ತೀರ್ಥಹಳ್ಳಿ: ಪತ್ನಿ ಗೀತಾ ಪರ ಪ್ರಚಾರ ನಡೆಸುತ್ತಿರುವ ನಟ ಶಿವರಾಜ್ ಕುಮಾರ್ ತೀರ್ಥಹಳ್ಳಿಯಲ್ಲಿ ನಡೆದ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿ ತಮಿಳು ಭಾಷಿಕರ ಮೆಚ್ಚುಗೆಗೆ ಪಾತ್ರರಾದರು.
ಇಲ್ಲಿ ತಮಿಳು ಅವರು ಜಾಸ್ತಿ ಇದ್ದಾರೆ ಎಂದು ಕೇಳಿದ್ದೇನೆ. ಎಲ್ಲರಿಗೂ ನಮಸ್ಕಾರಗಳು. ಜೈಲರ್ ನೋಡಿದ್ದೀರಾ, ಕ್ಯಾಪ್ಟನ್ ನೋಡಿದ್ರಾ? ಚನ್ನಾಗಿ ಇತ್ತಾ? ನಾನೂ ಓದಿದ್ದು ಚೆನ್ನೈ ನಲ್ಲೇ….
ರಾಜ್ ಕುಮಾರ್ ಮಕ್ಕಳು ಎಲ್ಲರೂ ಅಲ್ಲೇ ಓದಿದ್ದು. ನಾನೂ, ಪುನೀತ್, ರಾಘು, ಲಕ್ಷ್ಮಿ ಹಾಗೂ ಪೂರ್ಣೀಮಾ ಎಲ್ಲರೂ ಅಲ್ಲೇ ಓದಿದ್ದು. ಅಲ್ಲಿ ನಮ್ದು ಒಂದು ಮನೆ ಇದೆ. ನಾವು ಅಲ್ಲಿ ಇರಬೇಕಾದಾಗ ತಮಿಳು ಮಾತನಾಡುತ್ತಿದ್ವಿ.
ನೀವು, ಇಲ್ಲಿಗೆ ಬಂದಾಗ ಕನ್ನಡ ಮಾತನಾಡುತ್ತೀರಾ. ನಾವು ಎಲ್ಲಿ ಹೋಗುತ್ತೇವೋ ಆ ಭಾಷೆಯನ್ನು ಕಲಿಯ ಬೇಕು. ಅದು ಆ ಭಾಷೆಗೆ ಕೊಡುವ ಮರ್ಯಾದೆ. ನಾವು ಎಲ್ಲಿ ಊಟ ಮಾಡುತ್ತೇವೋ ಆ ಭಾಷೆ ಕಲಿಯಬೇಕು. ನಾವೆಲ್ಲರೂ ಅಣ್ಣ ತಮ್ಮಂದಿರು ಎಂದು ತಮಿಳಿನಲ್ಲೆ ಮಾತನಾಡಿದರು.
ಇದನ್ನೂ ಓದಿ: Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!