Advertisement

ಜೇಮ್ಸ್ ಚಿತ್ರದ ಕುರಿತು ವಿವಾದದ ಬೆನ್ನಲ್ಲೇ ಸಿಎಂ ಭೇಟಿಯಾದ ಶಿವರಾಜ್ ಕುಮಾರ್

02:01 PM Mar 24, 2022 | Team Udayavani |

ಬೆಂಗಳೂರು : ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಅಭಿನಯಿಸಿರುವ ಕೊನೆಯ ಚಿತ್ರ ‘ಜೇಮ್ಸ್’ ಚಿತ್ರಮಂದಿರಗಳಿಂದ ತೆಗೆಯಲಾಗುತ್ತಿದೆ ಎಂಬ ಬಗ್ಗೆ ವಿವಾದ ಎದ್ದ ಬೆನ್ನಲ್ಲೇ ವಿಧಾನಸೌಧದಲ್ಲಿ ಗುರುವಾರ ನಟ ಶಿವರಾಜ್ ಕುಮಾರ್ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಹತ್ವದ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Advertisement

ಸಿಎಂ ಪ್ರತಿಕ್ರಿಯೆ

ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಕರ್ನಾಟಕದ ಮೇರು ನಟ ಶಿವರಾಜ್ ಕುಮಾರ್ ಆಗಮಿಸಿದ್ದರು. ಶಕ್ತಿಧಾಮದ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಬಂದಿದ್ದರು. ಮುಂದಿನ ತಿಂಗಳು ವಿವಿಧ ಕಾಮಗಾರಿಗಳು ಶಕ್ತಿ ಧಾಮದಲ್ಲಿ ನೆರವೇರಲಿವೆ ಎಂದರು.

ಜೇಮ್ಸ್ ನಿರ್ಮಾಪಕರಿಗೆ ಫಿಲಂ ಚೇಂಬರ್ ಜೊತೆ ಮಾತನಾಡಿ ಎಂದು ಹೇಳಿದ್ದೇವೆ. ನಿರ್ಮಾಪಕರ ಜತೆ ಮತ್ತೆ ಮಾತಾಡುತ್ತೇವೆ. ಈ ಬಗ್ಗೆ ಮಾಧ್ಯಮಗಳ ಜತೆ ಮಾತಾಡುವುದಾಗಿ ನಿರ್ಮಾಪಕರು ಹೇಳಿದ್ದಾರೆ ಎಂದರು.

ಯಾವುದೇ ರಾಜಕೀಯ ಬೇಡ: ಶಿವರಾಜ್ ಕುಮಾರ್

Advertisement

”ಕಾಶ್ಮೀರಿ ಫೈಲ್ಸ್’ ಚಿತ್ರದಿಂದ ಜೇಮ್ಸ್ ಸಿನಿಮಾಗೆ ಯಾವುದೇ ತೊಂದರೆ ಆಗಿಲ್ಲ.ಆ ವಿಚಾರವೇ ಬಂದಿಲ್ಲ.ಎಲ್ಲೂ ಜೇಮ್ಸ್ ಸಿನಿಮಾ ತಗೆದುಹಾಕಿಲ್ಲ. ನಮ್ಮ‌ಫ್ಯಾಮಿಲಿ ಒಳ್ಳೆಯ ಚಿತ್ರಕ್ಕೆ ಯಾವತ್ತೂ ಸಪೋರ್ಟ್ ಮಾಡುತ್ತದೆ ಇದನ್ನು ನಮ್ಮ‌ತಂದೆ ಹೇಳಿಕೊಟ್ಟಿದ್ದಾರೆ, ನಮ್ಮ‌ತಂದೆಯಿಂದ ಕಲಿತ ಪಾಠ ಇದು. ಎಲ್ಲರಿಗೂ ಭಾವನೆಗಳು ಇರುತ್ತವೆ , RRR ದೊಡ್ಡ ಸಿನಿಮಾ. ಈಗ ಥಿಯೇಟರ್ ಸಮಸ್ಯೆ ಆಗಿರಬಹುದು’ ಎಂದರು.

ಸಿದ್ದರಾಮಯ್ಯ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್,’ ನಾನು ಇಲ್ಲಿ ರಾಜಕೀಯ ಮಾತನಾಡೋಕೆ ಬಂದಿಲ್ಲ.ನಾನು ಒಬ್ಬ ಇಂಡಸ್ಟ್ರಿ ಯ ಹೀರೋ ಆಗಿ ಮಾತನಾಡೋಕೆ ಬಂದಿದ್ದೇನೆ. ಶಿವಣ್ಣನ ಹಾಗೇ ಮಾತನಾಡೋಕೆ ಬಂದಿದ್ದೇನೆ.ಯಾವುದೇ ರಾಜಕೀಯ ಬೇಡ. ನಾನು ಶಕ್ತಿಧಾಮ ಕಾರ್ಯಕ್ರಮಕ್ಕೆ ಅಹ್ವಾನ ನೀಡಲು ಬಂದಿದ್ದೆ. ಇದೇ ಸಮಯದಲ್ಲಿ ಜೇಮ್ಸ್ ನಿರ್ಮಾಪಕರಿಗೆ ಬರಲು ಹೇಳಿ ಸಿಎಂ ಜತೆ ಮಾತನಾಡಿ ಎಂದು ಹೇಳಿದ್ದೆ.ನನಗೂ ಏನು ಸಮಸ್ಯೆ ಆಗ್ತಿದೆ ಅನ್ನೋದು ಗೊತ್ತಿಲ್ಲ.ಅಭಿಮಾನಿಗಳ ಆರೋಪದ ಕುರಿತು ನನಗೆ ಗೊತ್ತಿಲ್ಲ.ಎಷ್ಟು ಥಿಯೇಟರ್ ನಲ್ಲಿ ಜೇಮ್ಸ್ ಚಿತ್ರ ಇದೆ ಅನ್ನೋದನ್ನ ಪರಿಶೀಲನೆ ಮಾಡಿ ಬಂದು, ಎಲ್ಲಾ ಚೆಕ್ ಮಾಡಿ ಜನಗಳಿಗೆ ನೀವೆ ಹೇಳಬೇಕು.ಇದನ್ನ ಶಿವಣ್ಣ ಹೇಳೋದಲ್ಲ, ನೀವೇ ಹೇಳಬೇಕು ಎಂದು ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದರು.

ಅಪ್ಪು ನನಗೆ ತಮ್ಮನ ತರಹ: ಸಿಎಂ

‘ಸಿಎಂ ಭೇಟಿ ಮಾಡಿ ಬಂದಿದ್ದೇವೆ, ‘ಪುನಿತ್ ರಾಜ್ ಕುಮಾರ್ ನನಗೆ ತಮ್ಮನ ತರಹ’ ಎಂದು ಸಿಎಂ ಹೇಳಿದ್ದಾರೆ.ಯಾವುದೇ ಸಮಸ್ಯೆ ಇದ್ದರೂ ಬಗೆಹರಿಸುತ್ತೇನೆ ಎಂದಿದ್ದಾರೆ. ಆರ್ ಆರ್ ಆರ್ ಚಿತ್ರದ್ದೇ ಸಮಸ್ಯೆ ಆಗಿದೆ ಎಂದು ಸಿಎಂಗೆ ಹೇಳಿದ್ದೇನೆ.  25  ಲಕ್ಷ ಕಲೆಕ್ಷನ್ ಇರುವ ಥಿಯೇಟರ್ ನಲ್ಲಿ ಜೇಮ್ಸ್ ತಗೆದು RRR ಹಾಕುತ್ತಿದ್ದಾರೆ. ಇದನ್ನು ಚೇಂಬರ್ ಜೊತೆ ಚರ್ಚೆ ಮಾಡಿ ಏನಾಗಿದೆ ಎಂದು ಹೇಳಿ ಎಂದು ಸಿಎಂ ಹೇಳಿದ್ದಾರೆ ‘ ಎಂದು ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next