Advertisement

“Dengue ಪರೀಕ್ಷೆಗೆ ಹೆಚ್ಚು ಶುಲ್ಕ ಪಡೆದಲ್ಲಿ ಕ್ರಮ’: ಸಚಿವ ದಿನೇಶ್‌ ಗುಂಡೂರಾವ್‌

12:31 AM Jul 06, 2024 | Team Udayavani |

ಮಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚುತ್ತಿದ್ದು, ಡೆಂಗ್ಯೂ ಪರೀಕ್ಷೆ ದರ ಹೆಚ್ಚಳ ಕಂಡು ಬಂದರೆ ಖಾಸಗಿ ಆಸ್ಪತ್ರೆಗಳ ವಿರುದ್ಧ ಎಪಿಡೆಮಿಕ್‌ ಕಾಯ್ದೆ, ಕೆಪಿಎಂಇ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತೇವೆ. ಜತೆಗೆ ಲೈಸೆನ್ಸ್‌ ಅನ್ನೂ ರದ್ದು ಮಾಡಬೇಕಾಗಬಹುದು ಎಂದು ಆರೋಗ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

Advertisement

ಮಂಗಳೂರಿನಲ್ಲಿ ಶುಕ್ರವಾರ ಮಾಧ್ಯಮ ದೊಂದಿಗೆ ಮಾತನಾಡಿದ ಅವರು, ಡೆಂಗ್ಯೂ ಪ್ರಕರಣದಲ್ಲಿ ಸೂಕ್ತ ಚಿಕಿತ್ಸೆ ಕೊಡುವ ವ್ಯವಸ್ಥೆ ಆಗಿದೆ. ಇದು ವೈರಲ್‌ ಜ್ವರವಾಗಿದ್ದು, ಸಾವು ಸಂಭವಿಸದಂತೆ ತಡೆಯಬೇಕು ಎಂದರು.

ಗುಡ್ಡ ಕುಸಿತಕ್ಕೆ ಅವೈಜ್ಞಾನಿಕ
ಕಾಮಗಾರಿ ಕಾರಣ
ಮನೆ ಕಟ್ಟಲು ನಾವೇ ಗುಡ್ಡ ಅಗೆಯುತ್ತಿದ್ದೇವೆ. ಅದು ವೈಜ್ಞಾನಿಕ ವಾಗಿ ಇರದೇ ಮಳೆ ಬಂದಾಗ ಕುಸಿತವಾಗುತ್ತಿವೆ. ಇದು ನಾವೇ ಸೃಷ್ಟಿ ಮಾಡಿಕೊಂಡಿರುವ ಸಮಸ್ಯೆಯಾಗಿದೆ. ತಡೆಗೋಡೆ ಕಟ್ಟಲು ದೊಡ್ಡ ಅನುದಾನ ಬೇಕು. ಅದರ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ ಎಂದರು.

ಮೂಡ ಹಗರಣದಲ್ಲಿ ಸಿಎಂ ಪಾತ್ರವಿಲ್ಲ
ಮೂಡ ಹಗರಣ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಪೊನ್ನಣ್ಣ ಅವರು ಮುಖ್ಯಮಂತ್ರಿಯವರ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಮೂರು ಎಕ್ರೆ ಜಮೀನು ಅತಿಕ್ರಮಣ ಮಾಡಿ ಮೂಡ ಲೇಔಟ್‌ ನಿರ್ಮಿಸಿದೆ. ಭೂ ಸ್ವಾಧೀನ ಆಗದ ಜಾಗದಲ್ಲಿ ಲೇಔಟ್‌ ಕಟ್ಟಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲೇ ಇದು ಅಗಿದೆ. ಮೂಡ ಕೂಡ ತಪ್ಪು ಒಪ್ಪಿಕೊಂಡಿದೆ. ಮುಖ್ಯಮಂತ್ರಿ ಆಗಿದ್ದಾರೆಂಬ ಮಾತ್ರಕ್ಕೆ ಅವರು ತಮ್ಮ ಜಾಗವನ್ನು ಬಿಟ್ಟು ಕೊಡಬೇಕಾ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಕೋರ್ಟ್‌ಗೆ ಹೋಗಿ ಜಾಗ ವಾಪಸ್‌ ಕೇಳಬೇಕಿತ್ತು. ಆದರೂ ಅವರು ಬದಲಿ ಜಾಗ ಒಪ್ಪಿಕೊಂಡಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next