Advertisement

ನಿಶ್ಚಿತಾರ್ಥ ಮಾಡಿಕೊಂಡ ನಟ ರಾಣಾ ದಗ್ಗುಬಾಟಿ

04:00 AM May 23, 2020 | Lakshmi GovindaRaj |

ಬಾಹುಬಲಿ ಚಿತ್ರದ ಬಲ್ಲಾಳದೇವ ಖ್ಯಾತಿಯ ನಟ ರಾಣಾ ದಗ್ಗುಬಾಟಿ ತಾನು ಪ್ರೀತಿಸಿದ ಉದ್ಯಮಿ ಮಿಹೀಕಾ ಬಜಾಜ್‌ ಅವರ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಸೋಶಿಯಲ್‌ ಮೀಡಿಯಾದಲ್ಲಿ ತಾನು  ಪ್ರೀತಿಸುತ್ತಿರುವ ವಿಷಯ ಬಹಿರಂಗಪಡಿಸಿ ತನ್ನ ಫ್ಯಾನ್ಸ್‌ ಗಳಿಗೆ ಸರ್‌ ಪ್ರೈಸ್‌ ನೀಡಿದ್ದ ರಾಣಾ, ಪ್ರೀತಿಯ ತಿಳಿಸಿದ ಒಂದೇ ವಾರದಲ್ಲಿ ಮಿಹೀಕಾ ಅವರ ಜೊತೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.

Advertisement

ಇನ್ನು ಈ ವಿಷಯವನ್ನು ಸ್ವತಃ  ರಾಣಾ ಅವರೇ ಇನ್ಸ್‌ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಹಾಕುವ ಮೂಲಕ ತಿಳಿಸಿದ್ದಾರೆ. ಈ ವಿಚಾರವಾಗಿ ತಮ್ಮ ಇನ್‌ ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿಕೊಂಡಿರುವ ರಾಣಾ, ಈಗ ಇದು ಅಧಿಕೃತವಾಗಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಿಹೀಕಾ  ಜೊತೆಯಲ್ಲಿ ನಿಶ್ಚಿತಾರ್ಥದಲ್ಲಿ ತೆಗೆದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಿಹೀಕಾ ಕಿತ್ತಲೆ ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದರೆ, ರಾಣಾ ಬಿಳಿ ಬಣ್ಣದ ಪಂಚೆ ಮತ್ತು ಶರ್ಟ್‌ ತೊಟ್ಟು ಪೋಸ್‌ ನೀಡಿದ್ದಾರೆ.

ಸದ್ಯ  ರಾಣಾ ಮತ್ತು ಮಿಹೀಕಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಓಡಾಡುತ್ತಿದೆ. ಇನ್ನು ರಾಣಾ ದುಗ್ಗುಬಾಟಿ ನಿಶ್ಚಿತಾರ್ಥ ಮಾಡಿಕೊಂಡಿರುವ ಮಿಹೀಕಾ ಹೈದರಾಬಾದ್‌ ಮೂಲದವರು. ಚೆಲ್ಸಿಯಾ  ವಿಶ್ವವಿದ್ಯಾಲಯದಲ್ಲಿ ಇಂಟೀರಿಯರ್‌ ಡಿಸೈನಿಂಗ್‌ ಅಧ್ಯಯನ ಮಾಡಿರುವ ಮಿಹೀಕಾ ಉದ್ಯಮಿ ಸಮರ್ಥ್ ಬಜಾಜ್‌ ಅವರ ಸಹೋದರಿ. ಜೊತೆಗೆ ಮಾಡೆಲಿಂಗ್‌ ಕಡೆಗೂ ಆಸಕ್ತಿ ಹೊಂದಿರುವ ಮಿಹೀಕಾ ಸದ್ಯ ತನ್ನ ತಾಯಿ ಬಂಟಿ ಬಜಾಜ್‌ ಅವರ ಉದ್ಯಮವನ್ನು ನೋಡಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next