Advertisement

ಸಿನಿಮಾ ಕಾರ್ಯಕ್ರಮಗಳಲ್ಲಿ ದರ್ಶನ್‌ ಬಿಝಿ

03:11 PM Jul 22, 2018 | |

ದರ್ಶನ್‌ ಅವರನ್ನು ತಮ್ಮ ಸಿನಿಮಾ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು, ಅವರಿಂದ ಆಡಿಯೋ ರಿಲೀಸ್‌ ಮಾಡಿಸಬೇಕು, ಟ್ರೇಲರ್‌ ರಿಲೀಸ್‌ ಮಾಡಿಸಬೇಕೆಂದು ಬಯಸುವವರ ಸಂಖ್ಯೆಯೇನು ಕಮ್ಮಿ ಇಲ್ಲ. ಅದಕ್ಕೆ ಸರಿಯಾಗಿ, ದರ್ಶನ್‌ ತಮ್ಮ ಬಿಝಿ ದಿನಚರಿಯ ಮಧ್ಯೆಯೂ ಸಾಧ್ಯವಾದಷ್ಟು ಹೊಸಬರನ್ನು ಪ್ರೋತ್ಸಾಹಿಸುತ್ತಾ,
ಅವರ ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತಾರೆ.

Advertisement

ಇನ್ನೂ ಕೆಲವರು ದರ್ಶನ್‌ ಅವರ ಮನೆಗೆ ಹೋಗಿ ಅವರಿಂದ ಟ್ರೇಲರ್‌ ರಿಲೀಸ್‌ ಮಾಡಿಸಿಕೊಂಡು ಬರುತ್ತಾರೆ. ಹೀಗೆ ಇತ್ತೀಚಿನ ದಿನಗಳಲ್ಲಿ ದರ್ಶನ್‌ ಒಂದಷ್ಟು ಸಿನಿಮಾ ಕಾರ್ಯಕ್ರಮ ಗಳಲ್ಲಿ ಭಾಗಿಯಾಗಿದ್ದಾರೆ. “ಫೈಟರ್‌’, “ಜಂಟಲ್‌ಮಾÂನ್‌’, “ಕುಮಾರಿ 21 ಎಫ್’, “ವಾಸು ನಾನ್‌ ಪಕ್ಕಾ ಕಮರ್ಷಿಯಲ್‌’, “ಬಜಾರ್‌’ ಚಿತ್ರಗಳಿಗೆ ದರ್ಶನ್‌
ಸಾಥ್‌ ನೀಡಿದ್ದಾರೆ.

ವಿನೋದ್‌ ಪ್ರಭಾಕರ್‌ ಹಾಗೂ ದರ್ಶನ್‌ ಒಳ್ಳೆಯ ಸ್ನೇಹಿತರು. ವಿನೋದ್‌ ಅವರ ಅನೇಕ ಚಿತ್ರಗಳಿಗೆ ದರ್ಶನ್‌ ಕ್ಲಾéಪ್‌ ಮಾಡಿದ್ದಾರೆ. ಅದರಂತೆ ಇತ್ತೀಚೆಗೆ “ಫೈಟರ್‌’ ಚಿತ್ರದ ಮುಹೂರ್ತಕ್ಕೂ ದರ್ಶನ್‌ ಅವರೇ ಕ್ಲಾéಪ್‌
ಮಾಡಿದ್ದಾರೆ. ಇನ್ನು ಪ್ರಜ್ವಲ್‌ ದೇವರಾಜ್‌ ಅವರ “ಜಂಟಲ್‌ಮಾÂನ್‌’ ಚಿತ್ರದ ಮುಹೂರ್ತ ಕೂಡಾ ಇತ್ತೀಚೆಗೆ ನಡೆದಿದ್ದು, ಈ ಚಿತ್ರಕ್ಕೂ ದರ್ಶನ್‌ ಅವರೇ ಕ್ಲಾéಪ್‌ ಮಾಡಿ ಶುಭಕೋರಿದ್ದಾರೆ.

ದರ್ಶನ್‌, ಪ್ರಜ್ವಲ್‌, ದೇವರಾಜ್‌ ಈ ಮೂವರು ಒಳ್ಳೆಯ ಸ್ನೇಹಿತರು. ಈ ಕಾರಣದಿಂದ ಪ್ರಜ್ವಲ್‌ ಕುಟುಂಬದ ಸಿನಿಮಾ ಕಾರ್ಯಕ್ರಮಗಳಿಗೆ ದರ್ಶನ್‌ ಸಾಥ್‌ ನೀಡುತ್ತಾರೆ. ಇನ್ನು, “ಕುಮಾರಿ 21ಎಫ್’ ಚಿತ್ರದ ಟ್ರೇಲರ್‌ ಅನ್ನುಕೂಡಾ ದರ್ಶನ್‌ಬಿಡುಗಡೆ ಮಾಡಿದ್ದರು. ಇದು ಪ್ರಜ್ವಲ್‌ ದೇವರಾಜ್‌ ಸಹೋದರ ಪ್ರಣಾಮ್‌ ದೇವರಾಜ್‌
ನಾಯಕರಾಗಿ ನಟಿಸಿರುವ ಚೊಚ್ಚಲ ಸಿನಿಮಾ.

ಈ ಚಿತ್ರದ ಟ್ರೇಲರ್‌ ಅನ್ನು ಕೂಡಾ ದರ್ಶನ್‌ ಇತ್ತೀಚೆಗೆ ತಮ್ಮ ಮನೆಯಲ್ಲೇ ಬಿಡುಗಡೆ ಮಾಡಿದ್ದರು. ಅನೀಶ್‌ ತೇಜೇಶ್ವರ್‌ ನಾಯಕರಾಗಿರುವ “ವಾಸು ನಾನ್‌ ಪಕ್ಕಾ ಕಮರ್ಷಿಯಲ್‌’ ಚಿತ್ರದ ಆಡಿಯೋ ರಿಲೀಸ್‌ ಮಾಡಿದ್ದಾರೆ. ಇದಷ್ಟೇ ಅಲ್ಲದೇ, ಹೊಸ ಹುಡುಗ, ಧನ್‌ವೀರ್‌ ನಾಯಕರಾಗಿರುವ ಸುನಿ ನಿರ್ದೇಶನದ “ಬಜಾರ್‌’ ಚಿತ್ರದ ಆಡಿಯೋ ರಿಲೀಸ್‌ಗೂ ಅತಿಥಿಯಾಗಿ ಬರಲು ದರ್ಶನ್‌ ಒಪ್ಪಿಕೊಂಡಿದ್ದಾರೆ. ಹೀಗೆ ದರ್ಶನ್‌ ಸಾಲು ಸಾಲು
ಸಿನಿಮಾಗಳ ಪ್ರಚಾರಕ್ಕೆ ಸಾಥ್‌ ನೀಡುತ್ತಿದ್ದಾರೆ.

Advertisement

ಸದ್ಯ “ಕುರುಕ್ಷೇತ್ರ’ ಮುಗಿಸಿರುವ ದರ್ಶನ್‌ “ಯಜಮಾನ’ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಈ ಗ್ಯಾಪ್‌ನಲ್ಲಿ ತಮ್ಮ ಸ್ನೇಹಿತರ, ಹೊಸಬರ ಸಿನಿಮಾಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next