Advertisement
ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜುಬಿಲಿ ಸಭಾಂಗಣ ದಲ್ಲಿ ಸೋಮವಾರ “ರಾಜಕೀಯ ಸುಧಾ ರಣೆಯ ಅಗತ್ಯ’ ಕುರಿತು 25ನೇ ನಾಯಕತ್ವ ಸರಣಿ ಉಪನ್ಯಾಸ ವನ್ನು ನೀಡಿದ ಅವರು ದೇಶ ಎದುರಿಸು ತ್ತಿರುವ ವಿವಿಧ ಸಮಸ್ಯೆಗಳು ಮತ್ತು ವಿವಿಧೆಡೆ ಅದ್ಭುತ ಸಾಧನೆ ಮಾಡುವ ಉದಾಹರಣೆಗಳನ್ನು ಉಲ್ಲೇಖೀಸಿದರು. ನೇರ ಪ್ರಜಾಪ್ರಭುತ್ವದಲ್ಲಿ ಆನ್‌ಲೈನ್ ದೂರುಗಳು ದಾಖಲಾಗಿ ಜನ ಪ್ರತಿನಿಧಿ ಗಳು ಅದಕ್ಕೆ ಪ್ರತಿಕ್ರಿಯೆ ನೀಡು ವಂತಿರಬೇಕು. ಪ್ರತಿ ಕಾಮಗಾರಿಯನ್ನು ಜನರು ಕೇಳುವಂತಾಗಬೇಕು. ಕಾಮಗಾರಿಯ ಮುಂದೆ ವಿವರಗಳು ಲಗತ್ತಿ ಸಿರ ಬೇಕು ಎಂದರು. ಮುದ್ರಾ ಯೋಜನೆ ಯಲ್ಲಿ ಯುವಕರು ತಮ್ಮ ಚಿಂತನೆ ಗಳನ್ನು ಹರಿಬಿಡುವುದಕ್ಕೆ ಅವಕಾಶ ಗಳಿವೆ ಎಂದರು.
ಜನರಿಗೆ ಸಮ್ಮತಿ ಇಲ್ಲದಿದ್ದರೆ ಜನ ಪ್ರತಿನಿಧಿಯನ್ನು ವಾಪಸು ಕರೆಸಿ ಕೊಳ್ಳಲು ಖಾಸಗಿ ಮಸೂದೆಯನ್ನು ಮಂಡಿ ಸಿದ್ದೇನೆ. ಇದು ಮುಂದಿನ ದಿನ ಗಳಲ್ಲಿ ಯಾದರೂ ಜಾರಿಗೊಳ್ಳಬಹುದು ಎಂದರು. ಕೃಷಿಕರ ಸಮಸ್ಯೆಗಳಿಗೆ ಕಾರಣ
ಕೃಷಿಕರ ಆತ್ಮಹತ್ಯೆಗಳನ್ನು ಉಲ್ಲೇಖೀಸಿದ ಅವರು ಕೃಷಿ ಭೂಮಿ ಬಾಡಿಗೆಗೆ ಕೊಡುವುದು ನಿಷೇಧದಲ್ಲಿದ್ದರೂ ಬಹು ತೇಕ ರಾಜ್ಯಗಳಲ್ಲಿ ಕೃಷಿಕರು ಇಂದಿಗೂ ಗೇಣಿದಾರರಾಗಿದ್ದಾರೆ. ಇವರಿಗೆ ನೇರ ವಾಗಿ ಕೃಷಿಕರಿಗೆ ಸಿಗಬೇಕಾದ ಬ್ಯಾಂಕ್ ಸೌಲಭ್ಯಗಳು ಸಿಗುವುದಿಲ್ಲ. ಇದೇ ನಿದ್ದರೂ ಭೂ ಹಿಡುವಳಿದಾರರಿಗೆ ಸಿಗು ತ್ತದೆ. ನೀತಿ ಆಯೋಗ ಕೃಷಿಕರ ರಕ್ಷಣೆಗೆ ಮುಂದಾದರೂ ಮಧ್ಯಪ್ರದೇಶ ಹೊರತು ಪಡಿಸಿ ಇತರ ಯಾವ ರಾಜ್ಯ ಗಳೂ ಬೆಂಬಲ ನೀಡಲಿಲ್ಲ ಎಂದರು.
Related Articles
Advertisement
ಕೊಲೆ ಮಾಡಿದ ಆರೋಪ ಹೊಂದಿದ ವ್ಯಕ್ತಿಯೊಬ್ಬ ನ್ಯಾಯ ವಿಳಂಬದಿಂದಾಗಿ ರಾಜ್ಯದ ಡಿಜಿಪಿ ಮಟ್ಟಕ್ಕೆ ಏರುತ್ತಾನೆ, ಲಕ್ನೋದಲ್ಲಿ ಅತ್ಯಾಚಾರ ಮಾಡಿದ ವ್ಯಕ್ತಿಯೊಬ್ಬ ಕಳೆದ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಯಾದ ಎಂದು ವರುಣ್ ಬೆಟ್ಟು ಮಾಡಿದರು.
ವೇತನ ಹೆಚ್ಚಳಕ್ಕೆ ನೈತಿಕತೆ ಇಲ್ಲ1952-72ರ ಅವಧಿಯಲ್ಲಿ ವರ್ಷ ದಲ್ಲಿ 140 ದಿನ ಸಂಸತ್‌ನಲ್ಲಿ ಅಧಿ ವೇಶನ, ಚರ್ಚೆಗಳು ನಡೆದರೆ ಬಳಿಕ 57 ದಿನಗಳಿಗೆ ಇಳಿದಿವೆ. 15 ವರ್ಷ ಗಳಲ್ಲಿ ಶೇ. 61 ಬಿಲ್ಲು ಗಳು ಚರ್ಚೆಯೇ ಇಲ್ಲದೆ ಅಂಗೀಕಾರ ವಾಗು ತ್ತಿವೆ. ಶೇ. 28 ಕಾನೂನುಗಳು ಹತ್ತು ವರ್ಷಗಳಲ್ಲಿ ಕೊನೆಯ 3 ಗಂಟೆಗಳಲ್ಲಿ ಸ್ವೀಕೃತವಾಗಿವೆ. ಶೇ.72 ಕಾನೂನುಗಳು ಸ್ಥಾಯೀ ಸಮಿತಿಗೆ ಹೋಗದೆ ಅಂಗೀಕಾರ ಗೊಂಡಿವೆ. ಕಳೆದ ಏಳು ವರ್ಷಗಳಲ್ಲಿ ಐದು ಬಾರಿ ಸಂಸತ್ ಸದಸ್ಯರ ವೇತನ ಏರಿಕೆ ಯಾಗಿವೆ. ಚರ್ಚೆ ಇಲ್ಲದೆ ಸಂಸತ್ತು ನಡೆ ಯುವುದಾದರೆ ಸಂಸತ್ತು, ವಿಧಾನ ಸಭೆಗಳ ಸದಸ್ಯರ ವೇತನವನ್ನು ಹೆಚ್ಚಿಸುವುದು ಎಷ್ಟು ಸರಿ ಎಂದರು. ಟ್ಯಾಪ್ಮಿ ನಿರ್ದೇಶಕ ಪ್ರೊ| ಮಧು ವೀರರಾಘವನ್ ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯ, ಮಣಿಪಾಲ ವಿ.ವಿ. ಕುಲಪತಿ ಡಾ|ಎಚ್.ವಿನೋದ ಭಟ್ ಗೌರವಿಸಿದರು. ವಿನೋದ ಮಾಧವನ್ ನಿರ್ವಹಿಸಿದರು. ಔಷಧ- ಮಾಲಿನ್ಯ- ರೋಗ…
ಹೈದರಾಬಾದ್ ಮೂಸಿ ನದಿ ತೀರದಲ್ಲಿ 197 ಜನರಿಕ್ ಔಷಧ ಗಳ ಕಾರ್ಖಾನೆಗಳಿದ್ದು ದಕ್ಷಿಣ ಆಫ್ರಿಕದಂತಹ ಬಡ ರಾಷ್ಟ್ರ ಗಳಿಗೆ ಔಷಧಗಳು ರಫ್ತು ಆಗು ತ್ತಿವೆ. ಇದರಿಂದ ನದಿ ಎಷ್ಟು ಕಲುಷಿತ ವಾಗಿದೆ ಎಂದರೆ ಡೇರಾ ಮತ್ತು ಬಂದ್ವಾರಿ ಗ್ರಾಮಗಳ 1.6 ಲಕ್ಷ ಜನರು ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಇಲ್ಲಿ ಬಾವಿ ನೀರು ರಕ್ತದಂತೆ ಕೆಂಪು ಆಗಿದೆ. ಕಳೆದ ಐದು ವರ್ಷಗಳಲ್ಲಿ 36,000 ಚಿಕ್ಕಮಕ್ಕಳು ಸತ್ತಿದ್ದಾರೆ. ಮಹಾರಾಷ್ಟ್ರದ ಲಾತೂರಿನಲ್ಲಿ ಈಗಿನ ಮುಖ್ಯಮಂತ್ರಿಗಳು ರೈಲಿ ನಲ್ಲಿ ನೀರು ಸರಬರಾಜು ಮಾಡ ಹೊರಟರೆ 3, 5, 6 ಲೀ. ನೀರು ಕದಿಯುವ ಕಳ್ಳರು ಇದ್ದಾರೆ. ಆದರೆ ಇದೇ ಮಹಾರಾಷ್ಟ್ರ ನಗರ ಗಳ ನೂರಾರು ಫ್ಲಾ éಟು ಗಳಲ್ಲಿ ಈಜು ಕೊಳ ಗಳಿವೆ. ಭಾರತದಲ್ಲಿ ಶೇ. 71 ಸಂಸದರು 2ನೆಯ ಬಾರಿ ಗೆಲುವು ಸಾಧಿಸಲಿಲ್ಲ. ಜನ ಸಂಪರ್ಕದ ಕೊರತೆಯೇ ಇದಕ್ಕೆ ಕಾರಣ. ಮುರ್ಶಿದಾಬಾದ್‌ನಲ್ಲಿ ಬಾಬರ್ ಎಂಬ 9 ವರ್ಷದ ಬಾಲಕ ಬಹು ದೂರ ಓದಲು ಹೋಗಿ ತಾನು ಕಲಿ ತದ್ದನ್ನು ಬೇರೆ ಯವ ರಿಗೆ ಕಲಿಸಿಕೊಡುತ್ತಿದ್ದಾನೆ. ಇವನಿಂದ ಕಲಿತವರು ಮತ್ತೆ ಐದು ಜನರಿಗೆ ಹೇಳಿಕೊಡುತ್ತಿದ್ದಾರೆ.
ವರುಣ್ ಗಾಂಧಿ