Advertisement

ಕೋವಿಡ್ 19ಹತೋಟಿಗೆ ಕ್ರಮ: ಸಚಿವ ರಮೇಶ ಜಾರಕಿಹೂಳಿ

05:17 PM Apr 20, 2020 | Suhan S |

ಅಥಣಿ: ತಬ್ಲೀಕ್‌ ಜಮಾತನಿಂದಲೇ ಜಿಲ್ಲೆಯಲ್ಲಿ ಕೋವಿಡ್ 19 ಹರಡಲು ಕಾರಣವಾಯಿತು. ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹಾಗೂ ವಿವಿಧ ಮಂತ್ರಿಗಳು, ಶಾಸಕರ ಸಹಕಾರದಿಂದ ಕೊರೊನಾ ಹರಡದಂತೆ ಅಧಿಕಾರಿಗಳು ಹಗಲಿರುಳು ಶ್ರಮಿಸಿದ್ದಾರೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಬೇಸಿಗೆ ಬಂದಿರುವುದರಿಂದ ಜನತೆಗೆ ತೊಂದರೆಯಾಗದಂತೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Advertisement

ಶಾಸಕ ಮಹೇಶ ಕುಮಟಳ್ಳಿ ಮಾತನಾಡಿ, ಶತಮಾನ ಕಂಡರಿಯದ ಸಮಸ್ಯೆಯಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಕೆಲ ಜನ ಶಾಸಕರು ಕ್ಷೇತ್ರದಲ್ಲಿ ಇಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ಎಲ್ಲ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಸಲಹೆ-ಸೂಚನೆ ಕೊಡುತ್ತಿದ್ದೇನೆ ಎಂದರು.

ಗ್ರೇಡ್‌-2 ತಹಶೀಲ್ದಾರ್‌ ರಾಜಕುಮಾರ ಬುರ್ಲಿ, ಇಒ ರವಿ ಬಂಗಾರಪ್ಪನವರ, ಡಿಎಸ್‌ಪಿ ಎಸ್‌. ವಿ. ಗಿರೀಶ್‌, ಸಿಪಿಐ ಶಂಕರಗೌಡ ಬಸನಗೌಡ, ಬಿ.ಎಸ್‌. ಯಾದವಾಡ, ಎಂ.ವಿ. ಬಿರಾದಾರಪಾಟೀಲ, ಶೇಖರ ಬಹೂರೂಪಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next