Advertisement

322 ಕೋಟಿ ರೂ. ಕ್ರಿಯಾ ಯೋಜನೆಗೆ ಜಿಪಂ ಅಸ್ತು

02:35 PM Aug 22, 2020 | Suhan S |

ಧಾರವಾಡ: 2020-21ನೇ ಸಾಲಿನ ಜಿಪಂನ 322.46 ಕೋಟಿ ಮೊತ್ತದ ವಾರ್ಷಿಕ ಕ್ರಿಯಾಯೋಜನೆಗೆ ಶುಕ್ರವಾರ ನಡೆದ ಸಾಮಾನ್ಯ  ಸಭೆಯಲ್ಲಿ ಅನುಮೋದನೆ ದೊರೆಯಿತು. ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ

Advertisement

ಕೆಂಪೇಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂಚಾಯತ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಟ್ಟಡ ನಿರ್ವಹಣೆ ಮತ್ತು ದುರಸ್ತಿ, ಹೊಸ ಪೂರೈಕೆ ಹಾಗೂ ವೇತನಕ್ಕೆ ಸೇರಿದ ವೆಚ್ಚ 4.27 ಕೋಟಿ ಹಾಗೂ ಜಿಪಂ ಕಚೇರಿ ನಿರ್ಮಾಣ ಹಾಗೂನಿರ್ವಹಣೆಯ 1.55 ಕೋಟಿ ರೂ. ವೆಚ್ಚದ  ಎರಡು ಯೋಜನೆಗಳಿಗೆ ತಾತ್ಕಾಲಿಕವಾಗಿ ಅನುಮೋದನೆ ತಡೆಹಿಡಿದಿರುವುದರಿಂದ ಸದ್ಯ 316.58 ಕೋಟಿ ರೂ.ಗಳ ಉಳಿದ ಎಲ್ಲ ಕ್ರಿಯಾ ಯೋಜನೆಗೆ ಅನುಮೋದನೆ ದೊರೆಯಿತು. ಈ ಕ್ರಿಯಾ ಯೋಜನೆಯಲ್ಲಿ 79.26 ಕೋಟಿ ರೂ. ವೇತನ ಅನುದಾನ, 243.19ಕೋಟಿ ರೂ. ವೇತನೇತರ ಅನುದಾನ ಒಳಗೊಂಡಿದೆ. ವೈದ್ಯಕೀಯ ಮತ್ತು  ಕುಟುಂಬ ಕಲ್ಯಾಣಕ್ಕೆ 46.63 ಕೋಟಿ ರೂ., ಶಿಕ್ಷಣ 171.85 ಕೋಟಿ ರೂ., ಕ್ರೀಡೆ 2.06 ಕೋಟಿ ರೂ., ಪ.ಜಾ., ಪ.ಪಂ., ಹಿಂದುಳಿದ ವರ್ಗಗಳು, ಅಲ್ಪ ಸಂಖ್ಯಾತರ ಕಲ್ಯಾಣ 67.27 ಕೋಟಿ ರೂ., ಸಸ್ಯ ಸಂಗೋಪನೆ 7.79 ಕೋಟಿ ರೂ., ಭೂಸೌರ, ಜಲ ಸಂರಕ್ಷಣೆ 2.52  ಕೋಟಿ ರೂ., ಪಶು ಸಂಗೋಪನೆ 4.58 ಕೋಟಿ ರೂ., ಅರಣ್ಯ 4.22 ಕೋಟಿ ರೂ., ಗ್ರಾಮೀಣಾಭಿವೃದ್ಧಿ 3.80 ಕೋಟಿ ರೂ., ಗ್ರಾಮೀಣ ಸಣ್ಣ ಉದ್ಯಮ 3.13 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.

ಕಳೆದ ವರ್ಷ 312.05 ಕೋಟಿ ರೂ. ಗಳಷ್ಟಿದ್ದ ಕ್ರಿಯಾ ಯೋಜನೆ ಈ ಬಾರಿ ಶೇ.3.34 ಹೆಚ್ಚಳವಾಗಿದೆ. ಇದಲ್ಲದೆ ಜಿಲ್ಲಾ ಪಂಚಾಯತಿಗಳ ಅನಿರ್ಬಂಧಿತ ಅನುದಾನ 5.11 ಕೋಟಿ ಹಾಗೂ 15ನೇ ಹಣಕಾಸು ಯೋಜನೆಯ 3.41 ಕೋಟಿ ರೂ. ಅನುದಾನದ ಕ್ರಿಯಾ ಯೋಜನೆಗೂ ಸಭೆ ಅನುಮೋದನೆ ನೀಡಿತು. ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಸಿಇಒ ಡಾ| ಬಿ.ಸಿ.ಸತೀಶ, ಉಪ ಕಾರ್ಯದರ್ಶಿ ಎಸ್‌.ಎಂ. ಕುಂದೂರ, ಯೋಜನಾ ನಿರ್ದೇಶಕ ಬಿ.ಎಸ್‌. ಮುಗನೂರಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next