Advertisement

who is he ? : ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ತಿರುಗೇಟು ಕೊಟ್ಟ ಅಭಿಷೇಕ್ ಅಂಬರೀಶ್

04:30 PM Jul 09, 2021 | Team Udayavani |

ಬೆಂಗಳೂರು :  ಸುಮಲತಾ ಏಕಾಂಗಿ ಅಲ್ಲ, ಅವರ ಹಿಂದೆ ನಾವಿದ್ದೇವೆ, ಮಂಡ್ಯದ ಜನ ಇದ್ದಾರೆ ಲಕ್ಷಾಂತರ ಜನ ಅಂಬರೀಶ್ ಅವರ ಅಭಿಮಾನಿಗಳಿದ್ದಾರೆ ಎಂದು ನಟ ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.

Advertisement

ಇಂದು (ಜುಲೈ 09)  ಖಾಸಗಿ ಮಾಧ್ಯಮವೊಂದಕ್ಕೆ ಮಂಡ್ಯದಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷದ ವಿಚಾರವಾಗಿ ಪ್ರತಿಕ್ರಿಯಿಸಿದ ಅಭಿ, ನಾನು ಮೊದಲಿನಿಂದಲೂ ರಾಜಕೀಯಕ್ಕೆ ತಲೆ ಹಾಕುವುದಿಲ್ಲ. ಈ ಬಗ್ಗೆ ಜಾಸ್ತಿ ಮಾತನಾಡುವುದಕ್ಕೆ ಹೋಗುವುದಿಲ್ಲ. ಸುಮಲತಾ ಅವರು ಏಕಾಂಗಿಯಲ್ಲ, ಅವರ ಜೊತೆ ನೀವು-ನಾವು ಹೀಗೆ ಸುಮಾರ ಜನ ಇದ್ದಾರೆ ಎಂದರು.

ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರ ತೆಗೆದುಕೊಂಡ ಹೋದ ವಿಚಾರಕ್ಕೆ ಖಡಕ್ ಆಗಿಯೇ ಪ್ರತಿಕ್ರಿಯಿಸಿದ ಅಭಿ, ಪದೇ ಪದೆ ಈ ವಿಚಾರ ಮಾತನಾಡಿ ಯಾವ ಪ್ರಯೋಜನವು ಇಲ್ಲ. 2018 ನವೆಂಬರ್ 24 ರಂದು ಅಂಬರೀಶ್ ಅವರು ಮಡಿದ ದಿನದಂದು ಮಿಡಿಯಾಗಳ ಮುಂದೆ ಯಾರು ಏನೂ ಮಾತನಾಡಿದ್ದಾರೋ ಅದನ್ನಾ ನೀವೇ ಒಂದು ಸಾರಿ ನೋಡಿ, ಜನರ ಮುಂದೆ ಇಡಿ. ಮೊದಲ ಯಾರು ಮಾತಾಡಿದರು, ಏನು ಹೇಳಿದರು ಅವತ್ತು, ಯಾರು ಕರಕೊಂಡ ಹೋಗಬೇಕು ಅಂತಿದ್ದಾರೆ, ಯಾರು ತಡಿಯುತ್ತಿದ್ದಾರೆ ಎಂಬುದನ್ನೆಲ್ಲ ಅವರೇ ಮಾತಾಡಿದ್ದಾರೆ. ಆ ಬಗ್ಗೆ ನಾವು ಈಗ ಮಾತಾಡುವ ಅಗತ್ಯತೆ ಇಲ್ಲ ಎಂದರು.

ಇನ್ನು ಸುಮಲತಾ ಅವರನ್ನು ನಟೋರಿಯಸ್ ಎಂದಿರುವ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ ಪ್ರತಿಕ್ರಿಯಿಸಿದ ಅಭಿ, who is he ? ನನಗೆ ಯಾರವನು ? ನಟೋರಿಯಸ್ ಅಂತಾ ಹೇಳಲು ಯಾರವನು ? ಒಂದು ವೇಳೆ ಅವನಲ್ಲಿ ಸಮಸ್ಯೆ ಇದ್ರೆ ಅಸೆಂಬ್ಲಿಗೆ ಹೋಗಿ ಮಾತಾಡಲಿ. ಅಕ್ರಮ ಗಣಿಗಾರಿಕೆ ತಪ್ಪು ಎಂದು ಹೇಳಿದರು  ನಟೋರಿಯಸ್ ಎನ್ನುವುದಾದರೆ ನಾವು 100% ನಟೋರಿಯಸ್ ನೋಡಿ ಎಂದು ಅಭಿ ತಿರುಗೇಟು ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next