ಉಪ್ಪಿನಂಗಡಿ: ಎತ್ತಿನಹೊಳೆ ಯೋಜನೆಯಿಂದ ದ.ಕ. ಜಿಲ್ಲೆಯ ಜನತೆ ಯಲ್ಲಿ ಮೂಡಿರುವ ಕಳವಳವನ್ನು ಪಶ್ಚಿಮ ವಾಹಿನಿ ಯೋಜನೆಯ ಮೂಲಕ ದೂರ ಮಾಡಲು ಶ್ರಮಿಸಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಜೆ.ಸಿ. ಮಾಧು ಸ್ವಾಮಿ ಅವರು ಹೇಳಿದರು.
ಬಿಳಿಯೂರು ಗ್ರಾಮದಲ್ಲಿ ನೇತ್ರಾವತಿ ನದಿಗೆ 46.70 ಕೋ.ರೂ. ವೆಚ್ಚದಲ್ಲಿ ನಿರ್ಮಿ ಸಲು ಉದ್ದೇಶಿಸಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಯ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
1,480 ಟಿಎಂಸಿ ನೀರು ಪ್ರತಿವರ್ಷ ಸಮುದ್ರ ಪಾಲಾಗುತ್ತಿದ್ದು, ಈ ಪೈಕಿ 24 ಟಿಎಂಸಿ ನೀರನ್ನು ಎತ್ತಿನಹೊಳೆ ಮೂಲಕ ಬರಡು ಜಿಲ್ಲೆಗೆ ಹರಿಸುವ ಯೋಜನೆ ರೂಪಿಸಿದಾಗ ದ.ಕ. ಜಿಲ್ಲೆಯವರ ಪ್ರತಿ ರೋಧ ನಮ್ಮನ್ನು ಸಹಜವಾಗಿ ಬೆರಗು ಗೊಳಿಸಿತ್ತು. ಮಳೆಗಾಲದಲ್ಲಿ ತುಂಬಿ ಹರಿ ಯುವ ಇಲ್ಲಿನ ನದಿಗಳು ಬೇಸಗೆಯಲ್ಲಿ ಬರಡಾಗುವುದರಿಂದ ಇಲ್ಲಿನ ಜನತೆ ವ್ಯಕ್ತ ಪಡಿಸಿದ ಕಳವಳ ಸಹಜವೆಂದು ತಿಳಿಯಿತು. ಈ ಕಾರಣಕ್ಕೆ ದ.ಕ. ಜಿಲ್ಲೆಯ ಜನತೆಯ ನೀರಿನ ಆವಶ್ಯಕತೆಯನ್ನು ಪೂರೈಸಿ ಬಳಿಕ ಹೆಚ್ಚುವರಿ ನೀರನ್ನು ಕೋಲಾರಕ್ಕೆ ಹರಿಸುವು ದರಲ್ಲಿ ನ್ಯಾಯವಿದೆ. ಜಿಲ್ಲೆಯ ಜೀವ ನದಿಗಳು ವರ್ಷ ಪೂರ್ತಿ ನೀರು ತುಂಬಿ ಹರಿಯುವಂತೆ ಹಾಗೂ ಕೃಷಿಕರಿಗೆ ಪ್ರಯೋ ಜನ ಲಭಿಸುವಂತೆ ಯೋಜನೆ ರೂಪಿಸಲು ಗಮನ ಹರಿಸಲಾಗಿದೆ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಮಾಧುಸ್ವಾಮಿ ಅವರಿಂದ ಕ್ಷೇತ್ರಕ್ಕೆ ಗರಿಷ್ಠ ಅನುದಾನ ಲಭಿಸಿದೆ. ಉಪ್ಪಿನಂಗಡಿ ಪರಿಸರದಲ್ಲಿಯೂ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಎತ್ತಿನಹೊಳೆ ಯೋಜನೆಯಿಂದ ಉಂಟಾದ ನಷ್ಟವನ್ನು ದ.ಕ. ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣದ ಮೂಲಕ ಸಚಿವರು ತುಂಬಿ ಕೊಡುತ್ತಿದ್ದಾರೆ ಎಂದರು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ತಾ.ಪಂ. ಸದಸ್ಯ ರಘು ಮಲ್ಲಡ್ಕ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಸಿ. ಮೃತ್ಯುಂಜಯ ಸ್ವಾಮಿ, ಕಾರ್ಯನಿರ್ವಾಹಕ ಅಭಿಯಂತ ಗೋಕುಲ್‌ದಾಸ್ ಕೆ., ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತ ಕೃಷ್ಣ ಕುಮಾರ್ ಕೆ., ಎನ್. ಉಮೇಶ್ ಶೆಣೈ, ರಾಜೇಶ್ ಮುಖಾರಿ ಶಾಂತಿನಗರ, ಪ್ರಶಾಂತ್ ಶಿವಾಜಿ ನಗರ, ವಿN°àಶ್, ರೋಹಿತಾಕ್ಷ, ಮಹೇಶ್ ಜೈನ್, ಕಿರಣ್ ಶೆಟ್ಟಿ, ನವೀನ್ ಉಪಸ್ಥಿತರಿದ್ದರು. ಮನ್ಮಥ ಶೆಟ್ಟಿ ನಿರೂಪಿಸಿದರು.
ಶೀಘ್ರ ಪೂರ್ಣಗೊಳಿಸಿ
ಕಿಂಡಿ ಅಣೆಕಟ್ಟು ಪರಿಸರದ ಜನತೆಗೆ ಸೇತುವೆಯಾಗಿಯೂ ಬಳಕೆಯಾಗುವಂತೆ 2 ವಾಹನಗಳ ಸುಲಲಿತ ಸಂಚಾರಕ್ಕೆ ಅವಕಾಶವಿರುವ 5.5 ಮೀ. ಅಗಲದಲ್ಲಿ ನಿರ್ಮಿಸಲಾಗುತ್ತದೆ. ಈ ಕಾಮಗಾರಿಯನ್ನು 18 ತಿಂಗಳ ಒಳಗಾಗಿ ಮುಗಿಸಲು ಯೋಜನೆ ರೂಪಿಸಲಾಗಿದ್ದರೂ ವಿಶೇಷ ಗಮನಹರಿಸಿ 12 ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಸಚಿವ ಮಾಧುಸ್ವಾಮಿ ಸೂಚಿಸಿದರು.