Advertisement

ಸೇತುವೆ ಮೇಲಿನ ಜಾಲಿ ಕಂಟಿ ತೆಗೆಯಲು ಕ್ರಮ

08:29 PM Aug 11, 2022 | Team Udayavani |

ದೇವರಹಿಪ್ಪರಗಿ: ಸಾತಿಹಾಳ ಗ್ರಾಮದ ಪ್ರವಾಹಕ್ಕೆ ಕಾರಣವಾದ ಜಾಲಿ ಕಂಟಿ ತೆಗೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು. ತಾಲೂಕಿನ ಸಾತಿಹಾಳ ಗ್ರಾಮದ ಪ್ರವಾಹ ಪೀಡಿತ ಸೇತುವೆ ಹಾಗೂ ಗ್ರಾಮದ ಚರಂಡಿ ವ್ಯವಸ್ಥೆ ಪರಿಶೀಲಿಸಿ ಮಾತನಾಡಿದ ಅವರು, ಪ್ರತಿ ವರ್ಷ ಡೋಣಿ ನದಿಯ ಎರಡು ಬದಿಯ ಮುಳ್ಳಿನ ಗಿಡಗಳನ್ನು ಕತ್ತರಿಸಬೇಕು. ಇದರಿಂದ ನೀರು ಬೇರೆಡೆ ಹರಿದು ಪ್ರವಾಹ ಉಂಟಾಗುವುದಿಲ್ಲ ಎಂದರು.

Advertisement

ಸಾತಿಹಾಳ ಗ್ರಾಮದ ಪರವಾಗಿ ಶಿವನಗೌಡ ಪಾಟೀಲ, ಸಿದ್ದರಾಮಯ್ಯ ಮಠ, ಅಬ್ದುಲ್‌ ಬಳಗಾನೂರ, ಬುಡ್ಡೇಸಾಬ್‌ ಬೀಳಗಿ, ಹನುಮಂತ್ರಾಯ ಬಿರಾದಾರ, ರಮೇಶ ಭದ್ರಗೊಂಡ, ವಿಶ್ವನಾಥ ಅವುಟಿ, ಚಾಂದ್‌ ಬನ್ನಟ್ಟಿ ಅಹವಾಲು ಸಲ್ಲಿಸಿ, ಗ್ರಾಮದ ಸೇತುವೆ ಮೇಲೆತ್ತಬೇಕು. ಕೆರೆ ಭರ್ತಿಯಾದ ನಂತರ ಹೆಚ್ಚುವರಿ ನೀರು ಹೊರ ಹೋಗಲು ಕ್ರಮ ಕೈಗೊಳ್ಳಬೇಕು. ಪುನರ್ವಸತಿ ಕೇಂದ್ರಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿ ಸಲ್ಲಿಸಿದರು.

ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾಧಿಕಾರಿ ಡಾ| ವಿಜಯ ಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರಾಹುಲ್‌ ಶಿಂಧೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದಕುಮಾರ, ಉಪ ವಿಭಾಗಾಧಿಕಾರಿಗಳಾದ ಮಹೇಶಕುಮಾರ ಮಾಲಗಿತ್ತಿ, ರಾಮಚಂದ್ರ ಗಡಾದೆ, ತಹಶೀಲ್ದಾರ್‌ ಸಿ.ಎ. ಗುಡದಿನ್ನಿ ಸೇರಿದಂತೆ ಕೃಷಿ, ತೋಟಗಾರಿಕೆ, ಕಂದಾಯ, ಪೊಲೀಸ್‌, ಸಣ್ಣ ನೀರಾವರಿ ಇಲಾಖೆಗಳ ಅಧಿಕಾರಿಗಳು ಹಾಗೂ ಸಾತಿಹಾಳ, ಭೈರವಾಡಗಿ, ಮಾರ್ಕಬ್ಬಿನಹಳ್ಳಿ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next