ಮುಂಬೈ: ಖ್ಯಾತ ಬಾಲಿವುಡ್ ನಟ, ರಾಮ್ ತೇರಿ ಗಂಗಾ ಮೈಲಿ ಖ್ಯಾತಿಯ ರಾಜೀವ್ ಕಪೂರ್ ಅವರು ಮಂಗಳವಾರ ಫೆ.9 ರಂದು ನಿಧನರಾಗಿದ್ದಾರೆ. ಇವರ ನಿಧನದ ಸುದ್ದಿ ತಿಳಿದು ಹಲವಾರು ಬಾಲಿವುಡ್ ತಾರೆಯರು ಕಂಬನಿ ಮಿಡಿದಿದ್ದಾರೆ.
58 ವರ್ಷದವರಾದ ರಾಜೀವ್ ಕಪೂರ್ ಗೆ ಹೃದಯಾಘಾತವಾಗಿತ್ತು. ತಕ್ಷಣವೇ ಮುಂಬೈನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಕುರಿತು ತಮ್ಮ ಇನ್ ಸ್ಟಾಗ್ರಾಂ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿರುವ ರಿಷಿ ಕಪೂರ್ ಪತ್ನಿ ನೀತು ಕಪೂರ್, ರಾಜೀವ್ ಕಪೂರ್ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಇದನ್ನೂ ಓದಿ:ಇನ್ನೆರಡು ದಿನದಲ್ಲಿ ಸಾರಿಗೆ ನೌಕರರ ಸಂಬಳ ನೀಡುತ್ತೇವೆ: ಲಕ್ಷಣ ಸವದಿ
1983 ರಲ್ಲಿ ಮೊದಲ ಬಾರಿಗೆ ‘ಏಕ್ ಜಾನ್ ಹೈನ್ ಹಮ್’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ ರಾಜೀವ್ ಕಪೂರ್, ರಾಮ್ ತೇರಿ ಗಂಗಾ ಮೈಲಿ ಸಿನಿಮಾದಲ್ಲಿ ಮೊದಲ ಬಾರಿ ನಾಯಕನಾಗಿ ಕಾಣಿಸಿಕೊಂಡಿದ್ದರು. ನಂತರ ಆಸ್ಮಾನ್, ಲವರ್ ಬಾಯ್ ಮುಂತಾದ ಸಿನಿಮಾಗಳಲ್ಲಿ ನಾಯಕನಾಗಿ ತೆರೆ ಮೇಲೆ ಮಿಂಚಿದ್ದು, 1990 ರಲ್ಲಿ ತೆರೆಕಂಡ ಜಿಮ್ಮೆದಾರ್ ಇವರ ಕೊನೆಯ ಚಿತ್ರವಾಗಿತ್ತು. 1996 ರಲ್ಲಿ ಪ್ರೇಮ್ ಗ್ರಂಥ ಚಿತ್ರವನ್ನು ನಿರ್ದೇಶನ ಮಾಡಿದ್ದು, ಆ ಬಳಿಕ ಚಿತ್ರರಂಗದಿಂದ ಹೊರಗುಳಿದಿದ್ದರು.