ಸೊರಬ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನಾಡು ಕಂಡ ಧೀಮಂತ ರಾಜಕಾರಣಿಯಾಗಿದ್ದರು. ಅವರ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಯೋಜನೆಗಳು ಸದಾ ರೈತರು ಹಾಗೂ ಬಡವರ ಪರವಾಗಿದ್ದವು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಂಗಾರಪ್ಪ ಸ್ಮಾರಕ ನಿರ್ಮಾಣಕ್ಕೆ ಒಂದು ಕೋಟಿ ರೂ. ಅನುದಾನ ನೀಡಿರುವುದಕ್ಕೆ ಧನ್ಯವಾದಗಳು ಎಂದು ಶಾಸಕ ಎಸ್. ಕುಮಾರ್ ಬಂಗಾರಪ್ಪ ಹೇಳಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಮುಂಭಾಗ ನಿರ್ಮಾಣಗೊಂಡ ನೂತನ ಉದ್ಯಾನವನ ಉದ್ಘಾಟನೆ ಮತ್ತು ಎಸ್. ಬಂಗಾರಪ್ಪ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದೀಗ ಸಾಂಕೇತಿಕವಾಗಿ ರೈತರಿಗೆ ಬಗರ್‌ಹುಕುಂ ಸಾಗುವಳಿ ಪತ್ರ ವಿತರಿಸಲಾಗುತ್ತಿದ್ದು, ರೈತರ ರಕ್ಷಣೆಯೇ ಮೂಲ ಉದ್ದೇಶ. ಕಲ್ಲೊಡ್ಡು ಯೋಜನೆಯಿಂದ ತಾಲೂಕಿನ ಚಿಟ್ಟೂರು ಭಾಗದ ಹಲವು ಗ್ರಾಮಗಳಿಗೆ ಅನುಕೂಲವಾಗಲಿದೆ. ದಂಡಾವತಿ ನೀರಾವರಿ ಯೋಜನೆಯ ಬಲದಂಡೆ ಮತ್ತು ಎಡದಂಡೆ ಯೋಜನೆ ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ಬರಲಿದ್ದು, ಕ್ಷೇತ್ರವನ್ನು ಮುಂದಿನ ಒಂದು ವರ್ಷದಲ್ಲಿ ಶೇ. 80ರಷ್ಟು ನೀರಾವರಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಹೊಸನಗರದ ಮಾಜಿ ಶಾಸಕ ಸ್ವಾಮಿರಾವ್ ಮಾತನಾಡಿ, ಎಸ್. ಬಂಗಾರಪ್ಪ ಜಾರಿಗೆ ತಂದ ಅಕ್ಷಯ, ಆರಾಧನ, ಗ್ರಾಮೀಣ ಕೃಪಾಂಕ, ರೈತರಿಗೆಉಚಿತ ವಿದ್ಯುತ್ ಸೇರಿದಂತೆ ರಾಜ್ಯದಲ್ಲಿ ಅನೇಕನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದರು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ವಿತರಿಸಿ ಹಿತಕಾದಿದ್ದರು ಎಂದರು. ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಉದ್ಯಾನವನ ಉದ್ಘಾಟನೆ ಮತ್ತು ಬಂಗಾರಪ್ಪ ಪುತ್ಥಳಿಯ ಅನಾವರಣವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೆರವೇರಿಸಿದರು.
ಬಂಗಾರಪ್ಪ ಪುತ್ಥಳಿ ನಿರ್ಮಾಣ ಕಲಾವಿದ ಅಶೋಕ್ ಗುಡಿಗಾರ್ ಅವರನ್ನು ಸನ್ಮಾನಿಸಲಾಯಿತು. ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಉದ್ಯಾನವನಕ್ಕೆ ಭೇಟಿ ನೀಡಿ ಬಂಗಾರಪ್ಪ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಪಪಂ ಅಧ್ಯಕ್ಷ ಎಂ.ಡಿ. ಉಮೇಶ್, ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಸದಸ್ಯರಾದ ಈರೇಶ್ ಮೇಸ್ತ್ರಿ, ನಟರಾಜ್ ಉಪ್ಪಿನ, ಪ್ರಭು ಮೇಸ್ತ್ರಿ, ಜಯಲಕ್ಷಿ¾, ಶ್ರೀರಂಜನಿ ಪ್ರವೀಣ್ ಕುಮಾರ್, ಪ್ರೇಮಾ ಟೋಕಪ್ಪ, ಸುಲ್ತಾನ ಬೇಗಂ, ಅಭಿಯಂತರೆ ಶೆಲ್ಜಾ ನಾಯ್ಕ,ತಾಪಂ ಸದಸ್ಯ ಪುರುಷೋತ್ತಮ, ಜಿಪಂ ಮಾಜಿಸದಸ್ಯರಾದ ಲಲಿತಾ ನಾರಾಯಣ್ ತಾಳಗುಪ್ಪ, ದೇವಕಿ ಪಾಣಿರಾಯಪ್ಪ, ಮುಖಂಡರಾದ ಭೋಗೇಶ್ ಶಿಗ್ಗಾ, ಟಿ.ಆರ್. ಸುರೇಶ್, ಶಿವಕುಮಾರ್ ಕಡಸೂರು, ಆರ್. ಮನವೇಲ್ ಸೇರಿದಂತೆ ಶಾಸಕರ ಕುಟುಂಬಸ್ಥರು ಮತ್ತು ಬಂಗಾರಪ್ಪ ಅಭಿಮಾನಿಗಳು ಇದ್ದರು. ದೇವೇಂದ್ರಪ್ಪ ಸ್ವಾಗತಿಸಿದರು. ಸೌಜನ್ಯ ಆನವಟ್ಟಿ ನಿರೂಪಿಸಿದರು.