Advertisement

ಶಿಶು ಮರಣ ತಡೆಗೆ ಕ್ರಮ

09:05 PM Jun 03, 2019 | Lakshmi GovindaRaj |

ಚಿಕ್ಕಬಳ್ಳಾಪುರ: ತಾಯಿ ಮತ್ತು ಮಕ್ಕಳ ಆರೋಗ್ಯದ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಶಿಶು ಮರಣ ಪ್ರಮಾಣ ತಡೆಗಟ್ಟುವ ಸಲುವಾಗಿ 5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕವನ್ನು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಜೂನ್‌ 3 ರಿಂದ 17 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಪೋಷಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಧಿಕಾರಿ ಡಾ.ಬಿ.ಎಂ.ರವಿಶಂಕರ್‌ ತಿಳಿಸಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ನಗರದ ಜಿಲ್ಲಾಸ್ಪತ್ರೆಯಲ್ಲಿ ಬಾಲ್ಯಾವಸ್ಥೆಯಲ್ಲಿ ತೀವ್ರ ಅತಿಸಾರಭೇದಿ ನಿಯಂತ್ರಣಾ ಪ್ರಾಕ್ಷಿಕ-2019 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅತಿಸಾರ ಭೇದಿ ಆಗುವ ಮಗುವಿಗೆ ಓಆರ್‌ಎಸ್‌ನ್ನು ಕಡ್ಡಾಯವಾಗಿ ನೀಡಬೇಕೆಂದರು.

ಮಕ್ಕಳಲ್ಲಿ ಅತಿಸಾರ ಭೇದಿಯಿಂದಾಗಿ ಸಾವು ನೋವು ಸಂಭವಿಸುವ ಸಾಧ್ಯತೆ ಇರುವುದರಿಂದ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸುವುದು ಅಲ್ಲದೇ ಇಂತಹ ಸಮಸ್ಯೆಗಳು ಕಂಡು ಬಂದಾಗ ಕೂಡಲೇ ವೈದ್ಯರ ಬಳಿ ತೋರಿಸಬೇಕು. ಇದರಿಂದ ಶಿಶು ಮರಣ ಪ್ರಮಾಣ ಕಡಿಮೆ ಮಾಡಬಹುದು.

ಕೈಜೋಡಿಸಿ: ಒಂದು ವೇಳೆ ಓಆರ್‌ಎಸ್‌ ಪೌಡರ್‌ ಇಲ್ಲವಾದಲ್ಲಿ ಅದನ್ನು ಮನೆಯಲ್ಲಿಯೇ ಸಿದ್ಧಪಡಿಸಬಹುದಾಗಿದೆ. ಅತಿಸಾರ ಭೇದಿಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಮಕ್ಕಳು ಸಾವಿಗೀಡಾಗುತ್ತಾರೆ. ಇದನ್ನು ತಡೆಯುವ ಉದ್ದೇಶದಿಂದ ಜಿಲ್ಲೆಯ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಜಿಲ್ಲಾಸ್ಪತ್ರೆಗಳಲ್ಲಿ ಓಆರ್‌ಎಸ್‌ ಪೌಡರ್‌ನ್ನು ವಿತರಿಸಲಾಗುತ್ತಿದೆ. ಜೂ.17ರವರೆಗೂ ಈ ಕಾರ್ಯಕ್ರಮ ನಡೆಯಲಿದೆ.

ಯಾರು ಈ ಬಗ್ಗೆ ನಿರ್ಲಕ್ಷ್ಯ ತೋರದೇ ಪಾಕ್ಷಿಕ ಯಶಸ್ವಿಗೆ ಪೋಷಕರು ಕೈ ಜೋಡಿಸಬೇಕೆಂದರು. ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ರವಿಕುಮಾರ್‌ ಮಾತನಾಡಿ, ಓಆರ್‌ಎಸ್‌ ಮತ್ತು ಝಿಂಕ್‌ ಅತಿಸಾರ ಭೇದಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿದ್ದು ಈ ಬಗ್ಗೆ ಮೊದಲು ತಾಯಿ ಮಗುವಿನಲ್ಲಿ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

Advertisement

ಶುಚಿತ್ವ ಕಾಪಾಡಿ: ಓಆರ್‌ಎಸ್‌ ಮತ್ತು ಝಿಂಕ್‌ ಮಾತ್ರೆಗಳನ್ನು ಎರಡು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅತಿಸಾರ ಭೇದಿಯಾದ ಮಕ್ಕಳಿಗೆ ಪ್ರತಿ ಬಾರಿ 5 ಚಮಚದ ಓಆರ್‌ಎಸ್‌ ದ್ರವಣ ಕುಡಿಸಬೇಕು. 14 ದಿನಗಳು ಪ್ರತಿ ದಿನಕ್ಕೆ ಒಂದರಂತೆ ಝಿಂಕ್‌ ಮಾತ್ರೆಯನ್ನು ಕುಡಿಯುವ ನೀರು ಅಥವಾ ತಾಯಿಯ ಎದೆ ಹಾಲಿನೊಂದಿಗೆ ಬೆರೆಸಿ ವಯಸ್ಸಿಗೆ ಅನುಗುಣವಾಗಿ ನೀಡಬೇಕೆಂದರು.

ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಈ ಅಭಿಯಾನಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಸಹ ಕೈ ಜೋಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ತಾಯಂದಿರು ಮನೆಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದರು.

ಜಿಲ್ಲಾ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್‌, ತಾಲೂಕು ವೈದ್ಯಾಧಿಕಾರಿ ಡಾ. ಮುನಿಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿಕ್ಷಣಾಧಿಕಾರಿ ಮಹೇಶ್‌ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಅತಿಸಾರ ಭೇದಿಯಾಗುವುದರಿಂದ ಮಕ್ಕಳಲ್ಲಿ ಶಕ್ತಿ ಕುಂದುತ್ತದೆ. ಮಕ್ಕಳು ಮರಣಕ್ಕೆ ಒಳಗಾಗುವ ಸಾಧ್ಯ ಇರುವುದರಿಂದ ಮಗುವಿಗೆ ಓಆರ್‌ಎಸ್‌ನ್ನು ಅತಿಸಾರ ಭೇದಿ ನಿಲ್ಲುವವರೆಗೂ ನೀಡುವ ಮೂಲಕ ಮರು ಶಕ್ತಿಯನ್ನು ಮಗುವಿನಲ್ಲಿ ಓಆರ್‌ಎಸ್‌ ತುಂಬುತ್ತದೆ. ತಾಯಿ ಮಗುವಿಗೆ ಆಹಾರವನ್ನು ತಿನಿಸುವಾಗ ಕೈಗಳನ್ನು ಸಾಬೂನಿನಿಂದ ತೊಳೆದುಕೊಂಡು ಆಹಾರ ನೀಡಬೇಕು.
-ಡಾ.ಪ್ರಕಾಶ್‌, ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next