Advertisement
ಇದರಲ್ಲಿ ಬಿ.ಆರ್. ಛೋಪ್ರಾ ನಿರ್ಮಾಣದಲ್ಲಿ, ಬಿ.ಆರ್. ಛೋಪ್ರಾ ಹಾಗೂ ರವಿ ಛೋಪ್ರಾ ನಿರ್ದೇಶನದಲ್ಲಿ ಮೂಡಿಬಂದ ಭಾರತದ ಅತ್ಯದ್ಭುತ ಮಹಾಕಾವ್ಯ ‘ಮಹಾಭಾರತ’ವೂ ಒಂದು. ಇದರಲ್ಲಿ ಬರುವ ಒಂದೊಂದು ಪಾತ್ರಗಳೂ ಬಹಳಷ್ಟು ತೂಕದ್ದೇ ಆಗಿವೆ.
Related Articles
Advertisement
ಆದರೆ ಈ ಧಾರಾವಾಹಿಯಲ್ಲಿ ನಿತೀಶ್ ಮಾಡಲು ಬಯಸಿದ್ದು ವಿದುರನ ಪಾತ್ರವನ್ನಂತೆ. ಆದರೆ ನಿತೀಶ್ ಅವರ ಗೆಳೆಯರೂ ಆಗಿದ್ದ ಬಿ ಆರ್ ಛೋಪ್ರಾ ಅವರು ಈ ಪಾತ್ರ ನಿತೀಶ್ ಗೆ ಹೊಂದುವುದಿಲ್ಲ ಎಂದು ಹೇಳಿದ ಬಳಿಕ ನಿತೀಶ್ ಅಭಿಮನ್ಯು ಪಾತ್ರಕ್ಕೆ ಬೇಡಿಕೆ ಇಟ್ಟಿದ್ದರಂತೆ.
ಆದರೆ ಕೊನೆಗೂ ರವಿ ಛೋಪ್ರಾ ಅವರ ಒತ್ತಾಯದ ಮೇರೆಗೆ ಕೃಷ್ಣನ ಪಾತ್ರಕ್ಕೆ ಸ್ಕ್ರೀನ್ ಟೆಸ್ಟ್ ಕೊಟ್ಟ ನಿತೀಶ್ ಗೆ ಈ ಪಾತ್ರವೇ ಸೆಟ್ ಆಗಿ ಅದರಲ್ಲಿ ಜನಪ್ರಿಯತೆ ಗಳಿಸಿದ್ದು ಮಾತ್ರ ಇದೀಗ ಇತಿಹಾಸ.
ಅಂದಹಾಗೆ ಶ್ರೀ ಕೃಷ್ಣನ ರೀತಿಯ ಬಹುತೂಕದ ಪಾತ್ರವನ್ನು ನಿಭಾಯಿಸಲು ಅನುಭವಿ ನಟನೇ ಆಗಬೇಕೆಂಬ ಕಾರಣಕ್ಕೆ ನಿತೀಶ್ ಅವರು ಈ ಪಾತ್ರವನ್ನು ಪ್ರಾರಂಭದಲ್ಲಿ ನಿರಾಕರಿಸಿದ್ದರು ಎಂಬುದನ್ನು ನಿತೀಶ್ ಇದೀಗ ನೆನಪಿಸಿಕೊಳ್ಳುತ್ತಾರೆ.
ಮಹಾಭಾರತ ಧಾರಾವಾಹಿ ನಿರ್ಮಾಣದ ಸಂದರ್ಭದಲ್ಲಿ ನಿತೀಶ್ ಅವರಿಗೆ 23 ವರ್ಷ ಪ್ರಾಯ. ಹಾಗಾಗಿ ಒಂದು ವೇಳೆ ಅವರು ವಿದುರನ ಪಾತ್ರ ನಿಭಾಯಿಸಿದರೆ ಆ ಪಾತ್ರ ಕೆಲವು ಕಂತುಗಳ ಬಳಿಕ ವೃದ್ಧನಾಗುವುದರಿಂದ ನಿತೀಶ್ ಅವರಿಗೆ ನಂತರ ಕೆಲಸ ಇಲ್ಲದಂತಾಗುತ್ತದೆ ಎಂದು ಯೋಚಿಸಿ ಅವರಿಗೆ ನಕುಲನ ಪಾತ್ರಕ್ಕೆ ಆಹ್ವಾನ ನೀಡಲಾಗಿತ್ತಂತೆ.
ಆದರೆ ನಿತೀಶ್ ಅದನ್ನು ನಿರಾಕರಿಸಿ, ಹಾಗಿದ್ದಲ್ಲಿ ತನಗೆ ಅಭಿಮನ್ಯುವಿನ ಪಾತ್ರವನ್ನು ಕೊಡುವಂತೆ ಕೇಳಿಕೊಂಡಿದ್ದರುಆದರೆ ಆ ಬಳಿಕ ಅವರಿಗೆ ಶ್ರೀ ಕೃಷ್ಣನ ಪಾತ್ರಕ್ಕೆ ಸ್ಕ್ರೀನ್ ಟೆಸ್ಟ್ ನೀಡುವಂತೆ ಸೂಚಿಸಲಾಯಿತು ಎಂಬುದನ್ನು ನಿತೀಶ್ ಅವರು ಈ ಸಂದರ್ಭದಲ್ಲಿ ಇದೀಗ ಮತ್ತೆ ನೆನಪಿಸಿಕೊಂಡಿದ್ದಾರೆ.