Advertisement
ವಾಮಂಜೂರು, ಕಾವೂರು ಪರಿಸರದಲ್ಲಿ ಗೋವುಗಳನ್ನು ಸಾಕುವ ಹಲವು ಕುಟುಂಬಗಳಿದ್ದು, ಈ ಭಾಗದಲ್ಲಿಯೇ ಹೆಚ್ಚು ದನ ಕಳವು ನಡೆಯುತ್ತಿದೆ. ಇದರ ಹಿಂದೆ ಒಂದು ಜಾಲವೇ ಇದೆ. ದೂರುಗಳು ಬಂದಾಗ ಕೇಸು ದಾಖಲಿಸುವಂತೆ ಎಲ್ಲ ಠಾಣೆಗಳಿಗೆ ಸೂಚನೆ ನೀಡಲಾಗಿದೆ ಎಂದವರು ಸುದ್ದಿಗಾರರಿಗೆ ತಿಳಿಸಿದರು.ಉಳ್ಳಾಲ ಪೊಲೀಸರು ವಶಪಡಿಸಿಕೊಂಡ ಗೋಮಾಂಸ ಎಲ್ಲಿಂದ ಬಂತು, ಮಾಂಸಕ್ಕೆ ಗೋವುಗಳು ಎಲ್ಲಿಂದ ಸಿಕ್ಕಿದವು ಎನ್ನುವ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
ಕಾವೂರು, ವಾಮಂಜೂರು ಪರಿಸರದಲ್ಲಿ ನಡೆದ ದನ ಕಳವಿನಿಂದ ಸಂತ್ರಸ್ತರಾದ ಅನೇಕ ಮಂದಿ ಗುರುವಾರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕಾವೂರಿನ ಬೊಲ್ಪುಗುಡ್ಡೆ, ಬೋಂದೆಲ್, ಪಚ್ಚನಾಡಿ ಪರಿಸರದ ಕೆ. ಪ್ರಣಮ್ ಶೆಟ್ಟಿ, ಡೊಮಿನಿಕ್ ಸಲ್ಡಾನ್ಹಾ, ಅರುಣ್ ಸಲ್ಡಾನ್ಹಾ, ಪ್ರಕಾಶ್ ಪಿಂಟೊ, ಭವಾನಿ ಶಂಕರ್, ಶ್ರೀನಿವಾಸ್ ನಾಯ್ಕ, ಲಾರೆನ್ಸ್ ಮತ್ತಿತರರು ಮನವಿ ಅರ್ಪಿಸಿದರು. ವಿ.ಹಿಂ.ಪ.ದ ಶರಣ್ ಪಂಪ್‌ವೆಲ್ ಜತೆಗಿದ್ದರು. ಜಿಪಿಎಸ್ ಟ್ರಾನ್ಸ್‌ಫರ್ ಸಿಸ್ಟಂ
ರಾತ್ರಿ ವೇಳೆ ಓಡಾಡುವ ಶಂಕಾಸ್ಪದ ವ್ಯಕ್ತಿಗಳು ಮತ್ತು ವಾಹನಗಳ ಮೇಲೆ ಪೊಲೀಸರು ನಿಗಾ ವಹಿಸಿ ತಪಾಸಣೆ ನಡೆಸಬೇಕು, ದನ ಕಳವಿನ ಮಾಹಿತಿ ನೀಡಿದಾಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಬೇಕು, ದನ ಕಳವು ಪ್ರಕರಣಗಳಲ್ಲಿ ಸರಕಾರದಿಂದ ಪರಿಹಾರ ಒದಗಿಸಿಕೊಡಲು ಸರಕಾರಕ್ಕೆ ಶಿಫಾರಸು ಮಾಡುವುದು, ದೂರು ನೀಡಿದ ಕೂಡಲೇ ಎಫ್‌ಐಆರ್ ದಾಖಲಿಸುವುದು, ಗೋವುಗಳಿಗೆ ಜಿಪಿಎಸ್ ಟ್ರಾನ್ಸ್‌ಫರ್ ಸಿಸ್ಟಂ ಅಳವಡಿಸಲು ಸರಕಾರಕ್ಕೆ ಶಿಫಾರಸು ಮಾಡಬೇಕು ಮತ್ತಿತರ ಬೇಡಿಕೆಗಳನ್ನು ನಿಯೋಗ ಮುಂದಿಟ್ಟಿದೆ.