Advertisement
ಜಾಕ್ವೆಲಿನ್, ಸುಕೇಶ್ ನಡುವೆ ಅಕ್ರಮ ಹಣ ವರ್ಗಾವಣೆ ಆಗಿರುವ ಬಗ್ಗೆ ಸಾಕ್ಷ್ಯಾಧಾರಗಳನ್ನು ಜಾರಿ ನಿರ್ದೇಶನಾಲಯ ಕಲೆಹಾಕಿದೆ. ಆ ಹಿನ್ನೆಲೆಯಲ್ಲಿ ಜ್ಯಾಕ್ವೆಲಿನ್‌ರ ವಿರುದ್ಧ “ಲುಕ್ ಔಟ್ ಸರ್ಕ್ಯುಲರ್ ‘ ಜಾರಿ ಗೊಳಿಸಲಾಗಿದ್ದು ಅದರ ಅಡಿಯಲ್ಲೇ ನಟಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಅವರನ್ನು ವಿಚಾರಣೆಗಾಗಿ ದೆಹಲಿಗೆ ಕರೆತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸುಕೇಶ್ ಚಂದ್ರಶೇಖರ್‌ನಿಂದ ಈಕೆ, 10 ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ಪಡೆದಿದ್ದು, ಅದರಲ್ಲಿ 52 ಲಕ್ಷ ರೂ. ಮೌಲ್ಯದ ಕುದುರೆ, 9 ಲಕ್ಷ ರೂ. ಮೌಲ್ಯದ ಪರ್ಷಿಯಾ ದೇಶದ ಬೆಕ್ಕು ಸೇರಿದೆ.