Advertisement

ಬಿಎಸ್‌ವೈ ಎದುರೇ ಕಾರ್ಯಕರ್ತರ ಕಿತ್ತಾಟ

02:02 PM Apr 14, 2022 | Team Udayavani |

ರಬಕವಿ-ಬನಹಟ್ಟಿ: ತೇರದಾಳ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ದಂಡು ಬೆಳಗಾವಿ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ನಡೆದ ಬಿಜೆಪಿ ಕೋರ್‌ ಕಮಿಟಿಯಲ್ಲಿ ರಾಜ್ಯ ಉಸ್ತುವಾರಿ ಅರುಣ ಸಿಂಗ್‌, ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಬರುವ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್‌ ನೀಡಬೇಕೆಂದು ಒತ್ತಾಯಿಸಲು ತೆರಳಿದ್ದ ಕಾರ್ಯಕರ್ತರೊಂದಿಗೆ ಶಾಸಕ ಸಿದ್ದು ಸವದಿ ವಾಗ್ವಾದ ನಡೆಸಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

Advertisement

ಹಳೇ ಕಾರ್ಯಕರ್ತರ ಮೇಲೆ ದೌರ್ಜನ್ಯ ಹಾಗೂ ಪಕ್ಷ ನಿಷ್ಠೆಗಾಗಿ ದುಡಿದ ಮುಖಂಡರಿಗೆ ನ್ಯಾಯ ಒದಗಿಸಬೇಕೆಂದು ಕೋರಿ ತೇರದಾಳ ಕ್ಷೇತ್ರದಿಂದ ತೇರದಾಳದ ಬಸವರಾಜ ಬಾಳಿಕಾಯಿ, ಬನಹಟ್ಟಿಯ ಭೀಮಶಿ ಮಗದುಮ್‌, ಮಹಾಲಿಂಗಪುರದ ಶೇಖರ ಅಂಗಡಿ, ರಬಕವಿಯ ಬಸವರಾಜ ದಲಾಲ, ಆಸಂಗಿಯ ಹರ್ಷವರ್ಧನ ಪಟವರ್ಧನ ಸೇರಿದಂತೆ 30ಕ್ಕೂ ಅಧಿಕ ಕಾರ್ಯಕರ್ತರು ತೆರಳಿದ್ದರು.

ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸುವ ವೇಳೆ ಶಾಸಕ ಸಿದ್ದು ಸವದಿ ಜತೆ ವಾಗ್ವಾದ ನಡೆದು ಏಕವಚನಗಳ ಮಾತಿನ ಪ್ರಯೋಗದಿಂದ ಇರುಸು-ಮುರುಸು ಉಂಟಾಯಿತು. ಕ್ಷೇತ್ರದಲ್ಲಿ ಪಕ್ಷ ಕಟ್ಟುವ ಸಂದರ್ಭ ಸಾಕಷ್ಟು ಪ್ರಕರಣ ಮೈಮೇಲೆ ಹಾಕಿಕೊಂಡು ಶ್ರಮಿಸಿದ್ದೇವೆ. ಪಕ್ಷದ ಮುಖಂಡರೊಂದಿಗೆ ಸಾಧಕ-ಬಾಧಕಗಳ ಚರ್ಚೆ ಮುಕ್ತವಾಗಿದೆ. ಕಾರ್ಯಕರ್ತರ ಆಹ್ವಾನ ನಿಮಿತ್ತ ತೆರಳಿದ್ದೆವು.

ಆ ಸಂದರ್ಭದಲ್ಲಿ ವಿನಾಕಾರಣ ಶಾಸಕ ಸವದಿ ಮನಬಂದಂತೆ ಅಶ್ಲೀಲ ಪದ ಬಳಸಿ ಕಾರ್ಯಕರ್ತರನ್ನು ಅವಮಾನಿಸಿದ್ದಾರೆ ಎಂದು ಬಸವರಾಜ ಬಾಳಿಕಾಯಿ ದೂರಿದರು.

ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಪಕ್ಷದ್ರೋಹಿಗಳ ಗುಂಪು ಪಕ್ಷದ ಅಂಗಳಕ್ಕೆ ಬಂದಿತ್ತು. ಜೆಡಿಎಸ್‌ ಪಕ್ಷದಲ್ಲಿದ್ದು, ಬಿಜೆಪಿಯಲ್ಲಿದ್ದೇನೆಂದು ನಾಟಕವಾಡುವದು ಎಷ್ಟು ಸರಿ? 2013ರಲ್ಲಿ ಕೆಜೆಪಿ ಪಕ್ಷದಿಂದ ಸ್ಪರ್ಧಿಸಿ ಅಲ್ಪಮತಗಳ ಅಂತರದ ಸೋಲಿಗೆ ಕಾರಣವಾದವನು ಅರ್ಹತೆಯಿಲ್ಲದೆ ಬಂದಿದ್ದಾರೆ. ಉಂಡ ಮನೆಗೆ ದ್ರೋಹ ಬಗೆಯುವ ಜಾಯಮಾನದವರಾಗಿದ್ದು, ಪಕ್ಷದಿಂದಲೇ ಬಿಡಿಸಿಸಿ, ಕೆಎಂಎಫ್‌ ಸೇರಿದಂತೆ ಇತರೆ ಹುದ್ದೆ ಅಲಂಕರಿಸಿ ಇದೀಗ ವಿರೋಧವಾಗುತ್ತಿದ್ದಾರೆ. ಕಾರ್ಯಕರ್ತರು ಇವರಿಗೆ ಛೀಮಾರಿ ಹಾಕಿದ್ದು, ಹೈಕಮಾಂಡ್‌ ಮುಂದೆ ನೈತಿಕತೆಯಿಲ್ಲದಿದ್ದರೂ ಮೊಂಡುತನ ಪ್ರದರ್ಶಿಸಿದ್ದಾರೆ ಎಂದರು.

Advertisement

ನಾನೇ ಅಭ್ಯರ್ಥಿ: ಹಿತಶತ್ರುಗಳಂತೆ ಬೆನ್ನಿಗೆ ಚೂರಿ ಹಾಕುವವರ ವಿರುದ್ಧ ಎಚ್ಚರವಾಗಿದ್ದೇನೆ. ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಪಡೆಯ ಒತ್ತಾಯದಿಂದ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಷ್ಟೇ ಅಲ್ಲದೇ ಹಳೇ ಗೆಲುವಿನ ನನ್ನ ದಾಖಲೆ ನಾನೇ ಮುರಿಯುತ್ತೇನೆ. ಇಂತಹ ಕೊಳೆತ, ರಿಜೆಕ್ಟೆಡ್‌ ಗೂಡ್ಸ್‌ನಂತೆ ಇವೆ. ಹತಾಶ ಭಾವನೆಯಿಂದ ಪಕ್ಷದ ಮುಖಂಡರ ಮುಂದೆ ಬಂದು ನಿಂತಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next