Advertisement

ಡ್ರಗ್ಸ್ ಪ್ರಕರಣ: ಬಾಲಿವುಡ್ ನಟ ಅಜಾಜ್ ಖಾನ್ ರನ್ನು ಬಂಧಿಸಿದ ಎನ್ ಸಿಬಿ ಅಧಿಕಾರಿಗಳು

08:46 AM Mar 31, 2021 | Team Udayavani |

ಮುಂಬೈ: ಬಾಲಿವುಡ್ ನಟ ಮತ್ತು ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಅಜಾಜ್ ಖಾನ್ ಅವರನ್ನು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.

Advertisement

ಇದಕ್ಕೂ ಮೊದಲು ಮಂಗಳವಾರ ಸಂಜೆ(30-3-2021) ಮುಂಬೈನ ವಿಮಾನ ನಿಲ್ದಾಣದಲ್ಲಿ ಖಾನ್ ಅವರನ್ನು ವಶಕ್ಕೆ ಪಡೆದ ಮಾದಕ ವಸ್ತು ನಿಯಂತ್ರಣ ದಳ( ಎನ್ ಸಿಬಿ , ) ಸತತ ಎಂಟು ಗಂಟೆಗಳ ಕಾಲ ಅವರನ್ನು ವಿಚಾರಣೆಗೊಳಪಡಿಸಿತ್ತು.

ಡ್ರಗ್ ಪೆಡ್ಲರ್ ಶಾದಾಬ್ ಬಟಾಟಾ ಅವರ ವಿಚಾರಣೆ ನಡೆಸುವ ಸಂದರ್ಭದಲ್ಲಿ ಅಜಾಜ್ ಖಾನ್ ಹೆಸರು ಕೂಡ ಪ್ರಕರಣದಲ್ಲಿ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಅಜಾಜ್ ಖಾನ್ ಜೊತೆಗೆ ಅಂಧೇರಿ ಮತ್ತು ಲೋಖಾಂಡವಾಲಾ ಪ್ರದೇಶಗಳಲ್ಲಿ ಶೋಧಕಾರ್ಯ ನಡೆಸಿದೆ.

ಇದನ್ನೂ ಓದಿ: ಬಳಕೆದಾರರ ಡೇಟಾ ಸಂಗ್ರಹಿಸಲು ಮುಗಿಬಿದ್ದಿವೆ ಈ ಆ್ಯಪ್ ಗಳು; ಗೂಗಲ್ ಪಾಲೆಷ್ಟು ಗೊತ್ತಾ ?

ಕಳೆದ ವರ್ಷ ಏಪ್ರಿಲ್ ನಲ್ಲಿ ಕೂಡ, ದುರುದ್ದೇಶಪೂರಿತ ಭಾಷಣ, ನಿಷೇಧಿತ ಆದೇಶಗಳ ಉಲ್ಲಂಘನೆ, ಮಾನನಷ್ಟ ಮೊಕದ್ದಮೆಯಡಿಯಲ್ಲಿ ಅಜಾಜ್ ಖಾನ್ ಅವರನ್ನು ಬಂಧಿಸಲಾಗಿತ್ತು.

Advertisement

ಅಜಾಜ್ ಖಾನ್ ಹಲವಾರು ಹಿಂದಿ ಮತ್ತು ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ಮಾತ್ರವಲ್ಲದೆ ಬಿಗ್ ಬಾಸ್ 7 ಸೀಸನ್ ನಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ:  ನಿತ್ಯಭವಿಷ್ಯ: ಈ ರಾಶಿಯವರಿಗೆ ಶತ್ರುಗಳೇ ಅಚ್ಚರಿಗೊಳ್ಳುವಂತೆ ಯಶಸ್ಸು ಸಿಗಲಿದೆ !

Advertisement

Udayavani is now on Telegram. Click here to join our channel and stay updated with the latest news.

Next