Advertisement
ಅನಂತಕುಮಾರ್ ಮೂರ್ಖ, ಅವನ ಹೇಳಿಕೆಗೆ ಚಪ್ಪಾಳೆ ತಟ್ಟಬೇಡಿ: ಸಿಎಂರಾಜ್ಯದಲ್ಲಿ ಈ ಹಿಂದೆ ಆಗಿರುವ ತಪ್ಪಿನಿಂದ ದೇವಸ್ಥಾನಗಳು ಇದ್ದ ಜಾಗದಲ್ಲಿ ಪ್ರಸ್ತುತ ಇರುವ ಮಸೀದಿಗಳನ್ನು ಧ್ವಂಸ ಮಾಡಿ ಮತ್ತೆ ದೇವಸ್ಥಾನಗಳನ್ನು ನಿರ್ಮಿಸುವುದಾಗಿ ಒಬ್ಬ ಮೂರ್ಖ ಹೇಳುತ್ತಾನೆ. ಇಂಥ ದಾರಿ ತಪ್ಪಿಸುವ ಮೂರ್ಖರಿಗೆ ಚಪ್ಪಾಳೆ ತಟ್ಟಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಸೀದಿಗಳನ್ನು ಧ್ವಂಸ ಮಾಡುವ ಬಗ್ಗೆ ಇತಿಹಾಸ ಹೇಳುತ್ತದೆಯೇ? ಇಂಥ ಮೂರ್ಖರು ದಾರಿ ತಪ್ಪಿಸುತ್ತಾರೆ. ಇಂಥವರಿಗೆ ಕೆಲವರು ಚಪ್ಪಾಳೆ ತಟ್ಟುತ್ತಾರೆ. ದಾರಿ ತಪ್ಪಿಸುವ ಮೂರ್ಖರಿಗೆ ಚಪ್ಪಾಳೆ ತಟ್ಟಬಾರದು. ಭಾರತ ದೇಶದವರು ಪರಸ್ಪರ ದ್ವೇಷ ಮಾಡಬಾರದು. ಪರಸ್ಪರ ಪ್ರೀತಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಯಾವುದೋ ಜಾತಿ, ಧರ್ಮಕ್ಕೆ ಸೇರಿದ್ದೀರಿ ಮಾತನಾಡಿಸುವುದಿಲ್ಲ ಎಂದರೆ ಹೇಗೆ? ಪರಸ್ಪರ ಪ್ರೀತಿ, ಸೌಹಾರ್ದ ಬೆಳೆಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ಕಾಂಗ್ರೆಸ್ ಮಾತ್ರ ಹೋರಾಡಿದ್ದು ಎಂದು ಹೇಳಿದರು.