Advertisement

ವಾರಾಹಿ ಖಾಲಿ ಹುದ್ದೆ ಭರ್ತಿಗೆ ಕ್ರಮ: ಡಿಕೆಶಿ

06:00 AM Jul 11, 2018 | Team Udayavani |

ಕುಂದಾಪುರ: ವಾರಾಹಿ ನೀರಾವರಿ ಯೋಜನೆಯಡಿ ಮಂಜೂರಾದ ವಿವಿಧ ದರ್ಜೆಯ ಎಂಜಿನಿಯರ್‌ ಹುದ್ದೆಗಳ ಪೈಕಿ ಅನೇಕ ಹುದ್ದೆಗಳು ಖಾಲಿಯಿದ್ದು ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Advertisement

ಅವರು ವಿಧಾನಪರಿಷತ್ತಿನಲ್ಲಿ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರು ಸೋಮವಾರ ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ವಾರಾಹಿ ಏತ ನೀರಾವರಿ ಯೋಜನೆಯ ಅಂದಾಜು ಮೊತ್ತ 350 ಕೋ.ರೂ.ಗಳಾಗಿದ್ದು 2018ರ ಜ.8ರಂದು ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಮಾಡಿದ್ದರು. ಜೂ.8ರಂದು ಟೆಂಡರ್‌ ವಹಿಸಲಾಗಿದ್ದು 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಮೂಲ ಯೋಜನಾ ವರದಿಯಂತೆ ವಾರಾಹಿ ಏತ ನೀರಾವರಿ ಯೋಜನಾ ಕಾಮಗಾರಿಗಳ ಮೂಲಕ ಉಡುಪಿ ತಾಲೂಕಿನ 28 -ಹಾಲಾಡಿ, ಆವರ್ಸೆ, ವಂಡಾರು, ಶಿರಿಯಾರ, ಶಿರಿಯಾರ -21, ಹೆಗ್ಗುಂಜೆ, ಬಿಲ್ಲಾಡಿ, ಯಡ್ತಾಡಿ, ಯಡ್ತಾಡಿ -22, ಕಾವಾಡಿ -18, ಅಚಾÉಡಿ-20, ಶಿರೂರು, ಕಾಡೂರು, ನಾಡೂರು ಗ್ರಾಮಗಳ 2,723 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ. 38 ವರ್ಷಗಳ ಹಿಂದೆ ಶಂಕುಸ್ಥಾಪನೆಯಾದ ವಾರಾಹಿ ನೀರಾವರಿ ಯೋಜನೆಯಡಿ ಬಲದಂಡೆ ಯೋಜನೆಗೆ ಸಂಬಂಧಿಸಿ ಹಂತ ಹಂತವಾಗಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಬಲದಂಡೆ ಯೋಜನೆಯಡಿ ಬರುವ ಹೊಸಂಗಡಿ, ಸಿದ್ದಾಪುರ, ಉಳ್ಳೂರು-74, ಶಂಕರ ನಾರಾಯಣ, ಕುಳ್ಳುಂಜೆ ಗ್ರಾಮಗಳಲ್ಲಿ ಹಾದು ಹೋಗುವ ವಾರಾಹಿ ಬಲದಂಡೆ ಸಾಮಾನ್ಯ ನಾಲಾ ಸರಪಳಿ 18 ಕಿಮೀ. ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಪೂರ್ಣಗೊಳಿಸಲಾಗಿದೆ. ವಾರಾಹಿ ಬಲದಂಡೆ ನಾಲಾ ಕಾಲುವೆ ಹೆಚ್ಚಾಗಿ ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತಿದ್ದು ಅರಣ್ಯ ಪ್ರದೇಶದ ತೀರುವಳಿ ಪಡೆದ ಅನಂತರ ಕಾಲುವೆ ನಿರ್ಮಾಣ ನಡೆಯಲಿದೆ ಎಂದು ಡಿಕೆಶಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next