ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶಿವರಾಜ್ (Actor Shivaraj Kumar) ಕುಮಾರ್ ಅವರಿಗೆ ಅಮೆರಿಕಾದಲ್ಲಿ ನಡೆದ ಸರ್ಜರಿ ಯಶಸ್ವಿಯಾಗಿ ನಡೆದಿದೆ.
ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ವೇಳೆ ಪತ್ನಿ ಪರವಾಗಿ ಶಿವರಾಜ್ ಕುಮಾ ನಿರಂತರವಾಗಿ ಪ್ರಚಾರ ಮಾಡಿದ್ದರು. ಇದೇ ಸಂದರ್ಭದಲ್ಲಿ ಶಿವಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಪರಿಣಾಮ ಅವರು ವೈದ್ಯರ ಬಳಿ ತಪಾಸಣೆಗೆ ಒಳಗಾಗಿದ್ದರು.
ಮೂತ್ರಾಶಯದ ಕ್ಯಾನ್ಸರ್ ಇರುವ ಬಗ್ಗೆ ಆತಂಕಕ್ಕೆ ಒಳಗಾಗದೆ ಶಿವಣ್ಣ ಚಿಕಿತ್ಸೆಗೆ ಮುಂದಾಗಿದ್ದರು. ಸರ್ಜರಿಗೆ ಒಳಗಾಗುವ ನಿಟ್ಟಿನಲ್ಲಿ ಡಿಸೆಂಬರ್ 18ರಂದು ಪತ್ನಿ ಹಾಗೂ ಪುತ್ರಿ ಜೊತೆ ಶಿವಣ್ಣ ಅಮೆರಿಕಾಗೆ ತೆರಳಿದ್ದರು.
ಡಿ.24 ರಂದು 6 ಗಂಟೆಗಳ ಕಾಲ ಶಿವಣ್ಣ ಅವರಿಗೆ ಆಪರೇಷನ್ ನಡೆಸಿದ್ದು, ಯಶಸ್ವಿಯಾಗಿ ಆಪರೇಷನ್ ನೆರವೇರಿದೆ.
ಈ ಬಗ್ಗೆ ಪತ್ನಿ ಗೀತಾ ಅವರು ಅಮೇರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ನಲ್ಲಿ ವಿಡಿಯೋ ಮಾಡಿ ಮಾಹಿತಿ ನೀಡಿದ್ದಾರೆ.
ಶಿವರಾಜ್ ಕುಮಾರ್ ಅವರಿಗೆ ನಡೆದ ಅಪರೇಷನ್ ಯಶಸ್ವಿಯಾಗಿದೆ. ಅಭಿಮಾನಿಗಳು ಹೇಗೆ ದೇವರೋ ಅದೇ ರೀತಿ ಬಂದು ಡಾಕ್ಟರ್ಸ್ ಗಳು ಕೂಡ ದೇವರು. ದೇವರ ರೀತಿ ಬಂದು ಅಪರೇಷನ್ ಮಾಡಿದ್ದಾರೆ ಸದ್ಯ ಶಿವರಾಜ್ ಕುಮಾರ್ ಐಸಿಯುನಲ್ಲಿ ಇದ್ದಾರೆ ಶೀಘ್ರದಲ್ಲೇ ನಿಮ್ಮ ಜೊತೆ ಮಾತನಾಡಲಿದ್ದಾರ ಎಂದು ಮಯಾಮಿ ಆಸ್ಪತ್ರೆಯಲ್ಲಿ ತಿಳಿಸಿದ್ದಾರೆ.
ವೈದ್ಯರಾದ ಡಾ. ಮುರುಗೇಶ ಮನೋಹರನ್ ಮಾತನಾಡಿ “ಶಿವಣ್ಣ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಕ್ಯಾನ್ಸರ್ ತಗುಲಿದ್ದ ಅವರ ಮೂತ್ರಕೋಶವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ರೋಗವನ್ನು ಸಂಪೂರ್ಣವಾಗಿ ನಿವಾರಿಸಲಾಗಿದೆ. ಸರ್ಜರಿ ಬಳಿಕ ಅವರದ್ದೇ ಕರಳು ಬಳಸಿ ಕೃತಕ ಮೂತ್ರಕೋಶ ಮತ್ತೆ ಅಳವಡಿಸಲಾಗಿದೆ. ಶಿವಣ್ಣ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಹಳ ಧೈರ್ಯವಾಗಿದ್ದಾರೆ. ಸರ್ಜರಿ ವೇಳೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು” ಎಂದು ಹೇಳಿದ್ದಾರೆ.