Advertisement

ಸತ್ಯ ಹೇಳಿ ಮುಗಿಸುವೆ, ಚರ್ಚೆಬೇಡ

12:09 PM Nov 30, 2020 | Suhan S |

ಚಿತ್ರರಂಗಕ್ಕೆಕಾಲಿಟ್ಟು ನಲವತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ನಟ ಜಗ್ಗೇಶ್‌ ಇತ್ತೀಚೆಗೆ ಪತ್ರಿಕಾಗೋಷ್ಟಿಯನ್ನುಕರೆದು, ಪತ್ರಕರ್ತರು ಮತ್ತು ಮಾಧ್ಯಮಗಳ ಮುಂದೆ ತಮ್ಮ ನಾಲ್ಕು ದಶಕದ ಸಿನಿಯಾದ ಏಳು-ಬೀಳುಗಳನ್ನು ಮೆಲುಕು ಹಾಕಿದ್ದರು.

Advertisement

ಇದೇ ವೇಳೆ ಜಗ್ಗೇಶ್‌, “ಕನ್ನಡ ಚಿತ್ರರಂಗವನ್ನು ಹಾಗೂ ಕನ್ನಡತನವನ್ನು ಉಳಿಸೋದು ಮುಖ್ಯ. ಯಾವುದೋ ಅದು ಪ್ಯಾನ್‌ ಇಂಡಿಯಾ…? ಪ್ಯಾನ್‌ ಇಂಡಿಯಾ ಸಿನಿಮಾ ಬಂದು ನಮ್ಮನ್ನ ಉದ್ದಾರ ಮಾಡೋಲ್ಲಾ. ಪ್ಯಾನ್‌ ಇಂಡಿಯಾದಿಂದ ನಮ್ಮಕನ್ನಡಿರಿಗೆ ಕೆಲಸ ಇಲ್ಲ. ಯಾರನ್ನೋ ಮೆಚ್ಚಿಸೋಕೆ ಪ್ಯಾನ್‌ ಇಂಡಿಯಾ ಸಿನಿಮಾ ಮಾಡೋ ಹಾಗಿದೆ. ಇದರಿಂದ ನಮ್ಮ ನೆಲದ ಜನರಿಗೆ ಕೆಲಸ ಇಲ್ಲದಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಜಗ್ಗೇಶ್‌ ಅವರ ಈ ಹೇಳಿಕೆ ಬಳಿಕ ವಿವಾದ ಸ್ವರೂಪ ಪಡೆದುಕೊಂಡಿತ್ತು. ಪ್ಯಾನ್‌ ಇಂಡಿಯಾ ಪರಿಕಲ್ಪನೆ ಬಂದ ಬಳಿಕಕನ್ನಡ ಚಿತ್ರರಂಗ ಬೇರೊಂದು ಹಂತಕ್ಕೆ ಹೋಗುತ್ತಿದೆ, ಅದು ಗೊತ್ತಿಲ್ಲದೇ ಮಾತನಾಡಬೇಡಿ ಎಂದುಕೆಲವರು ಸೋಶಿಯಲ್‌ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಜಗ್ಗೇಶ್‌ ಪ್ಯಾನ್‌ ಇಂಡಿಯಾ ಸಿನಿಮಾ ಹೇಳಿಕೆ ವಿವಾದಕ್ಕೊಳಗಾಗಿ, ಸಾಕಷ್ಟು ಪರ-ವಿರೋಧ ಮಾತುಗಳುಕೇಳಿಬರುತ್ತಿದ್ದಂತೆ, ಟ್ವೀಟ್‌ ಮಾಡಿರುವ ಜಗ್ಗೇಶ್‌ ಈ ಚರ್ಚೆಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. “ತುಂಬಾ ಚರ್ಚೆ ಬೇಡ ಒಂದು ಸತ್ಯಹೇಳಿ ಮುಗಿಸುವೆ. ಸ್ನೇಹಿತರೆ ಇಂದಿನಕೆಲ ಸ್ವ ಪ್ರತಿಷ್ಠೆ ನಟರಿಗೆ ನಮ್ಮಂಥ ಸೀನಿಯಾರಿಟಿ ನಟರು ತೊಡಕಾಗಿದ್ದೇವೆ! ನಾವು ಹೋದರೆ ಅಥವಾ ಸತ್ತರೆ ಇವರೆ ವಾರಸುದಾರರು ಎಂಬ ಕೆಟ್ಟ ಚಿಂತೆ ಇದೆ! ಕೆಲ ನಟರ ಆಡಿಯೋ ಸಂಭಾಷೆಯನ್ನು ಕೇಳಿಸಿದ್ದಾರೆ. ಹೀಗಿರಬೇಕಾದರೆ ಇಂದಿನ ಚಿಂತನೆ, ರಾಯರಿಗೆ ಒಪ್ಪಿಸಿ ಶಕ್ತಿ ಇರುವಷ್ಟು ದುಡಿಯುತ್ತೇವೆ’ ಎಂದು ಟ್ವೀಟ್‌ ಮಾಡಿದ್ದಾರೆ ಜಗ್ಗೇಶ್‌.

Advertisement

Udayavani is now on Telegram. Click here to join our channel and stay updated with the latest news.

Next