೂದ್ ಅಜ್ಜಿಯೊಬ್ಬರಿಗೆ ಕೊಟ್ಟ ಮಾತನ್ನು ಈಡೇರಿಸಿಕೊಂಡಿದ್ದಾರೆ.
Related Articles
ಈ ಮೂಲಕ ಮತ್ತೂಮ್ಮೆ ಜನ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಪುಣೆಯ ಹಪ್ಸರ್‌ನಲ್ಲಿ ವಾಸಿಸುವ ಶಾಂತಾ ಬಾಲು ಪವಾರ್ ವಾರಿಯರ್ ಅಜ್ಜಿಯ ವಿಡಿಯೋ ಫುಲ್ ವೈರಲ್ ಆಗಿತ್ತು. 85 ವರ್ಷದ ಅಜ್ಜಿ ಹೊಟ್ಟೆ ಪಾಡಿಗಾಗಿ ರಸ್ತೆಯಲ್ಲಿ ತಾನು ಕಲಿತಿರುವ ಸಮರ ಕಲೆಯನ್ನು ಪ್ರದರ್ಶಿಸುತ್ತಾ ಹಣ ಸಂಪಾದಿಸುತ್ತಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಈ ಅಜ್ಜಿಗೆ ನಟ ಸೋನು ಸೂದ್ ನೆರವಾಗಿದ್ದಾರೆ.
ವೈರಲ್ ಆಗಿದ್ದ ಅಜ್ಜಿಯ ಸಮರ ಕಲೆಯ ವಿಡಿಯೋ ಗಮನಿಸಿದ ಸೋನು ಸೂದ್, ಇದನ್ನು ಶೆರ್ ಮಾಡಿದ್ದಾರೆ. ನಟ ಸೋನು ಸೂದ್ ಮತ್ತು ರಿತೇಶ್ ದೇಶಮುಖ್ ಈ ವಾರಿಯರ್ ಅಜ್ಜಿಯ ವಿಳಾಸ ನೀಡಿ. ನಮ್ಮ ದೇಶದ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಲು ತರಬೇತಿ ನೀಡಬೇಕು. ಈ ಕಾರಣಕ್ಕಾಗಿ ಅವರ ವಿಳಾಸವನ್ನು ದಯವಿಟ್ಟು ತಿಳಿಸಿ ಎಂದು ನೆಟ್ಟಿಗರಲ್ಲಿ ಹೇಳಿದ್ದರು.
ಅವರಿಗಾಗಿ ಒಂದು ಸಣ್ಣ ತರಬೇತಿ ಕೇಂದ್ರವನ್ನು ತೆರೆಯಬೇಕು. ನಮ್ಮ ದೇಶದ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆ ತಂತ್ರಗಳನ್ನು ಹೇಳಿಕೊಡಬೇಕು. ಈ ಮೂಲಕ ಅಜ್ಜಿಗೆ ಆಸರೆಯೂ ಆಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದೀಗ ಕೊಟ್ಟ ಮಾತಿನಂತೆ ಅಜ್ಜಿಗೆ ಮಾರ್ಷಲ್ ಆರ್ಟ್ಸ್ ತರಬೇತಿ ಶಾಲೆಯನ್ನು ತೆರೆದುಕೊಟ್ಟಿದ್ದಾರೆ.
ಗಣಪತಿ ಹಬ್ಬದ ಹಬ್ಬದ ದಿನವೇ ವಾರಿಯರ್ ಅಜ್ಜಿಯ ತರಬೇತಿ ಶಾಲೆಯನ್ನು ತೆರೆಯಲಾಗಿದೆ. ಈ ಶಾಲೆಗೆ ಸೋನು ಸೂದ್ ಹೆಸರನ್ನು ಇಡಲಾಗಿದ್ದು ವಿಶೇಷ ಎನಿಸಿದೆ. ಈ ಶಾಲೆಯಲ್ಲಿ ವಾರಿಯರ್ ಅಜ್ಜಿ ಈಗ ಶಿಷ್ಯಂದಿರಿಗೆ ಸಮರ ಕಲೆಯ ಬಗ್ಗೆ ಹೇಳಿಕೊಡುತ್ತಿದ್ದಾರೆ. “ನನ್ನ ಕನಸನ್ನು ಸೋನು ಸೂದ್ ಈಡೇರಿಸಿದ್ದಾರೆ. ನನ್ನ ಶಾಲೆಗೆ ಅವರ ಹೆಸರನ್ನು ಇಟ್ಟಿದ್ದೇನೆ. ನಾನು ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ’ ಎಂದು ಅಜ್ಜಿ ಭಾವಾನಾತ್ಮಕವಾಗಿ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಜುಲೈನಲ್ಲಿ 85 ವರ್ಷದ ಅಜ್ಜಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಶಾಂತಾ ಪವಾರ್ ಅವರ ವೈರಲ್ ವಿಡಿಯೋ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರನ್ನೂ ತಲುಪಿದ್ದು, ಪುಣೆಗೆ ಆಗಮಿಸಿ ಸೀರೆ ಹಾಗೂ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ.