ಹೊಸಕೋಟೆ: ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸದಸ್ಯರು ಸಂಸ್ಥೆಯ ಬಗ್ಗೆ ಸಮುದಾಯದಲ್ಲಿ ಉತ್ತಮ ಅಭಿಪ್ರಾಯ ಮೂಡಿಸಲು ಗಮನಹರಿಸಬೇಕು ಎಂದು ರೋಟರಿ ಸಂಸ್ಥೆಯ ಜಿಲ್ಲಾ ಗೌರ್ನರ್ ಡಾ.ಸಮೀರ್ ಅರ್ಯಾನಿ ಹೇಳಿದರು.
ನಗರದ ರೋಟರಿ ಸಂಸ್ಥೆಗೆ ಭೇಟಿ ನೀಡಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶವನ್ನು ಪೋಲಿಯೊ ಮುಕ್ತ ರಾಷ್ಟ್ರವನ್ನಾಗಿಸುವಲ್ಲಿ ರೋಟರಿ ಸಂಸ್ಥೆಯು ಯಶಸ್ವಿಯಾಗಿದ್ದು, ಪ್ರಸ್ತುತ ಸಾಕ್ಷರತೆಯಲ್ಲಿ ಶೇ.100ರಷ್ಟು ಸಾಧನೆ ಮಾಡಲು ಯೋಜನೆ ರೂಪಿಸಲಾಗಿದೆ. ಈ ದಿಶೆಯಲ್ಲಿ ಗ್ರಾಮೀಣ ಪ್ರದೇಶದ ಅನಕ್ಷರಸ್ಥರನ್ನು ಗುರುತಿಸಿ ಅಕ್ಷರಸ್ಥರನ್ನಾಗಿಸಲು ಸದಸ್ಯರು ಶ್ರಮಿಸಬೇಕು.
ವಿಶ್ವದ ಸೇವಾ ಮನೋಭಾವ ಹೊಂದಿರುವ ಸಂಸ್ಥೆಗಳಲ್ಲಿ 3 ವರ್ಷಗಳಿಂದ ಪ್ರಥಮ ಸ್ಥಾನದಲ್ಲಿ ನಮ್ಮ ಸಂಸ್ಥೆ ಇದೆ. ಜಿಲ್ಲೆ ವ್ಯಾಪ್ತಿಯಲ್ಲಿ ಪರಿಸರ ಸಂರಕ್ಷಣೆಗಾಗಿ 1 ಕೋಟಿ ಸಸಿ ನೆಡುವ ಯೋಜನೆ ಹಮ್ಮಿಕೊಂಡಿದ್ದು, ಇದುವರೆಗೂ 30 ಲಕ್ಷ ಸಸಿ ನೆಡಸಲಾಗಿದೆ. ಸರಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿ ಕೊಡುವ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ವಿಫಲವಾದ ಅವಕಾಶಗಳಿದ್ದು, ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಜಿಲ್ಲೆಯ ಸಹಾಯಕ ಗೌರ್ನರ್ ಹನುಮಂತ್ ಮಾತನಾಡಿ, ಸದಸ್ಯರು ಸಂಸ್ಥೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಾಯಕತ್ವ ಗುಣ ಬೆಳೆಸಿಕೊಂಡು ಪರಸ್ಪರ ಉತ್ತಮ ಬಾಂಧವ್ಯ ಹೊಂದಲು ಸಾಧ್ಯ ಎಂದರು. ರೋಟರಿ ಹೊಸಕೋಟೆ ಸೆಂಟ್ರಲ್‌ನ ಅಧ್ಯಕ್ಷ ಡಿ.ಎಸ್.ರಾಜಕುಮಾರ್ ಮಾತನಾಡಿ, ಸದಸ್ಯರು ಸಲಹೆಗಳನ್ನು ನೀಡುವ ಮೂಲಕ ಯಜನೆಗಳ ಸಾಕಾ ರಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದ ಕಾರ್ಯದರ್ಶಿ ಕೆ. ರಮೇಶ್, ನಗರದ್ಯಂತ ಸರ್ಕಾರಿ ಶಾಲಾ ಆವರಣಗಳಲ್ಲಿ 500 ಸಸಿ ನೆಟ್ಟಿದ್ದು, ಸ್ವಚ್ಚತಾ ಆಂದೋಲನ, ವಿಶ್ವ ಕೈತೊಳೆಯುವ ದಿನಾಚರಣೆಗಳಲ್ಲಿ ಸಹಭಾಗಿತ್ವ ಹೊಂದಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಕಾರ್ಯದರ್ಶಿ ಹರ್ಷವರ್ಧನ್, ನಿಯೋ ಜಿತ ಅಧ್ಯಕ್ಷ ಬಚ್ಚಣ್ಣ, ಉಪಾಧ್ಯಕ್ಷ ನರೇಂದ್ರ, ನಿರ್ದೇ ಶಕರಾದ ಇಮಿ¤ಯಾಜ್ ಪಾಷಾ, ಡಾ.ನೂರ್ ಖಾನ್ ಇತರರು ಉಪಸ್ಥಿತರಿದ್ದರು.