Advertisement

ಚೈನೀಸ್‌ ಮಾಂಜಾ ನಿಷೇಧ: ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಆಗ್ರಹ

03:38 PM Jan 02, 2017 | Team Udayavani |

ಜೈಪುರ : ಮಕರ ಸಂಕ್ರಾಂತಿಯಂದು ನಡೆಯಲಿರುವ ಗಾಳಿಪಟ ಉತ್ಸವಕ್ಕೆ ಮುನ್ನ ಚೈನೀಸ್‌ ಮಾಂಜಾ (ಗಾಳಿಪಟದ ದಾರ) ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಕಾರ್ಯಕರ್ತರು ರಾಜಸ್ಥಾನ ಸರಕಾರವನ್ನು ಆಗ್ರಹಿಸಿದ್ದಾರೆ.

Advertisement

“ಚೈನೀಸ್‌ ಮಾಂಜಾ’ ಎಂದೇ ಜನಜನಿತವಾಗಿರುವ ಗಾಳಿ ಪಟ ದಾರವು ಅತ್ಯಂತ ಹರಿತವಾಗಿದ್ದು  ಬಾನೆತ್ತರದಲ್ಲಿ ಇದಕ್ಕೆ ಢಿಕ್ಕಿ ಹೊಡೆಯುವ ಹಕ್ಕಿಗಳು ಗಾಯಗೊಂಡು ಆಗಸದಿಂದ ಭೂಮಿಗೆ ಪತನಗೊಳ್ಳುತ್ತವೆ ಎಂದು ರಾಜಸ್ಥಾನದ ಜನ ಮಂಚ್‌ ಪಕ್ಷಿ ಚಿಕಿತ್ಸಾಲಯದ ಕಾರ್ಯಕರ್ತರು ಹೇಳಿದ್ದಾರೆ. ಹೀಗೆ ಗಾಯಗೊಂಡು ನೆಲಕ್ಕೆ ಬೀಳುವ ಪಕ್ಷಿಗಳ ಚಿಕಿತ್ಸೆಗಾಗಿ ನಗರದ ವಿವಿಧ ಪ್ರದೇಶಗಳಲ್ಲಿ ಶಿಬಿರಗಳನ್ನು ಆಯೋಜಿಸಲು ಸಂಘಟನೆಯು ನಿರ್ಧರಿಸಿದೆ.

ಚೈನೀಸ್‌ ಮಾಂಜಾ ನಿಷೇಧವು ಪಕ್ಷಿಗಳ ಸಮಸ್ಯೆಗೆ ಪರಿಹಾರವಾಗದು; ಆದರೂ ಚೈನೀಸ್‌ ಮಾಂಜಾ ಮಾರಾಟದ ಮೇಲೆ ಕಠಿನ ಕ್ರಮ ತೆಗೆದುಕೊಳ್ಳುವುದು ಅಗತ್ಯ ಎಂದಿರುವ ಸಂಘಟನೆ, ಜನರು ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಗಾಳಿಪಟ ಹಾರಿಸಬಾರದು ಎಂದು ಕೇಳಿಕೊಂಡಿದೆ.

ಪಕ್ಷಿ ಚಿಕಿತ್ಸಾಲಯದ ನಿರ್ದೇಶಕ ಕಮಲ್‌ ಲೋಚನ್‌ ಅವರು ಜನವರಿ 8ರಿಂದ ಪಕ್ಷಿ ಚಿಕಿತ್ಸಾ ಶಿಬಿರಗಳು ಆರಂಭಗೊಳ್ಳುತ್ತವೆ. ಗಾಯಗೊಂಡು ನೆಲಕ್ಕೆ ಬೀಳುವ ಪಕ್ಷಿಗಳನ್ನು ಸಮೀಪದ ಚಿಕಿತ್ಸಾಲಯಗಳಿಗೆ ಒಯ್ಯುವದಕ್ಕಾಗಿ 28 ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next