ರೋಣ: ಪರಿಸರ ಸಂರಕ್ಷಣೆ, ಮಳೆ ನೀರು ಸಂಗ್ರಹ ಸೇರಿದಂತೆ ಅನೇಕ ಮಹತ್ವದ ಉದ್ದೇಶಗಳನ್ನು ಹೊಂದಿರುವ ನದಿ ಪುನಶ್ಚೇತನ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮಾಡಿ ಮುಗಿಸದಿದ್ದರೆ ಪಿಡಿಒ ಹಾಗೂ ತಾಂತ್ರಿಕ ಸಹಾಯಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕಳಕಪ್ಪ ಬಂಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸರ್ಕಾರದ ಯೋಜನೆಗಳನ್ನು ಜಾರಿಗೆ ತರಲು ಆಗುವುದಿಲ್ಲ ಎಂದರೆ ಯಾಕೆ ಕೆಲಸ ಮಾಡಬೇಕು.ನಿಮಗೆ ನೀಡಿದ 100 ಗುರಿಯಲ್ಲಿ ಕೇವಲ 20 ಕಾಮಗಾರಿಗಳನ್ನು ಮಾಡಿರುವಿರಾ ಎಂದರೆ ನೀವು ಏನು ಮಾಡುತ್ತಿದ್ದಿರಾ ಎಂದು ಹಿರೇಹಾಳ ಪಿಡಿಒ ಬಸವರಾಜ ದಳವಾಯಿ ಹಾಗೂ ಸಂತೋಷ ಪಾಟೀಲ ಅವರಿಗೆ ಶಾಸಕ ತರಾಟೆಗೆ ತೆಗೆದುಕೊಂಡರು.
ನೇರವಾಗಿ ಇಲಾಖೆಯಿಂದ ಪರೀಕ್ಷೆ ಬರೆದು ನೇಮಕವಾಗಿರುವ ಪಿಡಿಒಗಳು ಸರಿಯಾಗಿ ಕೆಲಸ ಮಾಡದೆ, ನರೇಗ ಯೋಜನೆಯ ಮಹತ್ವ ಕಳೆಯುತ್ತಿದ್ದಿರಿ. ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸಿ ಈಗ ಪಿಡಿಒ ಆದವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗದಗ ಉಪ ಕಾರ್ಯದರ್ಶಿ ಪ್ರಾಣೇಶ್ ರಾವ್ ಹೇಳಿದರು.
ಜುಲೈ ಮೊದಲನೇ ವಾರದಲ್ಲಿ ಮತ್ತೆ ಸಭೆ ತೆಗೆದುಕೊಳ್ಳುತ್ತೇನೆ. ಅಷ್ಟರಲ್ಲಿ ನಿಮಗೆ ನೀಡಿರುವ ಕೆಲಸ ಮುಗಿಸಬೇಕು. ಇಲ್ಲವಾದರೆ ತೊಂದರೆ ಅನುಭವಿಸಬೇಕಾಗಿತ್ತದೆ ಎಂದು ಎಚ್ಚರಿಕೆ ನೀಡಿದರು.
Advertisement
ಪಟ್ಟಣದ ತಾಪಂ ಸಭಾಭವಣದಲ್ಲಿ ಸೋಮವಾರ ಜರುಗಿದ ನರೇಗ ಯೋಜನೆಯ ನದಿ ಪುನಶ್ಚೇತ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ನಡೆಸಿ ಅವರು ಮಾತನಾಡಿದರು. ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಇಲ್ಲಿಯವರೆ ನಿಗದಿತ ಗುರಿ ಮುಟ್ಟದೆ ಇರುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ನಿಮ್ಮ ಕೆಲಸಗಳನ್ನು ಮಾಡಲು ಪ್ರಧಾನ ಮಂತ್ರಿ ಬರಬೇಕೊ ಅಥವಾ ಮುಖ್ಯಮಂತ್ರಿಗಳು ಬರಬೇಕೋ, ಇಲ್ಲ ನೀವೆ ಮಾಡಿ ಮುಗಿಸುತ್ತೀರಾ? ಎಂದು ಪಶ್ನಿಸಿದರು.
Related Articles
Advertisement
ನೂರು ಯೋಜನೆಗಳಿಗೆ ಸಮವಾದ ಯೋಜನೆ ನರೇಗಾ. ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಉತ್ತಮ ಜಲ ಸಂರಕ್ಷಣೆ, ಮಣ್ಣಿನ ಸವಕಳಿ ತಡೆಗಟ್ಟಲು ಕ್ರಮ ಕೈಗೊಳ್ಳಬಹುದು. ಜೊತೆಗೆ ಬರಗಾಲ ಬರಲು ಮುಖ್ಯ ಕಾರಣಗಳೆಂದರೆ ಅರಣ್ಯ ನಾಶ, ಮಣ್ಣಿನ ಸವಕಳಿ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸುವ ಶಕ್ತಿ ನರೇಗ ಯೋಜನೆಯ ನದಿ ಪುನಶ್ವೇತನ ಕಾರ್ಯಕ್ರಮಕ್ಕೆ ಇದೆ. ಅದನ್ನು ಸರಿಯಾಗಿ ಎಲ್ಲ ಅಧಿಕಾರಿಗಳು ಅನುಷ್ಠಾನಗೊಳಿಸಬೇಕು ಎಂದು ಗದಗ ಉಪ ಕಾರ್ಯದರ್ಶಿ ಪ್ರಾನೇಶ ರಾವ್ ಅಧಿಕಾರಿಗಳಿಗೆ ಹೇಳಿದರು.
ತಾಪಂ ಇಒ ಎಂ.ವಿ. ಚಳಗೇರಿ, ಎಸ್.ವೈ. ಜಿಗಣಿ, ಸಂತೋಷ ಪಾಟೀಲ, ಎಂ.ಎಂ. ತರಫದಾರ ಸೇರಿದಂತೆ ತಾಲೂಕಿನ ವಿವಿಧ ಪಿಡಿಒ ಹಾಗೂ ತಾಂತ್ರಿಕ ಸಹಾಯಕರು ಇದ್ದರು.
ಜೂ. 30 ರೊಳಗೆ ಮಾನವ ದಿನಗಳನ್ನು ಬಳಸಿಕೊಂಡು ಕೆಲಸ ಮಾಡದಿದ್ದರೆ ಅವರಿಗೆ ಆ ತಿಂಗಳ ಸಂಬಳ ನೀಡಿಬೇಡಿ. ಇಂಗು ಗುಂಡಿ ಕಾಮಗಾರಿಗಳ ಎಂ.ಐ.ಎಸ್ ಮಾಡದ ಪರಿಣಾಮ ಜನರು ನಿಮ್ಮ ಹತ್ತಿರ ತಿರುಗಾಡಬೇಕಾ? ಒಂದೊಮ್ಮೆ ಜನ ನಿಮ್ಮ ಮೇಲೆ ತಿರುಗಿ ಬಿದ್ದರೆ ಯಾರು ಏನು ಮಾಡಲಿಕ್ಕೆ ಆಗುವುದಿಲ್ಲ. ಜನರು ತಮ್ಮ ತಾಳ್ಮೆ ಕಳೆದುಕೊಳ್ಳುವ ಮುನ್ನ ಅವರ ಕೆಲಸ ಮಾಡಿಕೊಡಿ.•ಕಳಕಪ್ಪ ಬಂಡಿ, ಶಾಸಕ