ವಾಗಿ ಎಲ್ಲ ಪೊಲೀಸರಿಗೂ ಮನೆ ನೀಡಲಾಗುವುದು ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ತಿಳಿಸಿದರು.
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹಿಂದೆ ಗೃಹ ಸಚಿವನಾಗಿದ್ದಾಗ ಪೊಲೀಸರಿಗೆ ಗೃಹ ಯೋಜನೆ ಜಾರಿಗೆ ತಂದಿದ್ದೆ. ಎಲ್ಲ ಪೊಲೀಸರಿಗೂ ಮನೆ ನೀಡಬೇಕೆನ್ನುವುದು ನಮ್ಮ ಉದ್ದೇಶ. ಈಗಾಗಲೇ ಸುಮಾರು 15 ಸಾವಿರ ಮನೆ ಕಟ್ಟಿದ್ದೇವೆ. ಅಲ್ಲಿ ಪೊಲೀಸರು ವಾಸವಾಗಿದ್ದಾರೆ. ಈ ಯೋಜನೆ ಮುಂದುವರಿಸಲಾಗುವುದು ಎಂದರು.
ಬೆಳಗಾವಿ ಮಹಿಳೆ ವಿವಸ್ತ್ರ ಪ್ರಕರಣ ಮುಂದಿಟ್ಟುಕೊಂಡು ಸತ್ಯಶೋಧನೆ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ನಮ್ಮ ಸರಕಾರ ಎಲ್ಲ ಕ್ರಮ ಕೈಗೊಂಡಿದೆ. ಎಸ್‌ಪಿ, ಕಮಿಷನರ್ ಜತೆಗೆ ಕೇಂದ್ರದ ತಂಡ ತನಿಖೆ ಮಾಡಿದೆ. ರಾಜಕೀಯಕ್ಕಾಗಿ ಬಿಜೆಪಿ ನಾಲ್ಕೈದು ಸಂಸದರನ್ನು ಕಳುಹಿಸಿದೆ. ಈ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿದೆ. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂ ಧಿಸಿದ್ದು, ಘಟನ ಸ್ಥಳಕ್ಕೆ ನಾನು ಸಹ ಭೇಟಿ ನೀಡಿದ್ದೇನೆ. ಈ ಎಲ್ಲದರ ಮಧ್ಯೆ ಬಿಜೆಪಿ ಸತ್ಯಶೋಧನೆ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದರು. ಇಲಾಖೆಯಿಂದ ಅಗತ್ಯ ಕ್ರಮ
ಕೋಲಾರದಲ್ಲಿ ಮಕ್ಕಳನ್ನು ಶೌಚ ಗುಂಡಿಗೆ ಇಳಿಸಿದ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಶುಚಿಗೊಳಿಸಲು ತಂತ್ರಜ್ಞಾನ ಬಂದಿದೆ. ಮಕ್ಕಳನ್ನು ಶೌಚ ಗುಂಡಿಗೆ ಇಳಿಸಿದ್ದು
ತಪ್ಪು. ಇಂತಹ ಕೆಲಸ ಅಮಾನ ವೀಯ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ಆತಂಕದ ನಡುವೆ ಹೊಸ ವರ್ಷಾಚರಣೆ ಬರುತ್ತಿದ್ದು, ಸದ್ಯದಲ್ಲೇ ಅಧಿಕಾರಿಗಳ ಸಭೆ ನಡೆಸಲಾಗುವುದು. ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ದತ್ತ ಜಯಂತಿ ಶಾಂತಿಯುತವಾಗಬೇಕು. ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
Related Articles
ಪೊಲೀಸರ ಆತ್ಮಸ್ಥೈರ್ಯ ಎಂದಿಗೂ ಕುಗ್ಗುವುದಿಲ್ಲ. ಸಂಯಮದಿಂದ ವರ್ತಿಸುತ್ತಾರೆ. ಎಲ್ಲದಕ್ಕೂ ಮಿಗಿಲಾಗಿ ಕರ್ತವ್ಯ ಮೇಲು ಎಂದು ತಿಳಿದಿದ್ದಾರೆ. ಪೊಲೀಸರು ಮತ್ತು ವಕೀಲರ ನಡುವಿನ ಸಂಘರ್ಷ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಈ ಕುರಿತು ಹೆಚ್ಚು ಮಾತನಾಡುವುದಿಲ್ಲ. ಶಿಸ್ತಿನ ಇಲಾಖೆಗೆ ತೊಡಕು ಉಂಟಾಗಬಾರದು. ಪೊಲೀಸರು ಎಲ್ಲ ಸಂದರ್ಭದಲ್ಲೂ ಎಲ್ಲವನ್ನೂ ಎದುರಿಸಲು ಸಮರ್ಥರಿರುತ್ತಾರೆ ಎಂದು ಸಚಿವ ಪರಮೇಶ್ವರ ತಿಳಿಸಿದರು.
Advertisement
ದತ್ತಪೀಠಕ್ಕೆ ಪರಮೇಶ್ವರ್ ಭೇಟಿ; ಸಭೆಚಿಕ್ಕಮಗಳೂರು: ದತ್ತಪೀಠ ನೋಡಿರಲಿಲ್ಲ. ಅದಕ್ಕೆ ಬಂದಿದ್ದೇನೆ. ಇದು ಆಕಸ್ಮಿಕ ಭೇಟಿ ಅಷ್ಟೇ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್ ತಿಳಿಸಿದರು. ಮಂಗಳವಾರ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾಕ್ಕೆ ಭೇಟಿ ನೀಡಿ ದತ್ತ ಜಯಂತಿ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಇದೇ ಮೊದಲ ಬಾರಿಗೆ ಗೃಹ ಸಚಿವರೊಬ್ಬರು ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ದರ್ಗಾಕ್ಕೆ ಭೇಟಿ ನೀಡಿದ್ದು, ಕುತೂಹಲ ಮೂಡಿಸಿದೆ. ಈ ವೇಳೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ, ಪಶ್ಚಿಮ ವಲಯ ಐಜಿಪಿ ಡಾ|ಚಂದ್ರಗುಪ್ತ, ಎಸ್ಪಿ ಡಾ| ವಿಕ್ರಮ್ ಅಮಟೆ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಇದ್ದರು.