Advertisement
ಕೋವಿಡ್-19 ವೈರಾಣು ಹರಡುವಿಕೆಯಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಪರಿಶಿಷ್ಟ ವರ್ಗದ ಅಶ್ರಮ ಶಾಲೆಗಳ ಮಕ್ಕಳ ಶಿಕ್ಷಣ ವ್ಯವಸ್ಥೆಯಲ್ಲಿ ತೊಂದರೆಯಾಗಿರುವುದು ನಿಜ. ಗುಡ್ಡ ಪ್ರದೇಶಗಳು, ಮಲೆನಾಡು ಮುಂತಾದ ಕಡೆಗಳಲ್ಲಿ ಆಶ್ರಮ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರದೇಶವಾರು ಪ್ರಾಕೃತಿಕ ವಾತಾವರಣ, ಮೂಲಸೌಕರ್ಯ ಇತ್ಯಾದಿಗಳಿಗೆ ಸಂಬಂದಿಸಿ ಪ್ರತ್ಯೇಕ ಸಮಸ್ಯೆಗಳು ಇರುವುದರಿಂದ ಹೀಗಾಗಿದೆ. ಕೆಲವು ಜಿಲ್ಲೆಗಳ ಆಶ್ರಮ ಶಾಲೆಗಳಲ್ಲಿರುವ ಮಕ್ಕಳು ಅದೇ ಊರಿನವರಾಗಿರುವುದಿಲ್ಲ.ಅಂತಹ ಜಿಲ್ಲೆಗಳಲ್ಲಿ ಶಿಕ್ಷಕರು ಮಕ್ಕಳ ಮನೆಗಳಿರುವಲ್ಲಿಗೆ ಹೋಗಿ ಅಕ್ಕಪಕ್ಕದ ಮಕ್ಕಳನ್ನು ಒಂದೆಡೆ ಸೇರಿಸಿ ಪಾಠ ಹೇಳಿಕೊಡುತ್ತಿದ್ದಾರೆ. ಚಾಮರಾಜನಗರ, ಕೊಡಗು ಭಾಗದಲ್ಲಿ ಅಲ್ಪ ಯಶಸ್ಸು ಕಂಡಿದೆ. ಕಾಡು-ಗುಡ್ಡ ಪ್ರದೇಶಗಳಿರುವಲ್ಲಿ ಇಂಟರ್‌ನೆಟ್ ಇತ್ಯಾದಿ ಸಮಸ್ಯೆಗಳಿರುವುದರಿಂದ ಪೂರ್ಣ ಯಶಸ್ಸು ಸಾಧ್ಯವಾಗಿಲ್ಲ ಎಂದರು.
Related Articles
Advertisement