ಹಿರೇಕೆರೂರ: ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ, ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ತಹಶೀಲ್ದಾರ್ ಆರ್.ಎಚ್ .ಭಾಗವಾನ್ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯ
ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಿಮಿತ್ತ ನಡೆದ ಎಂಸಿಸಿ ಹಾಗೂ ಸೆಕ್ಟರ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿಗಳ ಚುನಾವಣಾ ಸಿಬ್ಬಂದಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಚುನಾವಣಾ ಕಾರ್ಯ ನಿರ್ವಹಿಸಬೇಕು. ಚುನಾವಣಾ ಆಯೋಗ ಹಾಗೂ ಸರಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಕಾರ್ಯ ಮಾಡಬೇಕು. ಆ ಮೂಲಕ ಪ್ರತಿಶತ ಮತದಾನಕ್ಕೆ ಎಲ್ಲರೂ ಸೇರಿ ಪ್ರಯತ್ನಿಸಬೇಕು ಮತ್ತು ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಿದರು.
ಸೆಕ್ಟರ್ ಅಧಿಕಾರಿಗಳ ವಿವಿರ: ಕಚವಿ ಮತ್ತು ಸಾತೇನಹಳ್ಳಿ ಗ್ರಾಪಂಗೆ ಎಲ್. ಶಿದ್ಲಿಂಗಪ್ಪ-9840695249,
ಮಡ್ಲೂರ ಹಾಗೂ ಚಿಕ್ಕೋಣತಿ ಗ್ರಾಪಂ ಎಂ.ವಿ. ಮಂಜುನಾಥ-8277931841, ಚಿಕ್ಕೇರೂರ ಗ್ರಾಪಂ ಸಿ.ಎನ್. ರಂಗನಾಥ-9482371519, ಹಂಸಭಾವಿ ಗ್ರಾಪಂ ಮಹ್ಮದ ನದಾಫ-9480843451,ಚಿನ್ನಮುಳಗುಂದ, ಭೋಗಾವಿ ಮತ್ತು ಸುತ್ತಕೋಟಿ ಗ್ರಾಪಂ ಬಿ.ಬಸವಣ್ಣೆಪ್ಪ-9945121801, ಆಲದಗೇರಿ, ಅರಳಿಕಟ್ಟಿ ಹಾಗೂ ಅಬಲೂರ ಗ್ರಾಪಂ ನವೀನ ಕುಮಾರ-7624866102, ಬೆಟಕೇರೂರ ಹಾಗೂ ಯತ್ತಿನಹಳ್ಳಿ ಎಂ.ಕೆ ಗ್ರಾಪಂ ವಿ.ಎಸ್.ಹಿರೇಮಠ-9945857257, ಕೋಡ ಹಾಗೂ ತಾವರಗಿ ಗ್ರಾಪಂ ವಿಷ್ಣುಕಾಂತ-9449098548, ಬುರಡಿಕಟ್ಟಿ, ಚನ್ನಳ್ಳಿ ಹಾಗೂ ನಿಡನೇಗಿಲ ಗ್ರಾಪಂ ಪರಶುರಾಮ ನಾಗರಾಳ-8867255827 ಹಾಗೂ ಹಿರೇಕೆರೂರ ತಾಲೂಕ ಎಂ.ಸಿ.ಸಿ. ಅಧಿಕಾರಿಯಾಗಿ ಎ.ಟಿ.ಜಯಕುಮಾರ-9480868100 ಅಧಿ ಕಾರಿಗಳನ್ನು ನೇಮಕ ಮಾಡಿದ್ದು, ದೂರುಗಳಿಗಾಗಿ ಅವರನ್ನು ಸಂಪರ್ಕಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಪಂ ಇಒ, ಎಂಸಿಸಿ ಅಧಿಕಾರಿ ಎ.ಟಿ.ಜಯಕುಮಾರ ಸೇರಿದಂತೆ ಸೆಕ್ಟರ್ ಅಧಿಕಾರಿಗಳು ಹಾಜರಿದ್ದರು.