Advertisement

ನಟ ಶರ್ಮನ್‌ ಜೋಶಿಯಿಂದ ನೆಕ್ಟ್ಸಿಲೋ ಆ್ಯಪ್‌ ಬಿಡುಗಡೆ

10:28 AM Nov 10, 2021 | Team Udayavani |

ಬೆಂಗಳೂರು: ನೆಕ್ಟ್ಸಿಲೋ ಸಂಸ್ಥೆ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ನೆಕ್ಟ್ಸಿಲೋ ಹೆಸರಿನ ವೈದ್ಯಕೀಯ ಶಿಕ್ಷಣ ಆ್ಯಪ್‌ ಅನ್ನು ವಿನ್ಯಾಸಗೊಳಿಸಿದ್ದು ನಟ ಶರ್ಮನ್‌ ಜೋಶಿ ನೂತನ ಆ್ಯಪ್‌ ಅನ್ನು ಬಿಡುಗಡೆಗೊಳಿಸಿದರು.

Advertisement

ಶರ್ಮನ್‌ ನೆಕ್ಟ್ಸಿಲೋ ಬ್ರಾಂಡ್‌ ಅಂಬಾ ಸಿಡರ್‌ ಆಗಿದ್ದಾರೆ. ಅನೇಕ ಪರಿಣಾಮಕಾರಿ ಕಲಿಕೆಯ ಸಾಧನಗಳನ್ನು ಒದಗಿಸುವ ಆನ್‌ಲೈನ್‌ ವೈದ್ಯಕೀಯ ಶಿಕ್ಷಣ ಅಪ್ಲಿಕೇಶನ್‌ ನೆಕ್ಟ್ಸಿಲೋ ಆ್ಯಪ್‌ ಹೊಂದಿದೆ. ಎಫ್ಎಂಜಿಇ, ನೆಕ್ಸ್ಟ್, ಯುಎಸ್‌ಎಂಎಲ್‌ಇ, ಕೆಆರ್‌ಒಕೆ, ಪಿಎಲ್‌ ಎಬಿ, ನೀಟ್‌, ಎಎಂಎಟಿ ಮೂಲಕ ವೈದ್ಯಕೀಯ ಪರೀಕ್ಷೆ ತಯಾರು ನಡೆಸುವ ವೈದ್ಯರಿಗೂ ಈ ಅಪ್ಲಿಕೇಶನ್‌ ಅನುಕೂಲವಾಗಲಿದೆ. ನೆಕ್ಟ್ಸಿಲೋ ಎಜುಟೆಕ್‌ ಪ್ರೈವೆಟ್‌ ಲಿನ ವ್ಯವಸ್ಥಾಪಕ ನಿರ್ದೇಶಕ ಡಾ.ಸುನಿಲ್‌ ಶರ್ಮಾ ಮಾತನಾಡಿ, ನೆಕ್ಟ್ಸಿಲೋ ರೂಪದ ನವೀನ ವೈದ್ಯಕೀಯ ಶಿಕ್ಷಣ ಆ್ಯಪ್‌ನ್ನು ಲೋಕಾರ್ಪಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ನಮ್ಮದು ಉನ್ನತ ಮಟ್ಟದ ಅನುಭವಿ ವೈದ್ಯರು, ವೈದ್ಯಕೀಯ ಶಿಕ್ಷಣ ಉತ್ಸಾಹಿಗಳು, ಇ- ಲರ್ನಿಂಗ್‌ ತಜ್ಞರ ಜತೆಗೆ ಮುಂದಾಲೋಚನೆಯ ಉದ್ಯಮಿಗಳ ತಂಡವನ್ನು ಹೊಂದಿದೆ. ತಂಡವು ಪ್ರತಿಭಾವಂತ ವ್ಯಕ್ತಿಗಳನ್ನು ಒಳಗೊಂಡಿದೆ. ಅತ್ಯುತ್ತಮ ಕಲಿಕೆಯ ಅನುಭವಕ್ಕಾಗಿ ವಿಷಯ ಗಳನ್ನು ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ಇರಿಸಿಕೊಳ್ಳಲು ನಾವು ಬಯಸುತ್ತೇವೆ ಎಂದರು.

ಇದನ್ನೂ ಓದಿ:- ಮೇಲ್ಮನೆ ಮೆಟ್ಟಿಲೇರಲು ಬಿಜೆಪಿ ಒಂದು ಹೆಜ್ಜೆ ಮುಂದೆ

ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಅಸ್ತಿತ್ವವನ್ನು ಹೊಂದಿದ್ದೇವೆ ಮತ್ತು ಜಾಗತಿಕ ವಾಗಿಯೂ ವಿಸ್ತರಿಸುತ್ತಿದ್ದೇವೆ. ಇದು ವೈದ್ಯಕೀಯ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಿ ಕೊಳ್ಳಲು ಸಹಾಯವಾಗಲಿದೆ ಎಂದು ಹೇಳಿದರು.

Advertisement

ನಟ ಶರ್ಮನ್‌ ಜೋಶಿ ಪ್ರತಿಕ್ರಿಯಿಸಿ ವೈದ್ಯಕೀಯ ವಿದ್ಯಾರ್ಥಿಗಳ ಅಗತ್ಯತೆಗಳನ್ನು ಪೂರೈಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಡಿಜಿಟಲ್‌ ಲರ್ನಿಂಗ್‌ ಪ್ಲಾಟ್‌ಫಾರ್ಮ್ ನೆಕ್ಟ್ಸಿಲೋ ಜತೆ ಸಂಬಂಧ ಹೊಂದಲು ನನಗೆ ಸಂತೋಷವಾಗಿದೆ ಎಂದು ತಿಳಿಸಿದರು. ಪಠ್ಯ ಕ್ರಮದ ಜತೆಗೆ ಇತ್ತೀಚಿನ ಪರೀಕ್ಷೆಯ ಪ್ರವೃತ್ತಿಗಳು ಮತ್ತು ಮಾದರಿಗಳ ಮೇಲೆ ತೀವ್ರ ನಿಗಾ ಇಡಲು ಈ ಆ್ಯಪ್‌ ಸಹಾಯವಾಗಲಿದೆ ಎಂದು ಹೇಳಿದರು. ಮಂಜುಳಾ ನಾಯ್ಡು, ಡಾ.ಸುನೀಲ್‌ ಶರ್ಮಾ, ಡಾ.ನಖತ್‌ ಸಿಂಗ್‌, ಡಾ.ನಿರ್ಭಯ್‌ ಚಂದ್ರನಾ ಮತ್ತು ಡಾ.ವಿಶಾಲ್‌ ಶರ್ಮಾ ಸೇರಿ ದಂತೆ ನೆಕ್ಸಿ$rಲೋ ಆಪ್‌ನ ಎಲ್ಲಾ ಸಂಸ್ಥಾಪಕರು ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next