ನಟ ರವಿಶಂಕರ್ ಈಗಾಗಲೇ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ. ಅದು ಖಡಕ್ ವಿಲನ್‌ನಿಂದ ಹಿಡಿದು ಪ್ರೇಕ್ಷಕರನ್ನು ನಗಿಸುವ ಪಾತ್ರದಲ್ಲೂ ಸೈ ಎನಿಸಿಕೊಂಡಿದ್ದಾರೆ. ಈಗ ಮತ್ತೂಂದು ಹೊಸ ಪಾತ್ರ ಅವರಿಗೆ ಸಿಕ್ಕಿದೆ. ಆ ಪಾತ್ರದ ಹೆಸರು ಸೀರಿಯಲ್ ಸೆಟ್ ಚಂದ್ರಪ್ಪ.
ಅಂದಹಾಗೆ, ಈ ಪಾತ್ರ ಮಾಡುತ್ತಿರೋದು “ತಲ್ವಾರ್‌ಪೇಟೆ’ ಸಿನಿಮಾದಲ್ಲಿ. ವಸಿಷ್ಠ ಸಿಂಹ ನಾಯಕರಾಗಿರುವ ಈ ಚಿತ್ರದಲ್ಲಿ ರವಿಶಂಕರ್, ಸೀರಿಯಲ್ ಸೆಟ್ ಚಂದ್ರಪ್ಪ ಎಂಬ ಪಾತ್ರ ಮಾಡುತ್ತಿದ್ದಾರೆ. ಶ್ರೀನಾಗಬ್ರಹ್ಮಕ್ರಿಯೇಷನ್ಸ್‌ನಡಿ ಡಾ. ಶೈಲೇಶ್ ಕುಮಾರ್.ಬಿ.ಎಸ್ ನಿರ್ಮಾಣ ಮಾಡುತ್ತಿರುವ ಚಿತ್ರ “ತಲ್ವಾರ್ ಪೇಟೆ .
ಇದನ್ನೂ ಓದಿ : ಡಿಸೆಂಬರ್ ಮೊದಲ ವಾರ ಸಂಜು ಬಾಬಾ ಎಂಟ್ರಿ
ಸದ್ದಿಲ್ಲದೆ ಸೆಟ್ ಏರಿದ ಈ ಚಲನಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ವೃತ್ತಿಯಲ್ಲಿ ನ್ಯೂರೋಸರ್ಜನ್ ಆಗಿರುವ ನಿರ್ಮಾಪಕ ಡಾ.ಶೈಲೇಶ್‌ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ನುರಿತಕಲಾವಿದರಿದ್ದಾರೆ. ನಾಯಕ ನಟನಾಗಿ ವಸಿಷ್ಠ ಸಿಂಹ , ನಾಯಕಿ ಪಾತ್ರದಲ್ಲಿ ಸೋನಾಲ್ ಮಂಟೆರಿಯೊ ಅವರೊಂದಿಗೆ ಈಗಾಗಲೇ ಚತುರ್ಭಾಷಾಕಲಾವಿದ ಹರೀಶ್‌ಉತ್ತಮನ್, ಯಶ್ವಂತ್ ಶೆಟ್ಟಿ, ಆಶಾಲತಾ, ವೀಣಾ ಪೊನ್ನಪ್ಪ, ಲಿಂಗರಾಜ್ ಬಲವಾಡಿ, ಸುರೇಶ್ ಚಂದ್ರಪ್ರದೀಪ್ ಪೂಜಾರಿ, ರಜನಿ ಕಾಂತ್, ಮನು ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ..
ಚಿತ್ರವನ್ನುಕೆ.ಲಕ್ಷ್ಮಣ್, ಶ್ರೀರಾಮ್ ನಿರ್ದೇಶಿಸುತ್ತಿದ್ದಾರೆ.ಇವರಿಬ್ಬರು ಜಂಟಿಯಾಗಿ “ತಲ್ವಾರ್ ಪೇಟೆಗೆ’ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಚಿತ್ರಕ್ಕೆ ಎಂ.ಯು.ನಂದಕುಮಾರ್‌ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಡಿಫರೆಂಟ್ ಡ್ಯಾನಿ, ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನ, ಮುರಳಿ, ಮೋಹನ್, ಧನು, ಗೀತ ಅವರ ನೃತ್ಯ ನಿರ್ದೇಶನವಿದೆ. ಹರ್ಷವರ್ಧನ್ ರಾಜ್ ಸಂಗೀತ ನೀಡುತ್ತಿದ್ದಾರೆ.