Advertisement
ಲಾಕ್‌ಡೌನ್ ಹಿನ್ನೆಲೆಯಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಇಲ್ಲವಾಗಿದೆ ಎಂದು ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಹೆಚ್ಚುವರಿ ಸರ್ಕಾರಿ ವಕೀಲ ವಿಕ್ರಂ ಹುಯಿಲಗೋಳ ಅವರು ಈ ಬಗ್ಗೆ ಲಿಖೀತ
ಹೇಳಿಕೆ ಸಲ್ಲಿಸಿದ್ದಾರೆ. ಮುಖ್ಯವಾಗಿ ಪ್ರಸಕ್ತ 2020ನೇ ಸಾಲಿನಲ್ಲಿ ಬೆಂಗಳೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಸುಮಾರು 3,815 ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 88,771 ಮೆಟ್ರಿಕ್ ಟನ್ ದ್ರಾಕ್ಷಿ ಬೆಳೆ ಇಳುವರಿ ಬಂದಿದೆ.
ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 18,824 ಮೆಟ್ರಿಕ್ ಟನ್ ದ್ರಾಕ್ಷಿ ಸರಬರಾಜು ಮಾಡಲು ತೋಟಗಾರಿಕೆ
ಇಲಾಖೆಯಿಂದ 600 ಪಾಸ್‌ಗಳನ್ನು ನೀಡಲಾಗಿದೆ. ಇದರಿಂದಾಗಿ ಕೇರಳ, ಒಡಿಶಾ, ದೆಹಲಿ, ಹೈದರಾಬಾದ್ ಮತ್ತಿತರ ಕಡೆ ದ್ರಾಕ್ಷಿ ಸಾಗಿಸಲು ಸಾಧ್ಯವಾಯಿತು. ಜೊತೆಗೆ, ದ್ರಾಕ್ಷಿ ಖರೀದಿ ಮಾಡುವ ಸಂಬಂಧ ಡಿಸ್ಟಲರೀಸ್ ಜೊತೆಗೆ ಸಭೆ ಸಹ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರಿಂದ ದಾಕ್ಷಿ ಖರೀದಿಸಿ, ಬೆಂಗಳೂರಿನ ಹಾಪ್ ಕಾಮ್ಸ್‌ನ 220 ಮಳಿಗೆಗಳು ಮತ್ತು 40 ಸಂಚಾರಿ ವಾಹನಗಳಲ್ಲಿ ದ್ರಾಕ್ಷಿ ಮಾರಾಟ ಮಾಡಲಾಗುತ್ತಿದೆ ಎಂದು ಹೈಕೋರ್ಟ್‌ಗೆ ತಿಳಿಸಲಾಗಿದೆ. ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಏ.28ಕ್ಕೆ ಮುಂದೂಡಿದೆ.