Advertisement

ಅಭಿಮಾನಿ ಪತಿಯ ಪ್ರಾಣ ಉಳಿಸಿದ ನಟ ಕಿಚ್ಚ ಸುದೀಪ್

01:07 PM May 16, 2021 | Team Udayavani |

ಬೆಂಗಳೂರು:  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಮೊದಲಿನಿಂದಲೂ ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ನೀಡುತ್ತ ಬಂದಿದ್ದಾರೆ. ಇದೀಗ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಅವರು ಸಾಕಷ್ಟು ಜನರಿಗೆ ಸಹಾಯ ಮಾಡುತ್ತಿದ್ದಾರೆ.

Advertisement

ಸುದೀಪ್ ಅವರು ಇತ್ತೀಚಿಗಷ್ಟೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಪಾಟೀಲ್ ಅವರ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ. ಹಣ ನೀಡಿದ್ದರು. ಇದೀಗ ಮತ್ತೆ ಅಂತಹದೆ ಒಂದು ಮಹತ್ಕಾರ್ಯ ಮಾಡಿದ್ದಾರೆ.

ಕಿಚ್ಚ ತಮ್ಮ ಅಭಿಮಾನಿ ಮಹಿಳೆ ಸೌಮ್ಯ ಎಂಬವರ ಪತಿಯ ಕೊರೋನಾ ಚಿಕಿತ್ಸೆಗೆ ನೆರವಾಗಿ ಮಾನವೀಯತೆ ಮೆರೆದಿರುವುದು ಸುದ್ದಿಯಾಗಿದೆ. ಸುದೀಪ್ ಸಹಾಯ ನೆನೆಸಿಕೊಂಡು ಅಭಿಮಾನಿ ಸೌಮ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ಮೂಲಕ ಕಣ್ಣೀರು ಹಾಕುತ್ತಲೇ ಧನ್ಯವಾದ ಸಲ್ಲಿಸಿದ್ದಾರೆ.

ಸುದೀಪ್ ಸರ್ ನನ್ನ ಗಂಡನ ಜೀವ ಉಳಿಸಿದ್ರು ಮುಂದಿನ ಜನ್ಮವಿದ್ದರೆ ಕಿಚ್ಚನ ಅಭಿಮಾನಿಯೇ ಹುಟ್ಟುತ್ತೇನೆ ಎಂದು ಭಾವುಕರಾಗಿ ಹೇಳಿದ್ದಾರೆ.

ಇನ್ನು ಕಿಚ್ಚ ಸುದೀಪ್ ಅವರು ಕೋವಿಡ್ ಕಾಲದಲ್ಲಿ ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next