Advertisement

“ನಾನು ಭಾರತೀಯ ಹಾಗಾಗಿ…’ವಿಮಾನ ನಿಲ್ದಾಣದಲ್ಲಿನ ವ್ಯಂಗ್ಯಕ್ಕೆ ಸತೀಶ್‌ ಶಾ ಪ್ರತ್ಯುತ್ತರ

07:09 PM Jan 04, 2023 | Team Udayavani |

ನವದೆಹಲಿ: ಬ್ರಿಟನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ವ್ಯಂಗ್ಯಕ್ಕೆ ಹಿಂದಿ ಸಿನಿಮಾನಟ ಸತೀಶ್‌ ಶಾ ಅವರು ನೀಡಿರುವ ಪ್ರತ್ಯುತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಸತೀಶ್‌ ಶಾ ಅವರು ತಮ್ಮ ಕುಟುಂಬದೊಂದಿಗೆ ಲಂಡನ್‌ನಿಂದ ಭಾರತಕ್ಕೆ ಬರಲು ಫ‌ಸ್ಟ್‌ ಕ್ಲಾಸ್‌ ಏರ್‌ ಟಿಕೆಟ್‌ ಬುಕ್‌ ಮಾಡಿದ್ದರು. ಹೀಥ್ರೂ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲು ಮುಂದಾದ ಅವರಿಗೆ, “ಇವರು ಹೇಗೆ ಫ‌ಸ್ಟ್‌ ಕ್ಲಾಸ್‌ ಟಿಕೆಟ್‌ ಖರೀದಿಸಲು ಸಾಧ್ಯ?’ ಎಂದು ವಿಮಾನ ನಿಲ್ದಾಣ ಸಿಬ್ಬಂದಿ ತಮ್ಮಲ್ಲೇ ವ್ಯಂಗ್ಯವಾಗಿ ಮಾತಾಡಿಕೊಂಡಿದ್ದನ್ನು ಕೇಳಿಸಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, “ನಾವು ಭಾರತೀಯರು ಹಾಗಾಗಿ ಸಾಧ್ಯ’ ಎಂದು ಹೆಮ್ಮೆಯಿಂದ ಪ್ರತಿಕ್ರಿಯಿಸಿದ್ದಾರೆ.

ಟ್ವಿಟರ್‌ನಲ್ಲಿ ಈ ವಿಷಯವನ್ನು ಶಾ ಪ್ರಸ್ತಾಪಿಸಿದ್ದಾರೆ. ಇವರ ಪ್ರತಿಕ್ರಿಯೆಗೆ ಭಾರತೀಯರಿಂದ ಅಪಾರ ಬೆಂಬಲ ವ್ಯಕ್ತವಾಗಿದೆ. ಈ ಬಗ್ಗೆ ಹೀಥ್ರೂ ವಿಮಾನ ನಿಲ್ದಾಣ ಆಡಳಿತ ಕ್ಷಮೆ ಕೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next